ವೀರ ಮದಕರಿ ನಾಯಕ ಚಿತ್ರದುರ್ಗ ಸಂಸ್ಥಾನದ ಬಗ್ಗೆ “Ask ಮೈಸೂರು” ಯೂಟ್ಯೂಬ್ ಚಾನೆಲ್ ನಲ್ಲಿ ತಿಳಿಯೋಣ ಬನ್ನಿ
ಪುರುಷೋತ್ತಮ್ ಅಗ್ನಿ...
.
.
ಚಿತ್ರದುರ್ಗದ ಕಲ್ಲಿನ ಕೋಟೆ।
ಸಿಡಿಲಿಗೂ ಬೆಚ್ಚದ ಉಕ್ಕಿನಕೋಟೆ।
ಮದಕರಿ ನಾಯಕರಾಳಿದ ಕೋಟೆ।
ವೀರವನಿತೆ ಒನಕೆ ಓಬವ್ವ ಸಾಹಸ ಮೆರೆದ ಕೋಟೆ।
.
.
ತ .ರಾ ಸುಬ್ಬರಾಯರು ಗತವೈಭವವನ್ನ ಬರೆದರು ದುರ್ಗಾಸ್ತಮಾನದಲ್ಲಿ.
ಮುರುಘರಾಜೇಂದ್ರರು ಮಠವ ಕಟ್ಟಿದರಿಲ್ಲಿ.
ತಾಯಿ ಉಚ್ಚಂಗಿ ಏಕನಾಥೇಶ್ವರಿಯ ಆಶೀರ್ವಾದದಲ್ಲಿ.
ಕಲ್ಲುಬಂಡೆ ಗುಡ್ಡೆಗಳ ನಾಡನ್ನು ರಕ್ಷಿಸಿ ವೀರಾವೇಶದಿಂದ ಧರ್ಮದ ಹಾದಿಯಲ್ಲಿ ಚಿತ್ರದುರ್ಗವನ್ನಾಳಿದ ಪಾಳೇಗಾರರ ವಂಶದ ಕುರುಹು ಕಾಣಸಿಗುವುದಿಲ್ಲಿ.
ಅಂತಹ ಅಭೇದ್ಯ ಚಿತ್ರದುರ್ಗದ ಸಂಸ್ಥಾನದ ಹದಿನಾರನೆ ಶತಮಾನದ ಕರಾಳ ಇತಿಹಾಸ ದಲ್ಲಿ ಸಾಮ್ರಾಜ್ಯವಿಸ್ತರಣೆ ಮತ್ತು ಅಧಿಕಾರ ದಾಹಕ್ಕಾಗಿ ರಕ್ತವನ್ನು ಹೀರಲು ಬಂದ ರಕ್ಕಸರಂತೆ ಹರಿಹಾಯ್ದ ಹೈದರಾಲಿ ಸುಲ್ತಾನರ ವಿರುದ್ಧ ಹೋರಾಡಿದ ಗಂಡುಗಲಿ ರಾಜವೀರ ಮದಕರಿ ನಾಯಕ ಅವರ ರೋಚಕ ಇತಿಹಾಸ ಮತ್ತು ದಾರುಣ ಅಂತ್ಯ ಸಮಾಜಕ್ಕೆ ಅಷ್ಟಿಷ್ಟು ಗೊತ್ತಿದ್ದರೂ ಈಗ ಚಿತ್ರದುರ್ಗ ಸಂಸ್ಥಾನದ ಪಾಳೇಗಾರ ವಂಶದ ಮನೆತನದವರನ್ನು ಹುಡುಕಿಕೊಂಡು ಹೊರಟ “Ask Mysuru” ತಂಡ ವೀರ ಮದಕರಿ ನಾಯಕ ರವರ 7ನೇ ತಲೆಮಾರು ಅವರ ಅಜ್ಜ ನವರಾದ ಪರಾಕ್ರಮಿ ಅತ್ಯುತ್ತಮ ರೋಚಕ ಪಾಳೇಗಾರರಾಗಿದ್ದ ಭಿಚ್ಚುಗತ್ತಿ ಭರಮಪ್ಪನಾಯಕ ರವರ 9ನೇ ತಲೆಮಾರಿನ ಖಾಸಾ ವಂಶಸ್ಥರೆಂದೆ ಪರಿಚಿತರಾದ ಅವರ ಹೆಸರು ಕೂಡ “ರಾಜ ಶ್ರೀ ಮದಕರಿ ನಾಯಕರವರು” ಎಂದೇ ಶ್ರೀಯುತರು ಚಿತ್ರದುರ್ಗದಲ್ಲಿ ನೆಲೆಸಿರುವ ವಿಷಯ ತಿಳಿದು ನಮ್ಮ “Ask Mysuru” ತಂಡವು ಚಿತ್ರದುರ್ಗಕ್ಕೆ ತೆರಳಿ ಅವರ ಸಂದರ್ಶನವನ್ನು ಕೈಗೊಂಡು ಮತ್ತು ಇದಕ್ಕೆ ಪೂರಕವಾದ ದಾಖಲೆಗಳೊಂದಿಗೆ ನಾಡಿನ ಜನತೆಗೆ ಪ್ರಸ್ತುತ ಪಡಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ .
“ಇವರು ಹೇಗೆ ವೀರ ಮದಕರಿ ನಾಯಕರವರ ಖಾಸಾ ವಂಶಕ್ಕೆ ಸೇರಿದವರೆಂಬುದನ್ನು ಅವರ ಬಳಿ ಇರುವಂತಹ ಕೈಫತ್ ಮತ್ತಿತರ ದಾಖಲೆಗಳ ಮೂಲಕ ಸಮಾಜದ ಮುಂದೆ ತೆರೆದಿಡುವ ಪ್ರಯತ್ನವನ್ನು, ಹಾಗೆ ಈ ಪಾಳೆಗಾರರ ಕೆಲವು ರೋಚಕ ಇತಿಹಾಸಗಳನ್ನು ಅವರಿಂದಲೇ ತಿಳಿದುಬಂದಿರುತ್ತೇವೆ ..”
ನೀವು ಈ ಇತಿಹಾಸದ ರೋಚಕವಾದಂತಹ ಸಂದರ್ಶನವನ್ನು ಅಷ್ಟೇ ಅಲ್ಲದೆ ರಾಜ ಮನೆತನಗಳ ವಂಶಸ್ಥರ ಬಗ್ಗೆ, ಐತಿಹಾಸಿಕ ಹಂಪಿ ಸಾಮ್ರಾಜ್ಯ ಮತ್ತು ಮೈಸೂರಿನ ಒಡೆಯರ ಸಂಸ್ಥಾನ ಅಷ್ಟೇ ಅಲ್ಲದೆ ಇನ್ನೂ ಅನೇಕ ರೋಚಕ ವಾದಂತಹ ಇತಿಹಾಸವನ್ನು ವೀಕ್ಷಿಸಲು ನಮ್ಮ “Ask Mysuru” ಯೂಟ್ಯೂಬ್ ಚಾನೆಲ್ ನ್ನು Subscribe ಮಾಡಿ ಹಾಗೂ ಬೆಂಬಲಿಸುತ್ತಾ ಪ್ರೋತ್ಸಾಹಸಿ ಇಂದು ಸಹೃದಯಿ ವೀಕ್ಷಕರಲ್ಲಿ ಕೇಳಿಕೊಳ್ಳುತ್ತೇವೆ.