ಬೆಳವಾಡಿ ಶಾಲೆಯಲ್ಲಿ ತರಗತಿ ಕೊಠಡಿ ನವೀಕರಣ, ಕುಡಿಯುವ ನೀರಿನ ವ್ಯವಸ್ಥೆ
ಆರ್ಪಿಜಿ ಫೌಂಡೇಶನ್ ಸಿಎಸ್ಆರ್ ಉಪಕ್ರಮಕ್ಕೆ ಚಾಲನೆ ಮೈಸೂರು, ಫೆ. 6: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ಆರ್ಪಿಜಿ ಫೌಂಡೇಶನ್ನ ಸಿಎಸ್ಆರ್ (ಸಮುದಾಯ ಅಭಿವೃದ್ಧಿ) ಉಪಕ್ರಮದಡಿ, ಕೆಇಸಿ ಏಷಿಯನ್ ಕೇಬಲ್ಸ್ ಲಿಮಿಟೆಡ್ನ ಮೈಸೂರು ಘಟಕವು ಬೆಳವಾಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂರು ತರಗತಿ ಕೊಠಡಿಗಳನ್ನು ನವೀಕರಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಾಪಿಸಿದೆ. ಈ ಸೌಲಭ್ಯಗಳನ್ನು ಇತ್ತೀಚೆಗೆ ಉದ್ಘಾಟಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸಂತೋಷ ಮೂಡಿಸಿದೆ. ನವೀಕರಿಸಲಾದ ತರಗತಿ ಕೊಠಡಿಗಳು ಸುಮಾರು 90 ವಿದ್ಯಾರ್ಥಿಗಳಿಗೆ ಉತ್ತಮ ಮತ್ತು ಆರಾಮದಾಯಕ ಕಲಿಕಾ ವಾತಾವರಣ ಒದಗಿಸಲಿವೆ. ಹಳೆಯದಾಗಿ ಬಳಕೆಯಲ್ಲಿದ್ದ ಕೊಠಡಿಗಳನ್ನು ದುರಸ್ತಿ ಮಾಡಿ, ಹೊಸ ಬಣ್ಣ ಬಳಸಿ, ಬೆಳಕು ಮತ್ತು ಗಾಳಿಯ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಇದರ ಜೊತೆಗೆ ಶಾಲಾ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಾಪಿಸಿರುವುದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯಕರ ಪರಿಸರ ಕಲ್ಪಿಸಲಾಗಿದೆ. ಈ ಸೌಲಭ್ಯಗಳನ್ನು ಮೈಸೂರು ಮಹಾನಗರ ಪಾಲಿಕೆ...












