ಪ್ರೇಮಿಗಳ ದಿನ ದುರಂತ: ಪತ್ನಿಯನ್ನು ಕೊಂದು ದಾರಿ ತಪ್ಪಿಸಲು ಯತ್ನಿಸಿದ ಪತಿ
ಪ್ರೇಮಿಗಳ ದಿನದಂದೇ ಪತ್ನಿ ಹತ್ಯೆ: ದರೋಡೆ ನಾಟಕ ರಚಿಸಿದ ಚಾರ್ಟರ್ಡ್ ಅಕೌಂಟೆಂಟ್ ಬಂಧನ ಹರಿಯಾಣ, ಫೆಬ್ರವರಿ 18: ಪ್ರೇಮಿಗಳ ದಿನವನ್ನು ಆಚರಿಸಲು ಹೊರಟಿದ್ದ ದಂಪತಿಯ ಬದುಕು ಕ್ಷಣಾರ್ಧದಲ್ಲಿ ದುರಂತವಾಗಿ ತಿರುಗಿದ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪತಿ ತನ್ನ ಪತ್ನಿಯನ್ನು ಊಟಕ್ಕೆ ಕರೆದುಕೊಂಡು ಹೋಗಿ ಬಳಿಕ ಕತ್ತು ಸೀಳಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣವನ್ನು ಝಜ್ಜರ್ ಪೊಲೀಸರು ಕೇವಲ ೧೮ ಗಂಟೆಗಳಲ್ಲೇ ಭೇದಿಸಿರುವುದು ಗಮನಾರ್ಹವಾಗಿದೆ. ತೀರ್ಥಹಳ್ಳಿಯಲ್ಲಿ ಭೀಕರ ದಾಳಿ: ಪ್ರೀತಿ ಒಪ್ಪದಿದ್ದಕ್ಕೆ ಯುವತಿಗೆ ಇರಿತ ಮಾಹಿತಿಯ ಪ್ರಕಾರ, ಬಹದ್ದೂರ್ಗಢ ಪ್ರದೇಶದಲ್ಲಿ ನಡೆದ ಈ ಘಟನೆ ಮೊದಲಿಗೆ ದರೋಡೆ ಪ್ರಯತ್ನದ ವೇಳೆ ನಡೆದ ಹತ್ಯೆ ಎಂದು ಕಾಣಿಸಿಕೊಂಡಿತ್ತು. ಭಾನುವಾರ ರಾತ್ರಿ ಸುಮಾರು11 ಗಂಟೆಯ ವೇಳೆಗೆ ಗುರುಗ್ರಾಮದಲ್ಲಿ ಉದ್ಯೋಗದಲ್ಲಿದ್ದ ಅನ್ಶುಲ್ ಧವನ್ ಎಂಬ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ, ಅಪರಿಚಿತರು...










