ಜನಮಾನಸದ ನಿತ್ಯ ಚಾಂಪಿಯನ್ ಶ್ರೀ ಸಿದ್ದರಾಮಯ್ಯ – ಡಾ. ಬಿಜೆವಿ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ 17ನೇ ದಾಖಲೆ ಬಜೆಟ್ ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಪ್ರಾದೇಶಿಕ ಅಸಮಾತೋಲನವನ್ನು ನಿವಾರಣೆ ಮಾಡಲು ವೈಜ್ಞಾನಿಕ ನೆಲಗಟ್ಟಿನ ಗಟ್ಟಿತನದ ಬಜೆಟ್. ಕರ್ನಾಟಕದ ಸರ್ಕಾರದ ಅಭಿವೃದ್ಧಿಯ ಪರ ಯೋಜನೆ ಗಳಿಂದಾಗಿ 2025 -26 ರಲ್ಲಿ ಕರ್ನಾಟಕದ ಜಿಎಸ್‌ಡಿಪಿ 8.1 % ಬೆಳವಣಿಗೆಯು ರಾಷ್ಟ್ರೀಯ ಬೆಳವಣಿಗೆ ದರವಾದ 7.4 % ಗಿಂತ ಹೆಚ್ಚಾಗಿದೆ. ಬಜೆಟ್ ಸಂದರ್ಭದಲ್ಲಿ ಚೊಂಬು ಹಿಡಿದು ಪ್ರತಿಭಟನೆ ಆದಿ ತುಳಿದ ಬಿಜೆಪಿಯ ಪ್ರತಿಪಕ್ಷ ನಾಯಕರು ಇದಕ್ಕೆ ವೈಜ್ಞಾನಿಕ ಉತ್ತರ ನೀಡಲಿ. 4.48.004 ಲಕ್ಷ ಕೋಟಿ ಈ ಸಾಲಿನ ಒಟ್ಟು ಬಜೆಟ್ ನಲ್ಲಿ, 38, 455 ಕೋಟಿ ಈ ಬಾರಿ ಹೆಚ್ಚುವರಿ ಬಜೆಟ್ ಆಗಿದೆ. ಆದ್ದರಿಂದ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಇಲಾಖೆಯ ಸಮಗ್ರ ವರ್ಗೀಕರಣದ ವರದಿ ಅನುಸಾರ ಜಿಎಸ್ಟಿ ಹಣ ಕೇಂದ್ರ ಪೂರ್ಣಪ್ರಮಾಣದಲ್ಲಿ ನೀಡಿಲ್ಲವಾದರೂ , ಭಾರತದಲ್ಲಿ ಕರ್ನಾಟಕ ಜಿಎಸ್ಟಿ ಹಣ ಸಂಗ್ರಹದಲ್ಲಿ ಎರಡನೇ...












