Latest News

Latest News

20 ಲಕ್ಷ ಮೌಲ್ಯದ ಮೊಬೈಲ್‌ಗಳ ರಿಕವರಿ: ಪೊಲೀಸರ ವಿಶೇಷ ಕಾರ್ಯಾಚರಣೆ ಫಲ 220 ಮೊಬೈಲ್‌ಗಳು ವಶ

ಮೈಸೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮೈಸೂರು ನಗರ ಪೊಲೀಸರು, ರೂಢಿಗತ ಗಾಂಜಾ ಪೆಡ್ಲರ್ ಇರ್ಫಾನ್ ಪಾಷ...
Latest News

ಮೇ 01.ರಂದು ಅರ್ಥಪೂರ್ಣವಾಗಿ ಭಗವಾನ ಬುದ್ಧ ಜಯಂತಿ ಆಚರಣೆ – ಡಾ. ಪಿ ಶಿವರಾಜು

ಮೈಸೂರು ಏಪ್ರಿಲ್ 7:- ಮೇ 01.ರಂದು ಅರ್ಥಪೂರ್ಣವಾಗಿ ಭಗವಾನ ಬುದ್ಧ ಅವರ ಜಯಂತಿಯನ್ನು ನಗರದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಭಗವಾನ ಬುದ್ಧ ಜಯಂತಿ ,ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ ಎಂದರು. ಭಗವಾನ ಬುದ್ಧ ಜಯಂತಿಯನ್ನು ಮೇ 01.ರಂದು ಬೆಳಗ್ಗೆ 11:30 ಗಂಟೆಗೆ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವೇದಿಕೆ ಮೇಲೆ ಗೀತಾ ಗಾಯನ ಏರ್ಪಡಿಸಲಾಗುವುದು. ಸಮುದಾಯದ ಮುಖಂಡರ ಸಲಹೆಯಂತೆ ದಿವ್ಯ ಸಾನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿ ಯನ್ನು ಆಹ್ವಾನಿಸಲಾಗುವುದು ಎಂದರು....
Latest News

ಪಿರಿಯಾಪಟ್ಟಣದ ಸಿನಿ ಪರಂಪರೆ ನೆನೆಸಿದ ದುನಿಯಾ ವಿಜಯ್  : ಪುಟ್ಟಣ್ಣ ಕಣಗಾಲ್ ನೆಲಕ್ಕೆ ದುನಿಯಾ ವಿಜಯ್ ಗೌರವ

ಪಿರಿಯಾಪಟ್ಟಣ: ತಾಲೂಕು ಸಿನಿಮಾ ರಂಗಕ್ಕೆ ಪುಟ್ಟಣ್ಣ ಕಣಗಾಲ್ ರಂತಹ ಮಹಾನ್ ನಿರ್ದೇಶಕರನ್ನು ನೀಡಿದ ನೆಲವಾಗಿದೆ ಎಂದು ಚಲನಚಿತ್ರ ನಟ ದುನಿಯಾ ವಿಜಯ್ ಹೇಳಿದರು. ಪಟ್ಟಣದಲ್ಲಿ ನಡೆದ ಪ್ರೀಮಿಯರ್ ಲೀಗ್ 9ನೇ ಸೀಸನ್ “ಪುನೀತ್ ರಾಜಕುಮಾರ್ ಕಪ್” ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮುಂತಾದ ಮಹನೀಯರ ಪುಣ್ಯಭೂಮಿ ಎಂದರು. ಇಂದಿನ ಯುವಕರು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು. ಯುವಕರು ಇಂತಹ ದುಷ್ಪ್ರವೃತ್ತಿಗಳಿಂದ ದೂರವಿದ್ದು ಕ್ರೀಡೆಗಳತ್ತ ಹೆಚ್ಚಿನ ಗಮನ ಹರಿಸಿ ಉತ್ತಮ ಸಾಧನೆ ಮಾಡಬೇಕು. ಅಕ್ರಮ ಮಾದಕ ದ್ರವ್ಯಗಳ ಮಾರಾಟದ ವಿರುದ್ಧ ಸಮಾಜವೇ ಒಟ್ಟಾಗಿ ಧ್ವನಿ ಎತ್ತಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಮೈಮೂಲ್ ಮಾಜಿ ಅಧ್ಯಕ್ಷ ಪಿ.ಎಂ....
Latest News

ಏಪ್ರಿಲ್ 19 ರಂದು ಭಕ್ತಾದಿಗಳಿಂದ ಆರು ಕೋಟಿ ರಾಮನಾಮ ಜಪ ಹಾಗೂ ರಾಮ ತಾರಕ ಹೋಮ

ಮೈಸೂರು: ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹ ಸಂಸ್ಥಾನ ಶ್ರೀ ಮದುತರದಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳರವರ ಶ್ರೀ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಅಭಿವೃದ್ಧಿ ಹಿಂದೂ ಸಮಾಜದ ಸಂಘಟನೆ ಹಾಗೂ ರಾಮ ರಾಜ್ಯದ ಸಕಾರಾತೆಗಾಗಿ ಭಕ್ತಾದಿಗಳಿಂದ ಆರು ಕೋಟಿ ರಾಮನಾಮ ಜಪವನ್ನು ಯಾದವಾಗಿರಿಯಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19 ರಂದು ಬೆಳಗ್ಗೆ 9 ಗಂಟೆಗೆ ರಾಮ ತಾರಕ ಹೋಮ ಹಾಗೂ 11 ಗಂಟೆಗೆ ಸಾಮೂಹಿಕ ರಾಮನಾಮ ಜಪವನ್ನು ಆಯೋಜಿಸಿದ್ದು ಅದರ ಪೋಸ್ಟರ್ ಅನ್ನು ಯಾದವ್ ಗಿರಿಯ ಕೆ ಆರ್ ಎಸ್ ರಸ್ತೆಯಲ್ಲಿರುವ ಶ್ರೀ ಉಸಿರಾಜು ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷರಾದ ಎನ್ ಎಂ ನವೀನ್ ಕುಮಾರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಇಂತಹ ಧಾರ್ಮಿಕ ಕಾರ್ಯಕ್ರಮಕ್ಕೆ ಜಾತ್ಯತೀತ ಪಕ್ಷತೀತವಾಗಿ...
Latest News

ತಂದೆ ಮಗನ ಲಾಕಪ್ ಡೆತ್ ಪ್ರಕರಣ: 9 ಪೊಲೀಸರಿಗೆ ಮರಣದಂಡನೆ : ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಮಹತ್ವದ ತೀರ್ಪು

ಚೆನ್ನೈ, ಏಪ್ರಿಲ್ 6: 2020ರಲ್ಲಿ ತಮಿಳುನಾಡಿನ ಸಾತಂಕುಲಂ ನಲ್ಲಿ ನಡೆದ ತಂದೆ-ಮಗನ ಲಾಕಪ್ ಡೆತ್ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದ್ದ ದುರ್ಘಟನೆ ಆಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸುಮಾರು ಆರು ವರ್ಷಗಳ ನಂತರ ಮದ್ರಾಸ್ ಹೈಕೋರ್ಟ್ (Madras High Court) ಮಹತ್ವದ ಹಾಗೂ ಕಠಿಣ ತೀರ್ಪು ನೀಡಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದ 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿದೆ. ನ್ಯಾಯಾಲಯ ಈ ಪ್ರಕರಣವನ್ನು “ಅತ್ಯಂತ ಅಪರೂಪದ ಅಪರಾಧ” ಎಂದು ಪರಿಗಣಿಸಿದ್ದು, ಪೊಲೀಸ್ ಅಧಿಕಾರದ ದುರುಪಯೋಗ ಮತ್ತು ಮಾನವೀಯತೆ ಕಳೆದುಕೊಂಡ ಕ್ರೂರ ವರ್ತನೆಯ ಪರಾಕಾಷ್ಠೆ ಎಂದು ಕಟುವಾಗಿ ಟೀಕಿಸಿದೆ. ಈ ತೀರ್ಪು ಕೇವಲ ಶಿಕ್ಷೆಯಷ್ಟೇ ಅಲ್ಲ, ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಪುನಃ ಬಲಪಡಿಸುವ ಮಹತ್ವದ ಘಟ್ಟವಾಗಿಯೂ ಪರಿಗಣಿಸಲಾಗಿದೆ. ಘಟನೆಯ ಮೂಲಕ್ಕೆ ಹೋಗುವುದಾದರೆ, 2020ರ ಜೂನ್ ತಿಂಗಳಲ್ಲಿ ಕೋವಿಡ್-19 ಲಾಕ್ಡೌನ್ ನಿಯಮಗಳು ಕಠಿಣವಾಗಿದ್ದ ಸಮಯದಲ್ಲಿ ವ್ಯಾಪಾರಿ ಪಿ. ಜಯರಾಜ್...
Latest News

ಮುಂಡೂರಿನಲ್ಲಿ ಶ್ರೀ ಮಂಡವೇಶ್ವರಿ ಅಮ್ಮನವರ ಓಕಳಿ ಹಬ್ಬ ನಾಳೆ ಭರ್ಜರಿ ಜಾತ್ರೆ

ವರದಿ :- ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ.ಏ. 06:- ಇತಿಹಾಸ ಪ್ರಸಿದ್ಧ ದುರ್ಗಾಪರಮೇಶ್ವರಿಯ ಪ್ರತಿರೂಪ ಶ್ರೀ ಮಂಡವೇಶ್ವರಿ ಅಮ್ಮನವರ ಓಕಳಿ ಹಬ್ಬ ಮತ್ತು ಜಾತ್ರೋತ್ಸವ ನಾಳೆ ಮಂಗಳವಾರ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಲಿದ್ದು ಈ ಜಾತ್ರಾ ಮಹೋತ್ಸವಕ್ಕೆ ರಾಜಕೀಯ ಮುಖಂಡರು ಅತಿಥಿ ಗಣ್ಯರು ಆಗಮಿಸಲಿದ್ದು ಈ ಹಬ್ಬಕ್ಕೆ ಭಕ್ತಾದಿಗಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮುಂಡೂರು ಗ್ರಾಮದ ಮುಖಂಡ ಚಾಮುಂಡೇಶ್ವರಿ ಬಾರ್ ಮಾಲೀಕ ಮನು ಗೌಡ ಮನವಿ ಮಾಡಿದ್ದಾರೆ. ಅವರು ಪತ್ರಿಕಾ ಹೇಳಿಕೆ ನೀಡಿ ಹಿಂದೂ ಸಂಪ್ರದಾಯದ ವರ್ಷದ ಮೊದಲ ಹಬ್ಬ ಯುಗಾದಿಯ ನಂತರ ನಡೆಯುವ ಮೊದಲನೇ ಹಬ್ಬವು ಸಾಲಿಗ್ರಾಮ ತಾಲೂಕಿನ ಮುಂಡೂರು ಗ್ರಾಮದ ಶ್ರೀ ಮಂಡವೇಶ್ವರೀ ಅಮ್ಮನವರ ಜಾತ್ರೆ ಮತ್ತು ಓಕಳಿ ಹಬ್ಬ ಬಹಳ ಪವಿತ್ರವಾದದ್ದು ಹಾಗೂ ಮುಂಗಾರು ಮಳೆಯ ಮುನ್ಸೂಚನೆಯನ್ನು ನೀಡುವ ಈ ಶಕ್ತಿ ದೇವತೆಯ ಹಬ್ಬ ಈ ಭಾಗಕ್ಕೆ ಅತ್ಯಂತ...
Latest News

ಮೈಸೂರುನಲ್ಲಿ ಡ್ರಗ್ಸ್ ಪ್ರಯೋಗಾಲಯ ಶಂಕೆ: ಎನ್‌ಸಿಬಿ ಸೂಚನೆ ಬಳಿಕ 14 ತಂಡಗಳೊಂದಿಗೆ ವ್ಯಾಪಕ ಶೋಧ ಕಾರ್ಯ

ಮೈಸೂರು: ನಗರದಲ್ಲಿ ಡ್ರಗ್ಸ್ ತಯಾರಿಕಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿರುವ ಶಂಕೆ ಗಟ್ಟಿಯಾಗುತ್ತಿದ್ದಂತೆ, ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಘೋಷಿಸಿ ಭಾರಿ ಮಟ್ಟದ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ರಾಷ್ಟ್ರೀಯಾ ಮಾದಕ ವಸ್ತು ನಿಯಂತ್ರಣಾ ದಳ (ಎನ್‌ಸಿಬಿ) ನೀಡಿದ ಖಚಿತ ಮಾಹಿತಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 14 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕೈಗಾರಿಕಾ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸರ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ಮೈಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗುಪ್ತ ಮಾಹಿತಿ ಸಿಕ್ಕಿತ್ತು. ಇದಕ್ಕೆ ಮತ್ತಷ್ಟು ಬಲ ನೀಡುವಂತೆ, ಇತ್ತೀಚೆಗೆ ನವದೆಹಲಿಯ ಎನ್‌ಸಿಬಿ ತಂಡವು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಪಿನಾಯಿಲ್ ತಯಾರಿಕಾ ಘಟಕವೊಂದರಲ್ಲಿ ಡ್ರಗ್ಸ್ ಪ್ರಯೋಗಾಲಯ ಇರುವುದನ್ನು ಪತ್ತೆಹಚ್ಚಿತ್ತು. ಈ ಬೆಳವಣಿಗೆ ಮೈಸೂರು ಪೊಲೀಸರಲ್ಲಿ ಎಚ್ಚರಿಕೆಯ ಗಂಟೆ ಮೊಳಗಿಸಿದಂತಾಗಿದೆ. ಇದಕ್ಕೂ ಮುನ್ನ, ಕಳೆದ ವರ್ಷ ಜುಲೈ ತಿಂಗಳಲ್ಲಿ ಮುಂಬೈ...
Latest News

ಮೈಸೂರು ಜಿಲ್ಲೆಯಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ದಾಳಿ: ₹2 ಲಕ್ಷ ವಶ, ಐವರು ಪೊಲೀಸ್ ವಶಕ್ಕೆ

ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಟಿ. ನರಸೀಪುರ ಪೊಲೀಸ್ ಠಾಣೆಯ ತಂಡ, ಜೂಜಾಟಕ್ಕೆ ಬಳಸಲಾಗುತ್ತಿದ್ದ ಹಣ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಪೊಲೀಸರ ಮಾಹಿತಿಯ ಪ್ರಕಾರ, ತಾಲೂಕಿನ ಒಂದು ಗ್ರಾಮದಲ್ಲಿ ಕೆಲ ದಿನಗಳಿಂದ ಗುಪ್ತವಾಗಿ ಇಸ್ಪೀಟ್ ಆಟ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಪೊಲೀಸರು ಸೂಕ್ತ ಯೋಜನೆ ರೂಪಿಸಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿದ್ದ ಐವರು ಜೂಜಾಟದಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದ್ದು, ಅವರನ್ನು ತಕ್ಷಣವೇ ವಶಕ್ಕೆ ಪಡೆಯಲಾಗಿದೆ. ಸ್ಥಳ ಪರಿಶೀಲನೆ ವೇಳೆ ಆಟಕ್ಕೆ ಪಣವಾಗಿ ಇಡಲಾಗಿದ್ದ ಸುಮಾರು ₹2 ಲಕ್ಷ ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ಚೀಟಿಗಳು (ಕಾರ್ಡ್‌ಗಳು)...
Latest News

ಮಹಿಳಾ ಕಸ್ಟಮ್ ಅಧಿಕಾರಿಗೆ ಅ* ಚಾರ, ಬ್ಲ್ಯಾಕ್ಮೇಲ್ ಆರೋಪ: ಉದ್ಯಮಿ ಬಂಧನ  ಹಲವು ಬೆಚ್ಚಿಬೀಳಿಸುವ ವಿವರಗಳು ಬಹಿರಂಗ

ಬೆಂಗಳೂರು,: ನಗರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳಾ ಕಸ್ಟಮ್ ಅಧಿಕಾರಿಗೆ ಮದುವೆಯ ಆಮಿಷವೊಡ್ಡಿ ಪರಿಚಯ ಬೆಳೆಸಿ ನಂತರ ಅ*ಚಾರ ಹಾಗೂ ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಉದ್ಯಮಿ ಎಂ. ಕೃಪಲಾನಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆರೋಪಿಯ ವಿರುದ್ಧ ಇನ್ನೂ ಹಲವು ಅಕ್ರಮ ಚಟುವಟಿಕೆಗಳ ಶಂಕೆ ವ್ಯಕ್ತವಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸುಮಾರು 9 ವರ್ಷಗಳ ಹಿಂದೆ ಕೃಪಲಾನಿ ಮಹಿಳಾ ಅಧಿಕಾರಿಯನ್ನು ಪರಿಚಯಿಸಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ. ನಂತರ ಪ್ರೀತಿಯ ನಾಟಕವಾಡಿ ಮದುವೆಯ ಭರವಸೆ ನೀಡಿದ ಆತ, ಆಕೆಯ ವಿಶ್ವಾಸ ಗಳಿಸಿದ್ದಾನೆ. ಇದೇ ಸಲುಗೆಯನ್ನು ದುರುಪಯೋಗಪಡಿಸಿಕೊಂಡು, ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಜೊತೆಗೆ, ಆಕೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ. ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ...
1 3 4 5 6 7 53
Page 5 of 53