ತಾರುಣ್ಯದ ತಲ್ಲಣಗಳು – ತಜ್ಞರ ವಿಶ್ಲೇಷಣೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಮೈಸೂರು :- ನಗರದ ಹೊಸಮಠದ ವಾತ್ಸಲ್ಯ ಬಿ.ಎಡ್. ಕಾಲೇಜಿನಲ್ಲಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಜೇಷನ್(AIDYO)ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಆಸ್ಪತ್ರೆಯ ಮನೋವೈದ್ಯ ಡಾ.ಎಂ.ಕಿಶೋರ್ ರವರು. ‘ತಾರುಣ್ಯದ ತಲ್ಲಣಗಳು-ತಜ್ಞರ ವಿಶ್ಲೇಷಣೆ ‘ ಪುಸ್ತಕವನ್ನು ಬಿಡುಗಡೆ ಮಾಡಿ ಉಪನ್ಯಾಸ ನೀಡಿದರು. ಮಕ್ಕಳು ಮತ್ತು ಯುವಜನರು ಮಾದಕ ವಸ್ತುಗಳು, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಗೀಳಿಗೆ ತುತ್ತಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಇದರಿಂದ ಅವರನ್ನು ಹೊರತರುವಲ್ಲಿ ಶಿಕ್ಷಣ ವ್ಯವಸ್ಥೆ ಸೋತಿದೆ. ಇಂತಹ ವ್ಯಸನಗಳಿಗೆ ಮನೋರಂಜನ...






