ಬಡವರು ಯಾರೂ ಹಸಿವಿನಿಂದ ಮಲಗಬಾರದು, ದೀಪಾವಳಿವರೆಗೂ ಉಚಿತವಾಗಿ ಆಹಾರ ಧಾನ್ಯ ನೀಡುತ್ತೇವೆ. ನವೆಂಬರ್ ತಿಂಗಳವರೆಗೂ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಬಡವರ ಎಲ್ಲ ಅಗತ್ಯಗಳನ್ನು ಗಮನಿಸಿ, ನಾವು ಅವರ ಜೊತೆಗೆ ಇರುತ್ತೇವೆ. ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಧಾನ್ಯ ವಿತರಣೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದರು. ಜೂನ್ 21ರ ಯೋಗ ದಿನದ ನಂತರ ದೇಶದಲ್ಲಿ ಲಸಿಕೆ ವಿತರಣಾ ಅಭಿಯಾನ...
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಗೊಳಿಸಲಾಗಿದೆ. ಆದರೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗೂ ಸಹ ಪರೀಕ್ಷೆ ರದ್ದುಗೊಳಿಸಿ ಉತ್ತೀರ್ಣಗೊಳಿಸಬೇಕಾಗಿ ಸರ್ಕಾರಕ್ಕೆ ಮನವಿಯನ್ನು ಮಾಡುತ್ತಿದ್ದಾರೆ....
ಬೆಳೆಯಿರಿ ಗಿಡ,ಮರ ಅಳಿಯದಿರಲಿ ಪರಿಸರ, ಉಸಿರ ನೀಡಿ ಸರ್ವರ ಬದುಕನ್ನೂ ಸುಂದರಗೊಳಿಸಲಿ ಪರಿಸರ. ನಾವಿಂದು ೪ ಜಿ ಯುಗದಲ್ಲಿದ್ದೇವೆ.ಪಟ್ಟಣದಲ್ಲೇ ವಾಸ, ಕಾಂಕ್ರೀಟ್ ಕಾಡು, ಮಮತೆ ಪ್ರೀತಿ, ವಾತ್ಸಲ್ಯಗಳಿಗೂ ಬರ. ಕೂಡು ಕುಟುಂಬವಿಲ್ಲ, ಕುಳಿತು ಉಣ್ಣುವ ವ್ಯವಧಾನವಿಲ್ಲ, ಎಲ್ಲವೂ ಅಯೋಮಯ. ಮಳೆಗಾಲ, ಬೇಸಿಗೆ, ಚಳಿಗಾಲವೆಂಬ ಪರಿವೆಯೂ ಅರಿವಿಗೆ ಬಾರದಾಗಿದೆ. ಮಾನವ ಜೀವಸಂಕುಲ ಇಂದು ವಿವೇಚನಾ ಶೂನ್ಯನಾಗಿ ಪ್ರಕೃತಿ ನೀಡಿರುವ ಸ್ವಾಭಾವಿಕ ಸಂಪತ್ತನ್ನು ಎಗ್ಗಿಲ್ಲದೆ ವಿನಾಶಗೊಳಿಸುತ್ತಿದ್ದಾನೆ. ಇದರ ಧೂರ್ತಫಲವೇ ಮಣ್ಣಿನ ಸವಕಳಿ, ನೆರೆಹಾವಳಿ,...