ಮೈಸೂರು ಜಿಲ್ಲೆಯಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದ್ದು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧ ಮುಂದುವರೆಯಲಿದೆ. ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್. ಎಸಿ ಬಳಸದೇ ಹೋಟೆಲ್, ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ, ಜಿಮ್‌ಗಳಲ್ಲಿ ಶೇ.50ರಷ್ಟು ಅನುಮತಿ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ, ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಉತ್ತರ ಕನ್ನಡ,...
ನಂಜನಗೂಡು ತಾಲೂಕಿನ 320 ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಇಂದು ನಂಜನಗೂಡಿನ ತಾಲೂಕು ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಕೊರೋನ ಸೇವಾ ಪಡೆ ವತಿಯಿಂದ ಅಕ್ಷಯಪಾತ್ರ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯಾಧಿಕಾರಿ ಈಶ್ವರ್ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಮುದ್ದಹಳ್ಳಿ ಚಿಕ್ಕಸ್ವಾಮಿ, ಅಂಬಳೆ ಮಂಜುನಾಥ್, ಮಹಾದೇವಸ್ವಾಮಿ, ಶಿವರಾಜು,...
ಆತ್ಮೀಯ ರೈತ ಬಾಂಧವರೇ ಯುವ ರೈತರೇˌ ಕೆ.ಆರ್.ನಗರ ತಾಲ್ಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿಯೊಂದಿಗೆ ಮರದ ಎತ್ತಿನಗಾಣವಾಡಿಸುತ್ತಾ ಅದರ ದೇಸಿ ಸೊಗಡನ್ನು ದೇಶದಾದ್ಯಂತ ಹಾಗೂ ಕೆಲವು ಹೊರದೇಶಗಳಿಗೂ ಪಸರಿಸುತ್ತಿರುವ ಶ್ರೀ ನವೀನ್ ಕುಮಾರ್ ರವರ ಕ್ಷೇತ್ರಕ್ಕೆ ಸ್ನೇಹಿತನೊಂದಿಗೆ ತೆರಳಿದ್ದೆನು. ನಿಜಕ್ಕೂ ಅಲ್ಲಿ ನನಗಾದಂತಹ ಅನುಭವ ಅದ್ಬುತ. 2 ಎಕರೆ ಪ್ರದೇಶದಲ್ಲಿ ಸುಭಾಷ್ ಪಾಳೇಕಾರ್ ಪದ್ದತಿಯಲ್ಲಿ ನುಗ್ಗೆˌ ಸೀಬೆˌ ಪಪಾಯˌ ಸೊಪ್ಪುˌ ತರಕಾರಿಗಳುˌ ಅಲಸಂದೆˌ ತೆಂಗುˌಅಡಿಕೆˌ ಶುಂಠಿˌ ಅರಿಶಿನˌ ಬೆಂಡೆ ˌಹೀಗೆ...