Latest News

ಮೈಸೂರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ: ಪ್ರತಾಪ್ ಸಿಂಹ, ದಿನೇಶ್ ಗೌಡರಿಂದ ಆತ್ಮೀಯ ಸ್ವಾಗತ

ಮೈಸೂರು: ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಮೈಸೂರಿಗೆ ಆಗಮಿಸಿದರು. ಈ ವೇಳೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ ಅವರು ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಹ ಉಪಸ್ಥಿತರಿದ್ದು, ಕುಮಾರಸ್ವಾಮಿ ಅವರಿಗೆ ಹೂಗುಚ್ಛ ನೀಡುವ ಮೂಲಕ ಗೌರವ ಸಲ್ಲಿಸಿದರು. ನಾಯಕರು...
Latest News

ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ- ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮೈಸೂರು, ಮಾರ್ಚ್ 07: ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಬೇಕೆಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು HD ಕೋಟೆಯ ಶಿರಮಹಳ್ಳಿಯಲ್ಲಿ  ಶ್ರೀ ಲಕ್ಷ್ಮಿ ದೇವಿ ಅಮ್ಮನವರ ನೂತನ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದರು. HD ಕೋಟೆಯ ಶಿರಮಹಳ್ಳಿಯ ಜನರು ದೈವಭಕ್ತರು. ದೇಗುಲದಲ್ಲಿ ಸ್ಥಾಪಿಸುವ ಪ್ರತಿಮೆಯಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ಬಸವಾದಿ ಶರಣರು, ದೇವರು ಎಲ್ಲೆಡೆಯೂ , ಎಲ್ಲರಲ್ಲಿಯೂ ಇದ್ದಾನೆ...
Latest News

ಅಂಬೇಡ್ಕರ್ ಪ್ರಶಸ್ತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು, ಮಾ. 7 : ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನ ರಾಂ ಹಾಗೂ ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗಳನ್ನು ಆಚರಿಸುವ ಅಂಗವಾಗಿ ವಿಶೇಷ ಪ್ರಶಸ್ತಿಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನಾಂಗದವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಗುರುತಿಸಿ, ರಾಜ್ಯ...
Latest News

ಮೈಸೂರಿನಲ್ಲಿ ಕರಾಮುವಿ ಕುಲಪತಿಗೆ ‘ಸಿ.ಎನ್.ಆರ್. ರಾವ್ ವಿಜ್ಞಾನ ಪುರಸ್ಕಾರ’ ಪ್ರಧಾನ

ಮೈಸೂರು, ಮಾ.07: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ) ಆವರಣದಲ್ಲಿ ಶನಿವಾರ ನಡೆದ ವಿಶೇಷ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರಿಗೆ ‘ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ ವಿಜ್ಞಾನ ಪುರಸ್ಕಾರ–2026’ ಪ್ರದಾನ ಮಾಡಲಾಯಿತು. ಬೆಂಗಳೂರಿನ ಸ್ವದೇಶಿ ವಿಜ್ಞಾನ ಆಂದೋಲನ–ಕರ್ನಾಟಕ ವತಿಯಿಂದ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸ್ವದೇಶಿ ವಿಜ್ಞಾನ ಆಂದೋಲನದ ಅಧ್ಯಕ್ಷರಾದ ಡಾ. ಎಂ.ಎಸ್. ಜಗದೀಶ್ ಅವರು ಪ್ರೊ. ಶರಣಪ್ಪ...
Latest News

ಕಪ್ಪಡಿ ಜಾತ್ರೆಯಲ್ಲಿ ಕೃಷಿ ಮೇಳ ಉದ್ಘಾಟನೆ: ಕೆ.ಆರ್.ನಗರಕ್ಕೆ ದೇಶಮಟ್ಟದ ಹೆಸರು ತರೋಣ ಎಂದ ಸಿದ್ದಲಿಂಗರಾಜೇ ಅರಸ್

ವರದಿ:-ವಡ್ಡರಕೊಪ್ಪಲುಶಿವರಾಮು. ಕೆ.ಆರ್.ನಗರ. ಮಾ. 07:- ಮಠದ ಅಭಿವೃದ್ಧಿಯ ಜೊತೆಗೆ ಮಠಕ್ಕೆ ಬರುವ ಭಕ್ತರ ಹಿತ ಮತ್ತು ಕ್ಷೇಮವನ್ನ ಅತ್ಯಂತ ಕಾಳಜಿಯಿಂದ ನಮ್ಮ ಮಟ್ಟದ ಭಕ್ತರು ನೋಡಿಕೊಳ್ಳಲಿದ್ದಾರೆ ಎಂದು ಮಂಟೇಸ್ವಾಮಿ‌ಮಠದ ಎಂ.ಎಲ್.ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಹೇಳಿದರು. ತಾಲೂಕಿನ ಕಪ್ಪಡಿಯಲ್ಲಿ ನಡೆಯುತ್ತಿರುವ ವಾರ್ಷಿಕ‌ ಜಾತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಈ ಕೆಲಸ ಇಲ್ಲಿಂದಲ್ಲೇ ಆರಂಭವಾಗಿ ಭತ್ತದ ನಾಡು ಎಂದು ಹೆಸರಾಗಿರುವ ಕೆ.ಆರ್.ನಗರ ದೇಶದಲ್ಲಯೇ ಹೆಸರುವಾಸಿಯಾಗಲಿ...
Latest News

ಮೈಸೂರಿಗೆ ಮತ್ತೊಂದು ಹೆಜ್ಜೆ: ಮಾರ್ಚ್ 8ರಂದು ಪಾಲಿಕೆಯಿಂದ ಸ್ವಚ್ಛತಾ ರೋಡ್ ಶೋ

ಮೈಸೂರು: ನಗರದಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಾರ್ಚ್ 8, 2026ರಂದು “ಸ್ವಚ್ಛತಾ ರೋಡ್ ಶೋ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ವಿಭಾಗ (SWM) ವತಿಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ನಗರದಲ್ಲಿ ಕಸ ವಿಂಗಡಣೆ, ಮನೆಮನೆಗೆ ತ್ಯಾಜ್ಯ ಸಂಗ್ರಹಣೆ ಮತ್ತು ಸ್ವಚ್ಛತಾ ಕ್ರಮಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವುದು ಇದರ ಮುಖ್ಯ...
Latest News

ಯುವಜನರಿಗೆ ನಿರಾಸೆಯನ್ನು ಉಂಟು ಮಾಡಿದ ಬಜೆಟ್ : ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿ

ಮೈಸೂರು:- ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದು 56,432 ಹುದ್ದೆಗಳನ್ನು ಈ ವರ್ಷದಲ್ಲಿ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿರುವುದು ಸ್ವಾಗತಾರ್ಹವಾದರೂ, 800 ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆಯಿಂದ 40,000ಕ್ಕೂ ಹೆಚ್ಚು ಶಾಲೆಗಳು ಮುಚ್ಚಲಿವೆ. ತತ್ಫಲವಾಗಿ ಸಾವಿರಾರು ಶಿಕ್ಷಕರ ಹುದ್ದೆಗಳು ಕಡಿತಗೊಳ್ಳಲಿವೆ. ಹೊಸ ಉದ್ಯೋಗ ಸೃಷ್ಟಿಯ ಬದಲಿಗೆ ಇರುವ ಉದ್ಯೋಗಗಳನ್ನು ನಾಶಗೊಳಿಸುವ ಯೋಜನೆ ಇದಾಗಿದೆ. ಯುವಜನರ ಸಮಗ್ರ ಅಭಿವೃದ್ಧಿಗೆ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲದ,...
Latest News

ಅಭಿವೃದ್ಧಿಯನ್ನು ದೂರ ತಳ್ಳುವ ಬಜೆಟ್ – ಮೈಸೂರು ಬಿಜೆಪಿ ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಆರೋಪ

  ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅಭಿವೃದ್ಧಿಯನ್ನು ದೂರಕ್ಕೆ ತಳ್ಳುವಂತೆಯೂ ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಂತೆಯೂ ಇರುವ ಕರಾಳ ಅಧ್ಯಾಯವಾಗಿದೆ ಎಂದು ಮೈಸೂರು ಮಹಾನಗರದ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ ತಿಳಿಸಿದ್ದಾರೆ. ಈ ಬಜೆಟ್ ಜನರ ಕಣ್ಣಿಗೆ ಧೂಳು ಎರಚುವ ತಂತ್ರದ ಬಜೆಟ್ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಸ್ಪಷ್ಟವಾದ ದಿಕ್ಕು ನೀಡುವಲ್ಲಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಪಂಚ ಗ್ಯಾರಂಟಿಗಳಿಗೆ ಯಾವುದೇ...
Latest News

ಜನಮಾನಸದ  ನಿತ್ಯ ಚಾಂಪಿಯನ್  ಶ್ರೀ  ಸಿದ್ದರಾಮಯ್ಯ  – ಡಾ. ಬಿಜೆವಿ 

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ 17ನೇ ದಾಖಲೆ ಬಜೆಟ್  ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಪ್ರಾದೇಶಿಕ ಅಸಮಾತೋಲನವನ್ನು ನಿವಾರಣೆ ಮಾಡಲು ವೈಜ್ಞಾನಿಕ ನೆಲಗಟ್ಟಿನ  ಗಟ್ಟಿತನದ ಬಜೆಟ್. ಕರ್ನಾಟಕದ ಸರ್ಕಾರದ ಅಭಿವೃದ್ಧಿಯ  ಪರ ಯೋಜನೆ ಗಳಿಂದಾಗಿ 2025 -26 ರಲ್ಲಿ ಕರ್ನಾಟಕದ   ಜಿಎಸ್‌ಡಿಪಿ   8.1 % ಬೆಳವಣಿಗೆಯು  ರಾಷ್ಟ್ರೀಯ ಬೆಳವಣಿಗೆ ದರವಾದ  7.4 % ಗಿಂತ ಹೆಚ್ಚಾಗಿದೆ.  ಬಜೆಟ್ ಸಂದರ್ಭದಲ್ಲಿ ಚೊಂಬು ಹಿಡಿದು ಪ್ರತಿಭಟನೆ ಆದಿ ತುಳಿದ ಬಿಜೆಪಿಯ  ಪ್ರತಿಪಕ್ಷ ನಾಯಕರು ಇದಕ್ಕೆ...
Latest News

ಸಮಾಜದಲ್ಲಿ ಆರೋಗ್ಯಕರ ಮಾಧ್ಯಮ ಅವಶ್ಯಕ : ಪ್ರೊ . ಬಿ.ಕೆ.ರವಿ

ಮೈಸೂರು :- ಮಾಧ್ಯಮದಲ್ಲಿ ಮಹಿಳೆಯರಿಗಾಗಿ ರುವ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರೂಸಾ 2.0 ಇವರ ಸಹಯೋಗದಲ್ಲಿ ಎರಡು ದಿನದ ಕಾರ್ಯಗಾರ ಆಯೋಜಿಸಲಾಗಿತ್ತು. ಎರಡನೇ ದಿನದ ಕಾರ್ಯಗಾರದ ಕುರಿತು ಮಾತನಾಡಿದ ನಾರ್ತ್ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಬಿ. ಕೆ.ರವಿ ರವರು ಪ್ರಾರಂಭದದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಕುರಿತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಪತ್ರಕರ್ತರಾದವರು ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದಿರಬೇಕು ಹಾಗೂ ಮೆಂಟಲಿ ಪ್ರಿಪೇರ್...
1 10 11 12 13 14 52
Page 12 of 52