Latest News

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದಿಂದ ಪ್ರತಿಭಟನೆ.,

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದಿಂದ ಪ್ರತಿಭಟನೆ.,

 

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿರಿಯಾಪಟ್ಟಣ ತಾಲ್ಲೂಕು ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತ ಭವನಕ್ಕೆ ತೆರಳಿ ತಹಶೀಲ್ದಾರ್ ನಿಸರ್ಗ ಪ್ರಿಯಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಾನ್ಸೂನ್ ಚಂದ್ರು ಮಾತನಾಡಿ ತಾಲೂಕಿನಲ್ಲಿ 150  ಕೃಷಿ ‍ಪರಿಕರ ಮಾರಾಟ ಮಾಡುವ ಅಂಗಡಿಗಳಿದ್ದು, ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ನಮಗೆ ಅನ್ಯಾಯವಾಗುತ್ತಿದೆ ಹಾಗಾಗಿ ಇಂದು ನಾವೆಲ್ಲರೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದೇವೆ.

ಸರ್ಕಾರ ಡಿಎಪಿ ಮತ್ತು ಯೂರಿಯಾ ಜೊತೆಗೆ ಒತ್ತಾಯವಾಗಿ ಬೇರೆ ಉತ್ಪನ್ನಗಳನ್ನು ಖರೀದಿಸುವಂತೆ ಲಿಂಕ್ (ಜೋಡಿಸುವುದು) ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ರಸಗೊಬ್ಬರ ಎಂಆರ್‌ಪಿ ಮೇಲೆ ಶೇ 8ರಷ್ಟು ಡೀಲರ್‌ ಲಾಭಾಂಶ ಇರುವಂತೆ ನೋಡಿಕೊಳ್ಳಬೇಕು. ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾದರಿಗಳು ಕಳಪೆ ಬಂದಾಗ ಕಂಪನಿಯವರ ಮೇಲೆ ಮಾತ್ರ ಪ್ರಕರಣ ದಾಖಲಿಸಬೇಕು ಡೀಲರ್‌ಗಳನ್ನು ಸಾಕ್ಷಿಯಾಗಿ ಮಾತ್ರವೇ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಎ.ಸುರೇಶ್ ಮಾತನಾಡಿ ಅಧಿಕಾರಿಗಳು ತಪಾಸಣೆಗೆಂದು ಅಂಗಡಿಗಳಿಗೆ ಭೇಟಿ ಕೊಟ್ಟ ನಂತರ ಮಾಧ್ಯಮಕ್ಕೆ ಹೇಳಿಕೆ ಕೊಡುವಾಗ ದಾಳಿ ಎಂಬ ಪದ ಮತ್ತು ಅಂಗಡಿಗಳ ಫೋಟೊ ಬಳಸಬಾರದು. ಅಧಿಕಾರಿಗಳು ಮಾರಾಟಗಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಡಿಎಪಿ, ಯೂರಿಯಾದ ಜೊತೆಗೆ ಒತ್ತಾಯವಾಗಿ ಉತ್ಪನ್ನಗಳ ಲಿಂಕ್ ಮಾಡುವುದನ್ನು ನಿಲ್ಲಿಸಬೇಕು,  ಎಲ್ಲಾ ರಸಗೊಬ್ಬರಗಳನ್ನು ಎಫ್ಓಎಲ್ ಕೊಡುವ ಹಾಗೆ ನೋಡಿಕೊಳ್ಳಬೇಕು. ಎಫ್‌ಐಡಿ ಮೂಲಕ ರಸಗೊಬ್ಬರ ಮಾರುವ ಸರ್ಕಾರದ ಆದೇಶವನ್ನು ಸ್ವಾಗತಿಸುತ್ತೇವೆ. ನೀರಾವರಿ ಮತ್ತು ಒಣಬೇಸಾಯಗಾರರಿಗೆ ವೈಜ್ಞಾನಿಕವಾಗಿ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು. ಎಫ್‌ಐಡಿ ಮೂಲಕ ಡಿಎಪಿ ಮತ್ತು ಯೂರಿಯಾ ಮಾರುವುದನ್ನು ಹಿಂಗಾರು ಬೆಳೆಯವರೆಗೆ ಕಡ್ಡಾಯಗೊಳಿಸಬಾರದು ಎಂದು ಕೋರಿದರು. ಸಾತಿ ಪೋರ್ಟಲ್ ಅನ್ನು ಮಾರಾಟ ಸ್ನೇಹಿಯಾಗಿ ರೂಪಿಸಬೇಕು ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಲೋಡರ್ಸ ಅಸೋಸಿಯೇಷನ್ ಸಂಘದ ಸದಸ್ಯರು ನೈತಿಕ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಬಿ.ಜೆ.ಬಸವರಾಜ್ ಜಿಲ್ಲಾ ನಿರ್ದೇಶಕರಾದ ಕಂಪಲಾಪುರ ಶಶೀಧರ್, ಪಿ.ಎಸ್.ಕುಮಾರ್,ಪಿರಿಯಾಪಟ್ಟಣ ತಾಲ್ಲೂಕು ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದ  ಉಪಾಧ್ಯಕ್ಷರಾದ ರಾವಂದೂರು ನಂದೀಶ್, ಗೌರೀಶ್, ಖಜಾಂಚಿ ಟಿ.ಕೆ.ಪ್ರಸಾದ್, ನಿರ್ದೇಶಕರಾದ ಸುನಿಲ್, ಅನಿಲ್ ಕುಮಾರ್, ರಾಜೀಕ್ ಅಹಮದ್, ರಮೇಶ್, ಶಿವಾರಾಧ್ಯ, ಬೆಟ್ಟದಪುರ ಸೋಮು, ಕೊಪ್ಪ ಕೃಷ್ಣ, ಸದಸ್ಯರಾದ ಕರೀಗೌಡ, ಸಾಗರ್ ಮಂಜು, ಸಾಧೀಕ್, ಸಲೀಂ, ರಘು, ನವೀನ್, ಹೇಮಂತ್, ಜ್ಯೋತಿ ಗೌಡ,ಸುದೀರ್, ಚೇತನ್, ಕಿತ್ತೂರು ದೀಪಕ್, ರಾವಂದೂರು ಜಲೇಂದ್ರ, ತಿಮಕಾಪುರ ಅಣ್ಣೇಗೌಡ, ಮಾಕೋಡು ವಾಸೀಂ, ಗೌತಮ್, ಪೂರ್ಣ ಚಂದ್ರ, ಕಂಪಲಾಪುರ ಮಂಜು, ಮಾನ್ಸೂನ್ ದೃವ, ಕೃಷ್ಣ ನಾಯ್ಕ, ಭರತ್, ಕಂದೇಗಾಲ ಪ್ರತೀಪ್, ದೊಡ್ಡನೇರಳೆ ಲೋಹಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Contact us for classifieds and ads : +91 9742974234