Articles

ಮೈಕ್ಲಿಕ್ @ ಕುಕ್ಕರಹಳ್ಳಿಕೆರೆ……..!!!

ಸೂರ್ಯನಂಗಳದಲ್ಲಿ
ಮೋಡಗಳ ಚಿತ್ತಾರ ಬಿಡಿಸಿ,
ಆಗಸದ ಕ್ಯಾನ್ವಾಸ್ ಮೇಲೆ
ಪ್ರಕೃತಿಯ ನಗು ಚಿಮ್ಮಿದೆ…

ಗಾಳಿಯದು ಮೃದುವಾಗಿ ತಾಕಿ
ಮನದ ಹಾದಿಯ ತೇಲಿಸುತ,
ಬೆಳಕಿನ ಕಿರಣಗಳಲ್ಲಿ
ಹೊಸ ಕನಸು ಮೂಡಿಸಿದೆ..

ನೀಲಿ ಗಗನದ ಮಡಿಲಲ್ಲಿ
ಬಿಳಿ ಮೋಡಗಳ ಆಟ,
ನೋಟವೊಂದು
ಹೃದಯಕ್ಕೆ
ಹರ್ಷದ ಕಚಗುಳಿಯಿಟ್ಟಿದೆ.

ಖುಷಿಯಾಗಿರಿಹೃದಯವಂತರಾಗಿರಿ

ರಾಮ್ ಮೈಸೂರು

Contact us for classifieds and ads : +91 9742974234