ಕರ್ನಾಟಕದ ಬಿಯರ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ: ದಿಗ್ಗಜ ಬ್ರ್ಯಾಂಡ್ಗಳಿಗೆ ‘ಸನ್ನಿ ಬೀಚಸ್’ ಕಠಿಣ ಪೈಪೋಟಿ
ಬೆಂಗಳೂರು: ರಾಜ್ಯದ ಬಿಯರ್ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಮೆರೆಯುತ್ತಿದ್ದ ಹಳೆಯ ಹಾಗೂ ದಿಗ್ಗಜ ಬ್ರ್ಯಾಂಡ್ಗಳಿಗೆ ಈಗ ಹೊಸ ಸವಾಲು ಎದುರಾಗಿದೆ. ಎಸ್ಒಎಂ (SOM) ಗ್ರೂಪ್ ಆಫ್ ಕಂಪನೀಸ್ನ ಅಂಗಸಂಸ್ಥೆಯಾದ ‘ವುಡ್ಪೆಕ್ಕರ್ ಡಿಸ್ಟಿಲರೀಸ್ ಅಂಡ್ ಬ್ರೂವರೀಸ್’ ಮಾರುಕಟ್ಟೆಗೆ ಪರಿಚಯಿಸಿರುವ ಸ್ವದೇಶಿ ಬಿಯರ್ ‘ಸನ್ನಿ ಬೀಚಸ್’ (Sunny Beaches), ಅತ್ಯಲ್ಪ ಅವಧಿಯಲ್ಲೇ ಗ್ರಾಹಕರ ಗಮನ ಸೆಳೆಯುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ.
ಮಾರುಕಟ್ಟೆ ಪ್ರವೇಶಿಸಿದ ಕೆಲವೇ ತಿಂಗಳುಗಳಲ್ಲಿ ಈ ಬ್ರ್ಯಾಂಡ್ ಶೇ. 3ಕ್ಕೂ ಅಧಿಕ ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಅಚ್ಚರಿಯೆಂದರೆ, ಕೇವಲ ಫೆಬ್ರವರಿ ತಿಂಗಳೊಂದರಲ್ಲೇ 12 ಲಕ್ಷಕ್ಕೂ ಹೆಚ್ಚು ‘ಸನ್ನಿ ಬೀಚಸ್’ ಬಿಯರ್ ಬಾಟಲಿಗಳು ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿರುವ ಹಳೆಯ ದಿಗ್ಗಜ ಬ್ರ್ಯಾಂಡ್ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದ 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಹೊಸ ರುಚಿಯನ್ನು ಸವಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಈ ಬಿಯರ್ ಲಭ್ಯವಿದೆ.
ಯಶಸ್ಸಿನ ಗುಟ್ಟೇನು?
ಸನ್ನಿ ಬೀಚಸ್ನ ಈ ದಿಢೀರ್ ಯಶಸ್ಸಿಗೆ ಅದರ ಪ್ರೀಮಿಯಂ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರವೇ ಪ್ರಮುಖ ಕಾರಣ . 650 ಮಿ.ಲೀ. ಬಾಟಲ್ಗೆ ಕೇವಲ 100 ರೂಪಾಯಿ, 500 ಮಿ.ಲೀ. ಕ್ಯಾನ್ಗೆ 90 ರೂಪಾಯಿ ಹಾಗೂ 330 ಮಿ.ಲೀ. ಪಿಂಟ್ಗೆ ಕೇವಲ 65 ರೂಪಾಯಿ ದರ ನಿಗದಿಪಡಿಸಲಾಗಿದೆ. ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಬಿಯರ್ ಲಭ್ಯವಾಗುತ್ತಿರುವುದು ಗ್ರಾಹಕರನ್ನು, ಅದರಲ್ಲೂ ವಿಶೇಷವಾಗಿ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ. ಗುಣಮಟ್ಟದ ಕಾರಣದಿಂದಾಗಿ ಗ್ರಾಹಕರು ಪದೇಪದೇ ಖರೀದಿಸುತ್ತಿರುವುದು ಬ್ರ್ಯಾಂಡ್ನ ಬೆಳವಣಿಗೆಗೆ ಸಹಕಾರಿಯಾಗಿದೆ.
ಈ ಬಿಯರ್ನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಬಾಟಲಿಯ ಮೇಲಿರುವ ‘ರೆಡಿ-ಟು-ಸರ್ವ್ ಚಿಲ್ ಇಂಡಿಕೇಟರ್’ ತಂತ್ರಜ್ಞಾನ. ಬಿಯರ್ನ ತಾಪಮಾನ 0-5°C ಗೆ ತಲುಪಿದ ತಕ್ಷಣ ಬಾಟಲಿಯ ಮೇಲಿರುವ ಥರ್ಮೋಕ್ರೋಮಿಕ್ ಇಂಕ್ ಪ್ಯಾಚ್ ಬಣ್ಣ ಬದಲಾಯಿಸುತ್ತದೆ. ಕುಡಿಯಲು ಸೂಕ್ತವಾದ ತಾಪಮಾನ ಸೂಚಿಸುವ ಈ ವಿನೂತನ ತಂತ್ರಜ್ಞಾನ ಮದ್ಯಪ್ರಿಯರಿಗೆ ಹೊಸ ಅನುಭವ ನೀಡುತ್ತಿದೆ.
ಗ್ರಾಹಕರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲದ ಕುರಿತು ಪ್ರತಿಕ್ರಿಯಿಸಿರುವ ಎಸ್ಒಎಂ ಗ್ರೂಪ್ನ ಸಿಇಒ ದಿವಾಕರನ್ ಸೂರ್ಯನಾರಾಯಣ, “ಸನ್ನಿ ಬೀಚಸ್ ಅನ್ನು ಅತ್ಯುತ್ತಮ ರುಚಿ, ಸಮತೋಲನ ಹಾಗೂ ಸುಲಭವಾಗಿ ಕುಡಿಯಬಹುದಾದ ಗುಣಮಟ್ಟದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ನಮಗೆ ಅತೀವ ಸಂತಸ ತಂದಿದೆ” ಎಂದಿದ್ದಾರೆ.
ಸದ್ಯ ರಾಜ್ಯದ 8,000ಕ್ಕೂ ಹೆಚ್ಚು ಬಾರ್, ವೈನ್ ಶಾಪ್ ಹಾಗೂ ಕ್ಲಬ್ಗಳಲ್ಲಿ ಲಭ್ಯವಿರುವ ಈ ಬಿಯರ್ ಅನ್ನು ಮುಂಬರುವ ಬೇಸಿಗೆಯ ವೇಳೆಗೆ 12,000 ಔಟ್ಲೆಟ್ಗಳಿಗೆ ವಿಸ್ತರಿಸುವ ಬೃಹತ್ ಗುರಿಯನ್ನು ಕಂಪನಿ ಹೊಂದಿದೆ.
ಪ್ರೀಮಿಯಂ ಲಾಗರ್ ವಿಭಾಗದಲ್ಲಿನ ಯಶಸ್ಸಿನ ಬೆನ್ನಲ್ಲೇ, ಕಂಪನಿಯು ಈಗ ‘ಸನ್ನಿ ಬೀಚಸ್ ಸ್ಟ್ರಾಂಗ್ ಪ್ರೀಮಿಯಂ ಬಿಯರ್’ ಅನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಸ್ಟ್ರಾಂಗ್ ಬಿಯರ್ ಪ್ರಿಯರ ಸಂಖ್ಯೆ ಹೆಚ್ಚಿರುವುದರಿಂದ ಈ ಹೊಸ ಉತ್ಪನ್ನವೂ ಭಾರಿ ಬೇಡಿಕೆ ಸೃಷ್ಟಿಸುವ ನಿರೀಕ್ಷೆಯಿದೆ.
ಹೊಸ ಸ್ಟ್ರಾಂಗ್ ಬಿಯರ್ನ 650 ಮಿ.ಲೀ. ಬಾಟಲ್ಗೆ 105 ರೂಪಾಯಿ, 500 ಮಿ.ಲೀ. ಕ್ಯಾನ್ಗೆ 90 ರೂಪಾಯಿ ಹಾಗೂ 330 ಮಿ.ಲೀ. ಪಿಂಟ್ಗೆ 70 ರೂಪಾಯಿ ನಿಗದಿಪಡಿಸಲಾಗಿದೆ.

