Articles

ಜೀವನ…..

ಜೀವನ ಎಂದರೆ ಕೇವಲ ಉಸಿರಾಟವಲ್ಲ,
ನೋವಿನ ನಡುವೆಯೂ ನಗುವುದನ್ನು ಕಲಿಯುವುದು.
ಕೆಲವು ಕನಸುಗಳು ಮುರಿದರೂ
ಮತ್ತೆ ಹೊಸ ಕನಸುಗಳನ್ನು ಕಟ್ಟಿಕೊಳ್ಳುವುದು.
ಕೈ ಹಿಡಿದವರು ಬಿಡುವಾಗಲು
ನಮ್ಮನ್ನು ನಾವು ಹಿಡಿದುಕೊಳ್ಳುವುದು.
ಯಾಕೆಂದರೆ,
ಜೀವನವೆಂಬ ಪ್ರಯಾಣದಲ್ಲಿ
ಕೊನೆಗೆ ನಮ್ಮ ಜೊತೆ ಇರುವವರು
ನಾವು ಮಾತ್ರ.

  • ಜಾನವಿ ಅಮೆಮನೆ

Contact us for classifieds and ads : +91 9742974234