Articles

ಅವಳು ಕವಿತೆ

ಅವಳು ಅಮ್ಮನಾಗಿ ಹುಟ್ಟುವುದಿಲ್ಲ…

ಆದರೆ ಪ್ರೀತಿಯಿಂದ ಅಮ್ಮನಾಗುತ್ತಾಳೆ…
ಅವಳು ಬಲಹೀನಳಲ್ಲ..
ಆದರೆ ತನ್ನ ನೋವನ್ನು ಯಾರಿಗೂ ತೋರಿಸದಷ್ಟು
ಬಲಿಷ್ಠಳಾಗುತ್ತಾಳೆ…
ತನ್ನ ಕನಸುಗಳನ್ನು ಮೌನವಾಗಿ ಮಡಚಿ ಇಟ್ಟು…
ಇತರರ ಕನಸುಗಳಿಗೆ ಬೆಳಕಾಗುತ್ತಾಳೆ…
ಅವಳು ಕುಸಿದರೂ…
ಮತ್ತೆ ಎದ್ದು ನಿಂತುಕೊಳ್ಳುತ್ತಾಳೆ…
ಏಕೆಂದರೆ
ಅವಳು ಮಹಿಳೆ…
ಶಕ್ತಿ…
ಸಹನೆ…
ಪ್ರೀತಿ…
ಇವೆಲ್ಲವೂ ಒಂದೇ ಹೆಸರು.

– ಜಾನವಿ ಅಮೆಮನೆ

Contact us for classifieds and ads : +91 9742974234