ಕೆಆರ್ ನಗರದಲ್ಲಿ ಜೆಡಿಎಸ್ ಬಿಕ್ಕಟ್ಟು: ನಾಯಕತ್ವಕ್ಕಾಗಿ ಜಿಟಿ–ಸಾರಾ ಶಕ್ತಿ ಪ್ರದರ್ಶನ
ವಿಶೇಷ ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆಆರ್ ನಗರ ರಾಜಕೀಯದ ಕೇಂದ್ರಬಿಂದು: ಜಿಟಿ ದೇವೇಗೌಡರ ಶಕ್ತಿ vs ಸಾರಾ ಮಹೇಶ್ ಪ್ರಭಾವ
ಕೆ ಆರ್ ನಗರ. ಫೆ. 03:- ಮೈಸೂರು ಜಿಲ್ಲೆಯ ಜೆಡಿಎಸ್ ಪಕ್ಷದಲ್ಲಿಗ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಜಿ ಸಚಿವ ಸಾರಾ ಮಹೇಶ್ ಅವರ ನಡುವೆ ನಿನಾ ನಾನ ಎಂಬ ಜಿದ್ದಿನಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು 2028ರ ವಿಧಾನಸಭಾ ಚುನಾವಣೆಯವರಿಗೂ ಕಾಯಬೇಕಾಗಿದೆ.
ಜಿ ಟಿ ದೇವೇಗೌಡ:- ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಹೋದ ನಂತರ ಜೆಡಿಎಸ್ ನಾಯಕತ್ವವನ್ನು ಹೊತ್ತಿಕೊಂಡ ಜಿಟಿ ದೇವೇಗೌಡ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವರ ಅವಧಿಯಲ್ಲಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜೆಡಿಎಸ್ ಏಕ ಚಕ್ರಾಧಿಪತಿಯಾಗಿ ಮೆರೆಯುವ ಮೂಲಕ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಲು ಮುಂದಾಗಿದ್ದರು.
ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಒಳರಾಜಕೀಯ: 2028ರವರೆಗೂ ಕುತೂಹಲ
ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣನವರ ಜೊತೆ ಮುನಿಸು ಕಟ್ಟಿಕೊಂಡ ಜಿಟಿ ದೇವೇಗೌಡರು 2008ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ವಿರುದ್ಧ ಸೋಲುಂಡರು ಸೋತರು ಅಂದು ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಮೈಸೂರು ಜಿಲ್ಲೆಯ ಪ್ರಭಾವಿ ಒಕ್ಕಲಿಗ ನಾಯಕ ಜಿಟಿ ದೇವೇಗೌಡರನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದರು.
ಬದಲಾಗುತ್ತಿರುವ ಜೆಡಿಎಸ್ ರಾಜಕೀಯ: ಜಿಟಿ ದೇವೇಗೌಡ–ಸಾರಾ ಮಹೇಶ್ ಜಿದ್ದಿನ ಹೋರಾಟ
ಆದರೆ ಜಿಟಿ ದೇವೇಗೌಡರು 2013ರಲ್ಲಿ ಮತ್ತೆ ಜೆಡಿಎಸ್ ಗೆ ಸೇರ್ಪಡೆಗೊಂಡು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರ ವಿರುದ್ಧ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಪ್ರಚಾರದಲ್ಲಿದ್ದರು ಅದೇ ರೀತಿ 2023ರ ಚುನಾವಣೆಯಲ್ಲಿ ಗೆದ್ದು ಸತತ ಮೂರು ಬಾರಿಗೆದ್ದ ಶಾಸಕರ ಸಾಲಿನಲ್ಲಿ ಇದ್ದರೂ ರಾಜಕೀಯವಾಗಿ ಜೆಡಿಎಸ್ ಪಕ್ಷದ ಸಂಘಟನೆ ಮತ್ತು ಸಭೆ ಸಮಾರಂಭಗಳಿಂದ ಅಂತರ ಕಾಯ್ದುಕೊಂಡು ಮೌನಕ್ಕೆ ಜಾರಿ ಇರುವುದು ವಿಶೇಷವಾಗಿದೆ.
ಸಾ ರಾ ಮಹೇಶ್ಇ ತ್ತ ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಂಡು ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ನಗರಾಧ್ಯಕ್ಷ ಕಾರ್ಯದರ್ಶಿ ಸೇರಿದಂತೆ ವಿಧ ವಿವಿಧ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಮಾಜಿ ಸಚಿವ ಸಾರಾ ಮಹೇಶ್ 2004ರಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 25 ಸಾವಿರ ಮತ ಪಡೆದು ಸೋಲುಂಡರು ಛಲ ಬಿಡದೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಪ್ರತಿ ಗ್ರಾಮಕ್ಕೂ ಬೇಟೆ ಕೊಡುವ ಮೂಲಕ ತಮ್ಮಿಂದಾಗುವ ಸಹಾಯವನ್ನು ನೀಡುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿರುವ ವೇಳೆಯಲ್ಲಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ದಿವಂಗತ ಮಂಚನಹಳ್ಳಿ ಮಹಾದೇವ್ ಕಾಂಗ್ರೆಸ್ ಪಕ್ಷ ಸೇರಿಕೊಂಡ ವೇಳೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನೆಲಕಚ್ಚುವ ವೇಳೆಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ನೇತೃತ್ವದಲ್ಲಿ ಸಾರಾ ಮಹೇಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡುರು.
ಚಾಮುಂಡೇಶ್ವರಿ–ಕೆಆರ್ ನಗರ ರಾಜಕೀಯ ಸಮರ: ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಮುಖಾಮುಖಿ
ಅದೇ ವೇಳೆ ಮೈಸೂರು ಮೂಡಾ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕೆ ಆರ್ ನಗರ ಸೇರಿದಂತೆ ಮೈಸೂರು ಭಾಗದಲ್ಲಿ ಪಕ್ಷವನ್ನು ಕಟ್ಟಲು ತಿಳಿಸಿದರು 2008ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕೆ ಆರ್ ನಗರ ವಿಧಾನಸಭಾ ಕ್ಷೆತ್ರದ ಅಭಿವೃದ್ಧಿಗೆ ಶ್ರಮಿಸಿದ ಜನನಾಯಕರಾಗಿ ಕೆ ಆರ್ ನಗರ ಸೇರಿದಂತೆ ಮೈಸೂರು ಜಿಲ್ಲೆಯ ನಾಯಕರಾಗಿ ಹೊರಹೊಮ್ಮುವ ಜೊತೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಗಳಾದ ಮಂಜೇಗೌಡ ವಿವೇಕಾನಂದ್ ಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡಿಸುವ ಮೂಲಕ ಗೆಲುವನ್ನು ಸಾಧಿಸಿ ತಮ್ಮದೇ ಆದ ಹಿಡಿತವನ್ನು ಇಟ್ಟುಕೊಂಡು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬಳಗದ ಆಪ್ತ ನಾಯಕರಾಗಿ ಹೊರಹೊಮ್ಮಿ ರುವುದು ಕಂಡುಬಂದಿದೆ.
ಮೈಸೂರು ರಾಜಕೀಯದ ಒಳಕಥೆ: ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವಿನ ಅಂತರಾಳ ಸಮರ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸಾರಾ ಮಹೇಶ್ ಅಥವಾ ಜಿಡಿ ಹರೀಶ್ ಗೌಡ ಸ್ಪರ್ಧೆ?:- ಜಿಟಿ ದೇವೇಗೌಡರು ಪಕ್ಷದಿಂದ ಹೊರಹಾಕಿ ಎಂಬ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಪದೇ ಪದೇ ಹೇಳುತ್ತಿದ್ದರು ಯಾವುದೇ ಸ್ಪಷ್ಟನೆಯನ್ನು ನೀಡಲ ಜೆಡಿಎಸ್ ವರಿಷ್ಠರ ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಬಹುತೇಕ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಸಾರಾ ಮಹೇಶ್ ಅಥವಾ ಜಿ ಟಿ ದೇವೇಗೌಡರ ಪುತ್ರ ಹುಣಸೂರಿನ ಶಾಸಕ ಜಿಡಿ ಹರೀಶ್ ಗೌಡ ರವರನ್ನು ಸ್ಪರ್ಧೆಗೆ ಇಳಿಸಿ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವವನ್ನು ಮತ್ತೆ ಪ್ರತಿಷ್ಠಾಪಿಸಲು ಹೊರಟಿರುವ ಜೆಡಿಎಸ್ ವರಿಷ್ಠರು ಜೆಡಿಎಸ್ ಪಕ್ಷದ ಪ್ರಚಾರದ ನಾಮಫಲಕ ಸೇರಿದಂತೆ ಇನ್ನಿತರ ಜಾಹೀರಾತುಗಳಲ್ಲಿ ಜಿಟಿ ದೇವೇಗೌಡರನ್ನು ಕೈ ಬಿಟ್ಟಿರುವುದು ಸಾಕ್ಷಿಯಾಗಿದೆ.
ಕೆಆರ್ ನಗರ ರಾಜಕೀಯದ ಕೇಂದ್ರಬಿಂದು: ಜಿಟಿ ದೇವೇಗೌಡರ ಶಕ್ತಿ vs ಸಾರಾ ಮಹೇಶ್ ಪ್ರಭಾವ
ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಮೂಳೆತಜ್ಞ ಡಾ. ಸಾರಾ ಧನುಷ್?:- ಮಾಜಿ ಸಚಿವ ಸಾರಾ ಮಹೇಶ್ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಹೋಗಲು ತೆರೆ ಮರೆಯಲ್ಲಿ ತಯಾರು ನಡೆಸುವ ಜೊತೆಗೆ ಜೆಡಿಎಸ್ ಪಕ್ಷದ ವರಿಷ್ಠರು ಎಲ್ಲಿ ಹೇಳುವರು ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬ ಹೇಳಿಕೆ ಸ್ಪಷ್ಟವಾಗುತ್ತಿದ್ದಂತೆ ಮಾಜಿ ಸಚಿವ ಸಾರಾ ಮಹೇಶ್ ಅವರ ಪುತ್ರ ಡಾ.ಸಾ ರಾ ಧನುಷ್ ಸಾಲಿಗ್ರಾಮ ಕೆ ಆರ್ ನಗರ ತಾಲ್ಲೂಕುಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸನ್ಮಾನ ಕಾರ್ಯಕ್ರಮ ಸೇರಿದಂತೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಜನರ ಮನಸ್ಸಿನಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಜನಸೇವಕ ಜನನಾಯಕ ಇವರೇ ಎಂಬ ಮಾತು ಮನೆ ಮಾತಾಗಿದ್ದು ತಂದೆ ಸಾರಾ ಮಹೇಶ್ ಚಾಮುಂಡೇಶ್ವರಿ ಅಥವಾ ಚಾಮರಾಜ ಕ್ಷೇತ್ರಕ್ಕೆ ಹೋದರೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಡಾ. ಸಾ ರಾ ಧನುಷ್ ಪಿಕ್ಸ್ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾರಾ ಮಹೇಶ್ ಕಟ್ಟಿ ಹಾಕಲು ಹೋಗಿ ತಾವೇ ಸಿಲುಕಿಕೊಂಡರೆ ಜಿ ಟಿ ದೇವೇಗೌಡರು :- ಮೈಸೂರು ಜಿಲ್ಲೆಯಲ್ಲಿ ಸಾರಾ ಮಹೇಶ್ ಬೆಳೆಯದಂತೆ ನೋಡಿಕೊಳ್ಳಲು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪರಮಾಪ್ತ ಮಾಜಿ ಮೂಡಾ ಅಧ್ಯಕ್ಷ ಹರದನಹಳ್ಳಿ ವಿಜಯ್ ಸೇರಿದಂತೆ ಕೆಲವು ಮುಖಂಡರ ಜೊತೆ ಸೇರಿ ವಿಜಯವರ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಸಾರಾ ಮಹೇಶ್ ಅವರಿಗೆ ಸೆಡ್ಡು ಹೊಡೆಯಲು ಪ್ರಯತ್ನಿಸಿದರು. ಅದಕ್ಕೆ ಪ್ರತಿಯಾಗಿ ಸಾರಾ ಮಹೇಶ್ ಒಂದು ವರ್ಷ ಕಾದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜಿಟಿ ದೇವೇಗೌಡರ ವಿರೋಧಿಗಳ ಮನೆಗೆ ಭೇಟಿ ನೀಡಿ ಅವರೆಲ್ಲರನ್ನು ಸಂಘಟಿಸಲು ಹೊರಟಿರುವುದು ಯಾರಿಗೆ ಯಾರು ಮೇಲು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.


