ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು
ಶಿವಾಜಿ ಮಹಾರಾಜರನ್ನು ನಾವು ಕನ್ನಡಿಗರು ಗೌರವಿಸುತ್ತೀವಿ, ಆರಾಧಿಸುತ್ತೀವಿ ಅಂದ್ರೆ ಅದು ನನ್ನ ಕನ್ನಡ ಸಂಸ್ಕೃತಿ ಕಲಿಸಿ ಕೊಟ್ಟ ಸಂಸ್ಕಾರದ ಫಲ. ಆದರೆ ಪಕ್ಕದ ಶಿವಾಜಿ ಮಹಾರಾಜರನ್ನು ಗೌರವಿಸುವ ಆತುರದಲ್ಲಿ ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು. ನಾವು ನಮ್ಮ ಮುಂದಿನ ಪೀಳಿಗೆಗೆ ಇಂತ ಒಬ್ಬ ದೊರೆ ಇದ್ದರು, ಅವರ ನೆರಳಿನಲ್ಲಿ ನಾವು ಎಂದೆಂದಿಗೂ ಜೀವಿಸುತ್ತ ಇರುತ್ತೀವಿ ಎಂಬ ಸತ್ಯ ಪರಿಚಯ ಮಾಡಿಕೊಟ್ಟರೆ ಮಾತ್ರವೇ ನಮ್ಮ ಪರಂಪರೆ, ಇತಿಹಾಸ ಮತ್ತು ಕನ್ನಡ ಅಸ್ಮಿತೆಯನ್ನು...