
ಶಿವಾಜಿ ಮಹಾರಾಜರನ್ನು ನಾವು ಕನ್ನಡಿಗರು ಗೌರವಿಸುತ್ತೀವಿ, ಆರಾಧಿಸುತ್ತೀವಿ ಅಂದ್ರೆ ಅದು ನನ್ನ ಕನ್ನಡ ಸಂಸ್ಕೃತಿ ಕಲಿಸಿ ಕೊಟ್ಟ ಸಂಸ್ಕಾರದ ಫಲ. ಆದರೆ ಪಕ್ಕದ ಶಿವಾಜಿ ಮಹಾರಾಜರನ್ನು ಗೌರವಿಸುವ ಆತುರದಲ್ಲಿ ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು.
ನಾವು ನಮ್ಮ ಮುಂದಿನ ಪೀಳಿಗೆಗೆ ಇಂತ ಒಬ್ಬ ದೊರೆ ಇದ್ದರು, ಅವರ ನೆರಳಿನಲ್ಲಿ ನಾವು ಎಂದೆಂದಿಗೂ ಜೀವಿಸುತ್ತ ಇರುತ್ತೀವಿ ಎಂಬ ಸತ್ಯ ಪರಿಚಯ ಮಾಡಿಕೊಟ್ಟರೆ ಮಾತ್ರವೇ ನಮ್ಮ ಪರಂಪರೆ, ಇತಿಹಾಸ ಮತ್ತು ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ ಆಗುತ್ತದೆ.
ಆಗಾಗಿ ಈ ಮಹಾನ್ ರಾಜಋಷಿಯ ಸಾಧನೆ ಬಗ್ಗೆ ಪ್ರತಿ ದಿನ ಒಂದು ಸಂಚಿಕೆ ಮಾಡುವೆ, ಎಲ್ಲಿ ತನಕ ಈ ಮಹಾನ್ ಪುರುಷ ಕನ್ನಡದ ಮನ ಮತ್ತು ಹೃದಯ ತುಂಬಿಕೊಳ್ಳುವರೋ ಅಲ್ಲಿ ತನಕ ಇವರ ಪರಿಚಯ ಮಾಡುವೆ. ಇದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮಂತ ಒಬ್ಬ ಕನ್ನಡಿಗನ ಕಾಯಕ.
ಇರಲಿ ನಿಮ್ಮೆಲ್ಲರ ಪ್ರೋತ್ಸಾಹ ಸದಾ.
ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.