ಸಂಕ್ರಾಂತಿ ಹಬ್ಬವು ಆನಂದವನ್ನು ಹರಡುವ ಹಬ್ಬ.
ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಮತ್ತು ಸಂಕ್ರಾಂತಿಯ ನಂತರದ ದಿನ ಸುಗ್ಗಿ ಎಂದು ದೇಶದ ಹಲವೆಡೆ ಮಾರ್ಗಶಿರ ಪುಷ್ಯ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸುತ್ತೇವೆ.
ಭೋಗಿ ಬೆಂಕಿ
ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಅಗ್ನಿಯಲ್ಲಿ ಸುಟ್ಟು, ಹಳೆಯ ವಿಷಯಗಳ ಪ್ರತೀಕವಾಗಿ ಹಳೆಯ ಬಟ್ಟೆಯನ್ನು ಅಗ್ನಿಯಲ್ಲಿ ಹಾಕಿ, ಮನಸ್ಸಿನ ಅಂಧಕಾರವನ್ನು ಜ್ಞಾನದ ಮೂಲಕ ಪ್ರಜ್ವಲಿಸುವ ಪ್ರತೀಕವಾಗಿ ಈ ಭೋಗಿ ಬೆಂಕಿಯನ್ನು ಹಚ್ಚುತ್ತೇವೆ.
ಬೋರೆ ಹಣ್ಣು – ಬದರೀಫಲ
ನಾರಾಯಣ ಸ್ವಾಮಿಯ ಪ್ರತಿರೂಪವಾಗಿ ನಂಬುತ್ತೇವೆ.
ಮಕ್ಕಳಿಗೆ ದೃಷ್ಟಿ ತಗುಲದೆ, ಅವರು ಶತಾಯುಷಿಗಳಾಗಿ ಬದುಕಲಿ ಎಂಬ ಉದ್ದೇಶದಿಂದ, ಬೋರೆ ಹಣ್ಣುಗಳನ್ನು ಕಬ್ಬು ಹಾಗೂ ಚಿಲ್ಲರೆ ನಾಣ್ಯ ಗಳೊಂದಿಗೆ ಮಕ್ಕಳ ಮೇಲೆ ಹಾಕಿ ಅವರಿಗೆ ಆಶೀರ್ವಾದವನ್ನು ಮಾಡುತ್ತೇವೆ.
ಸುಗ್ಗಿ ಹಬ್ಬ
ರೈತರಿಗೆ, ಹಸು ಹಾಗೂ ಎತ್ತುಗಳಿಗೆ ಕೃತಜ್ಞತಾ ಭಾವವಾಗಿ ಆಚರಿಸುವ ಹಬ್ಬವೇ ಸುಗ್ಗಿ ಹಬ್ಬ.
ಹಾಗೆಯೇ ಭೋಗಿ ಹಾಗೂ ಸುಗ್ಗಿ ಹಬ್ಬಗಳ ವೈಜ್ಞಾನಿಕ ವಿಷಯಗಳನ್ನೂ ಸಹ ಬಹಳ ಸೊಗಸಾಗಿ ಈ ಕೆಳಗಿನ ವಿಡಿಯೋ ದಲ್ಲಿ ವಿವರಿಸಿದ್ದಾರೆ. ದಯವಿಟ್ಟು ನೋಡಿ, ಇತರರಿಗೂ ಹಂಚಿ ಪ್ರೋತ್ಸಾಹಿಸಿ.
Comments are closed.