Latest News

ಜಾಗತಿಕ ಉದ್ಯೋಗ ಸವಾಲುಗಳಿಗೆ ತಳಮಟ್ಟದ ನವೀನತೆ ಅಗತ್ಯ: ತಜ್ಞರ ಅಭಿಪ್ರಾಯ

ಮೈಸೂರು:- 2030ರ ವೇಳೆಗೆ ಜಗತ್ತಿನಾದ್ಯಂತ ಸುಮಾರು 800 ಮಿಲಿಯನ್ ಜನರು ಉದ್ಯೋಗಕ್ಕಾಗಿ ಎದುರು ನೋಡಲಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಸರ್ಕಾರಗಳು ಹಾಗೂ ಉದ್ಯೋಗ...
Latest News

ಫೆಬ್ರುವರಿ 30 ಸಿನಿಮಾ ಬಿಡುಗಡೆಗೆ ಉತ್ತಮ ಸ್ಪಂದನೆ: ನಿರ್ದೇಶಕ ಎಂ.ಎಲ್. ಪ್ರಶಾಂತ್

ಮೈಸೂರು :- ತಮ್ಮ ನಿರ್ದೇಶನದಲ್ಲಿ ಹಾಗೂ ಜೋಸೆಫ್ ಬೇಬಿ ನಿರ್ಮಾಣದಲ್ಲಿ ಮೂಡಿಬಂದಿರುವ “ಫೆಬ್ರುವರಿ 30” ಹೆಸರಿನ ಸುಮಾರು 93 ನಿಮಿಷಗಳ ಕನ್ನಡ ಚಲನಚಿತ್ರ ಈಗಾಗಲೇ ರಾಜ್ಯದ ವಿವಿಧ...
Latest News

ಮೈಸೂರಿನಲ್ಲಿ ಸೈಕಲ್ ದಿನದ ಸಂಭ್ರಮ: ಸ್ವಚ್ಛತಾ ಚಾಂಪಿಯನ್ನರಿಗೆ ಪಾಲಿಕೆ ಗೌರವ

ಮೈಸೂರು: ಸಾಂಸ್ಕೃತಿಕ ನಗರಿಯ ಪರಿಸರ ಸಂರಕ್ಷಣೆ ಮತ್ತು ನಾಗರಿಕರ ಆರೋಗ್ಯ ವೃದ್ಧಿಯ ಆಶಯದೊಂದಿಗೆ ಆಯೋಜಿಸಲಾಗಿದ್ದ ‘ಮೈಸೂರು ಸೈಕಲ್ ದಿನ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಮೈಸೂರು ಮಹಾನಗರ...
Latest News

ಜಾಗತಿಕ ಶೃಂಗಸಭೆಯ ಘಟನೆ ಕಾಂಗ್ರೆಸ್‌ನ ದುರುದ್ದೇಶ ಮನೋಭಾವಕ್ಕೆ ಸಾಕ್ಷಿ: ಸಂತೋಷ್ ಕುಮಾರ್

ಮೈಸೂರು: ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಜಾಗತಿಕ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ವರ್ತನೆ ರಾಷ್ಟ್ರದ ಗೌರವಕ್ಕೆ ಧಕ್ಕೆಯುಂಟುಮಾಡುವಂತದ್ದಾಗಿದೆ ಎಂದು ಮೈಸೂರು ಮಹಾನಗರ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಿರೋಧ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದ್ದರೂ, ದೇಶದ ಘನತೆಯನ್ನು ಹಾನಿಗೊಳಿಸುವ ರೀತಿಯ ನಡೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಜಾಗತಿಕ ವೇದಿಕೆಯಲ್ಲಿ ಅಸಭ್ಯ ರೀತಿಯ ಪ್ರತಿಭಟನೆ ನಡೆಸಿರುವುದು ಕಾಂಗ್ರೆಸ್‌ನ ಹೊಣೆಗಾರಿಕೆಯ ಕೊರತೆಯನ್ನು ತೋರಿಸುತ್ತದೆ. ದೇಶದ ಹಿತಕ್ಕಿಂತ ಪಕ್ಷಪರ ರಾಜಕೀಯವೇ ಮೇಲು ಎನ್ನುವ ಮನೋಭಾವವೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷ ದೇಶದ ಹಿತಾಸಕ್ತಿಗಳನ್ನು ಕಾಪಾಡಬೇಕಾದ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ವಿವಾದಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯುವಪೀಳಿಗೆಯನ್ನು ತಪ್ಪು ದಾರಿಗೆ ದೂಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ...
Latest News

ಜಿಲ್ಲಾ ಧಾರ್ಮಿಕ ಪರಿಷತ್ತು ಅತಂತ್ರ; ಭಕ್ತರ ಆಸ್ಥೆಗೆ ಕುತ್ತು

ಧಾರ್ಮಿಕ ಆಡಳಿತದಲ್ಲಿ ರಾಜಕೀಯದ ನೆರಳು; ಭಕ್ತರ ಆಸ್ಥೆಗೆ ಹಾಸನದಲ್ಲಿ ಕುತ್ತು : ಹುಂಡಿ ಹಣದ ಮೇಲೆ ಕಣ್ಣು, ಅಭಿವೃದ್ಧಿಗೆ ಬೆನ್ನು…? ರಘುನಂದನ್ ಎಸ್.ಎ ಹಾಸನ ಜಿಲ್ಲೆಯ ಐತಿಹಾಸಿಕ...
Latest News

ಪ್ರೀತಿ ಮದುವೆಗೆ ವಿರೋಧ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ ? ಎಲ್ಲವೂ ಭಸ್ಮ

ಮಂಡ್ಯ, ಫೆ.21: ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ಮಾವನೊಬ್ಬ ಅಳಿಯನ ಮನೆಗೆ ಬೆಂಕಿ ಹಚ್ಚಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚುಂಚಗಹಳ್ಳಿ ಗ್ರಾಮದ ವಿನೋದ್ ಹಾಗೂ ಕಾವ್ಯಾ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಕಾವ್ಯಾ ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕಳೆದ ಗುರುವಾರ ಈ ಜೋಡಿ ಮದುವೆಯಾಗಿದ್ದು, ಮದುವೆಯ ನಂತರ ಗ್ರಾಮದಲ್ಲೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಮಗಳ ಮದುವೆಯಿಂದ ಆಕ್ರೋಶಗೊಂಡಿದ್ದ ಕಾವ್ಯಾ ತಂದೆ ಚನ್ನೇಗೌಡ ಶನಿವಾರ ಬೆಳಿಗ್ಗೆ ಅಳಿಯ ವಿನೋದ್ ಅವರ ಮನೆಗೆ ಹೋಗಿ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಬೆಂಕಿ ವೇಗವಾಗಿ ಹಬ್ಬಿದ ಪರಿಣಾಮ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆಬರೆ, ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಅಡುಗೆ...
Latest News

22-02-2026 ರ ದಿನ ಭವಿಷ್ಯ

  ಮೇಷ: ಹಣಕಾಸಿನ ವ್ಯವಹಾರದಲ್ಲಿ ಲಾಭ ಗಳಿಕೆ. ತಾಮ್ರ, ಬೆಳ್ಳಿ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತದೆ. ಶುಭಸಂಖ್ಯೆ: 5 ವೃಷಭ: ತಾಂತ್ರಿಕ ಪದವೀಧರರಿಗೆ ಕೃಷಿಯತ್ತ ಒಲವು. ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:8 ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭಿವೃದ್ಧಿ. ವಾಹನ ಚಾಲಕರಿಗೆ ಅನಿರೀಕ್ಷಿತ ಲಾಭ. ವಿವಾಹಕ್ಕೆ ಕಂಕಣ ಕೂಡಿಬರಲಿದೆ. ಶುಭಸಂಖ್ಯೆ:7 ಕಟಕ: ಸಮಾಜಸೇವೆಯಿಂದ ಜನಪ್ರಿಯತೆ. ಮಕ್ಕಳ ಆರೋಗ್ಯ ಗಮನಿಸಿ. ರಾಜಕೀಯದಲ್ಲಿ ಯಶ. ಸೀರೆ ವ್ಯಾಪಾರದಿಂದ ಹಣ ಗಳಿಕೆ. ಶುಭಸಂಖ್ಯೆ:2 ಸಿಂಹ: ಚರ್ಮವ್ಯಾಧಿ ಬಾಧಿಸೀತು ಎಚ್ಚರ. ಹಾಡುಗಾರರಿಗೆ ಉತ್ತಮ ಅವಕಾಶ. ಕಲಾವಿದರು, ಸಮಾಜ ಸೇವಕರಿಗೆ, ಶುಭದಾಯಕ ದಿನ. ಶುಭಸಂಖ್ಯೆ: 3 ಕನ್ಯಾ: ಪೂಜಾ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ. ಅಡಕೆ ಫಸಲಿಗೆ ಬೇಡಿಕೆ. ಉದ್ಯೋಗಸ್ಥ ಮಹಿಳೆಯರ ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 2 ತುಲಾ: ಕಬ್ಬಿಣ ,ಮರಳು ಮಾರಾಟಸ್ಥರಿಗೆ ಅಧಿಕಾರಿಗಳಿಂದ ಕಿರಿಕಿರಿ....
Latest News

ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜಿನಲ್ಲಿ ಸಾಹಿತ್ಯ ಜಾಗೃತಿ ಕಾರ್ಯಕ್ರಮ

ಮೈಸೂರು:- ಅಂತರರಾಷ್ಟ್ರೀಯ ತಾಯಿ ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜು (ಸ್ವಾಯತ್ತ), ಬನ್ನಿಮಂಟಪದಲ್ಲಿ ಫೆಬ್ರವರಿ 21, 2026 ರಂದು ಸಾಹಿತ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ...
Latest News

ಸಿವಿಲ್ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕಾರ: ಸಹೋದರಿ ಸೌಂದರ್ಯರಿಗೆ ಭಾವಪೂರ್ಣ ಅಭಿನಂದನೆ

ಮೈಸೂರು:- ನ್ಯಾಯಾಂಗ ಕ್ಷೇತ್ರದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಆರಂಭವಾಗಿದ್ದು, ಸಹೋದರಿ ಸೌಂದರ್ಯ ಅವರು ಸಿವಿಲ್ ನ್ಯಾಯಾಧೀಶೆಯಾಗಿ ನ್ಯಾಯಪೀಠ ಅಲಂಕರಿಸಿದ ಸಂದರ್ಭವು ಭಾವನಾತ್ಮಕ ಹಾಗೂ ಗಂಭೀರ ವಾತಾವರಣಕ್ಕೆ ಸಾಕ್ಷಿಯಾಯಿತು. ನ್ಯಾಯದ ತಕ್ಕಡಿಯನ್ನು ಸಮತೋಲನದಲ್ಲಿ ಹಿಡಿದುಕೊಂಡು, ನೊಂದವರ ಪಾಲಿಗೆ ನ್ಯಾಯದ ಬೆಳಕಾಗುವ ಸಂಕಲ್ಪದೊಂದಿಗೆ ಅವರು ತಮ್ಮ ವೃತ್ತಿ ಜೀವನದ ಹೊಸ ಪಯಣ ಆರಂಭಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬಂಧುಮಿತ್ರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಮಹದೇವ ಸ್ವಾಮಿ ಹಾಗೂ ಕಡಕೋಳ ಕುಮಾರಸ್ವಾಮಿ ಅವರು ಸಹೋದರಿ ಸೌಂದರ್ಯರನ್ನು ಆತ್ಮೀಯವಾಗಿ ಅಭಿನಂದಿಸಿದರು. ಮಾತನಾಡಿದ ಮಹದೇವ ಸ್ವಾಮಿ ಅವರು, “ಸೌಂದರ್ಯ ಅವರು ತಮ್ಮ ಶ್ರಮ, ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಈ ಹಂತವನ್ನು ತಲುಪಿದ್ದಾರೆ. ನ್ಯಾಯಪೀಠದಲ್ಲಿ ಕುಳಿತುಕೊಳ್ಳುವುದು ಒಂದು ಹುದ್ದೆಯಲ್ಲ, ಅದು ಸಮಾಜದ ಮೇಲೆ ಇರುವ ಅಪಾರ ಹೊಣೆಗಾರಿಕೆಯ ಪ್ರತೀಕ....
Latest News

ಟಿ. ನರಸೀಪುರದಲ್ಲಿ ಹಲವು ದಶಕಗಳ ಕನಸು ನನಸು: 5 ಎಕರೆ ಭೂಮಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

ಎಂ.ನಾಗೇಂದ್ರಕುಮಾರ್ ಟಿ. ನರಸೀಪುರ, ಫೆ. 20: ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಎದುರು ನೋಡುತ್ತಿದ್ದ ತಾಲ್ಲೂಕು ಕ್ರೀಡಾಂಗಣ ನಿರ್ಮಾಣದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ....
1 12 13 14 15 16 49
Page 14 of 49