ಬಾಳಿ ಬದುಕಬೇಕಿದ್ದವರು ಬದುಕಿನ ಪಯಣಕ್ಕೆ ತಿಲಾಂಜಲಿ ಇಟ್ಟು ನಿರ್ಗಮನಕ್ಕೆ ಮನ ಮಾಡಿಯಾಗಿತ್ತು. ಬಾರದಾ ಲೋಕಕ್ಕೆ ಹೋಗಿಬಿಡುವ ನಿರ್ಣಯ ಕೈಗೊಂಡಾಗಿತ್ತು. ರಾತ್ರಿ ಮಲಗಿದವರು ಮುಂಜಾನೆ ಮೇಲೇಳಲಿಲ್ಲ.
೦೨/೦೬/೨೦೨೧ ಹೆಚ್.ಮೂಕಹಳ್ಳಿಗೆ ಅತ್ಯಂತ ಕರಾಳ, ಕರುಳನೇ ಹಿಂಡಿದ ದುರ್ದಿನ. ಕೊರೋನಾ ಸೋಂಕಿತರಿಗೆ ದೈರ್ಯ ತುಂಬಿ ಅವರೊಡನೆ ಮಾನವೀಯತೆಯಿಂದ ವರ್ತಿಸಿ. ವಾಸಿಯಾಗುವ ಸಾಮಾನ್ಯ ಸೋಂಕು ಇದು ಎಂದು ತಿಳಿಯಪಡಿಸಿ. ತಿರಸ್ಕಾರ, ಅಪಹಾಸ್ಯ, ನೋಡುವ ದೃಷ್ಟಿಕೋನ ಬದಲಾಗದಿರಲಿ.
ಮನದ ತಪ್ಪುಗ್ರಹಿಕೆಯ ಫಲವಾಗಿ ಗ್ರಾಮದ ಒಂದೇ ಕುಟುಂಬದ ನಾಲ್ಕು ಅಮೂಲ್ಯ ಜೀವಗಳು ಕೊರಳೊಡ್ಡಿ ಉಸಿರ ಚೆಲ್ಲಿವೆ. ಕೊರೋನಾ ದುರ್ದೆಸೆಯೋ, ಮಾನವನ ಅಮಾನವೀಯತೆಯ ಅನಾವರಣವೋ? ಅರಿಯದಾಗಿದೆ.
ತಿಳಿದವರು ಅರಿಯದವರಿಗೆ ಅರಿವು ಮೂಡಿಸಿ, ಅಮೂಲ್ಯವಾದ ಜೀವಗಳುಳಿಸಿ, ಸಹಾಯ, ನೆರವು ಅಗತ್ಯತೆಗಳನ್ನು ಬದುಕಿರುವಾಗಲೇ ಪೂರೈಸಿ. ಸತ್ತಾಗ ಕಂಬನಿ ಸುರಿಸಿ, ಸಂಕಟಪಟ್ಟು ಹಲ್ಲಿಯಂತೆ ಶಕುನ ನುಡಿಯುವುದ ಬಿಡಿ. ರೋಗ ವಾಸಿಯಾಗುತ್ತದೆ, ರೋಗಗ್ರಸ್ತ ಮನಸ್ಸುಗಳು ಅಂತರ ಪಿಶಾಚಿಗಳಂತೆ ಅಲೆದಾಡುತ್ತವೆ. ಸಮಯ, ಸಾವು ಯಾರಿಗೂ ಕಾಯಲಾರವು. ಜೀವನ ಅತ್ತಮೂಲ್ಯವಾದದ್ದು. ಮಾನವೀಯತೆಯಿರಲಿ, ಮನುಜಮತ ಮಾಸದಿರಲಿ, ಜಾಹ್ರತೆಯಿರಲಿ, ದೈರ್ಯವಿರಲಿ, ಬದುಕೇ ತೀರುವೆನೆಂಬ ಆತ್ಮವಿಶ್ವಾಸ ದೃಢವಾದ ನಂಬಿಕೆಯಿರಲಿ.
ಹುಟ್ಟಿದವರು ಸಾಯಲೇ ಬೇಕು ನಿಜ, ಆದರದು ಸಹಜವಾಗಿ ಆಗಮನವಾಗಲಿ ಮನುಜ.