ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞಕೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ
ಮೈಸೂರು :- ಅವಧೂತ ದತ್ತಪೀಠದ ವತಿಯಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದ ಭಿತ್ತಿಪತ್ರವನ್ನ ಶ್ರೀದತ್ತವಿಜಯಾನಂದ ಸ್ವಾಮೀಜಿ ಮತ್ತು ಶಾಸಕ ಟಿಎಸ್ ಶ್ರೀವತ್ಸ ರವರು ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಆವರಣದಲ್ಲಿ ಬಿಡುಗಡೆ ಮಾಡಿದರು, ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರು ಮಾತನಾಡಿ *ಹನುಮಾನ್ ಚಾಲೀಸ ಪಠಣದಿಂದ ಮನುಷ್ಯನ ಆಯಸ್ಸು ಆರೋಗ್ಯ ವೃದ್ಧಿಸುವ ಜೊತೆಯಲ್ಲೆ ಆಂಜನೇಯನ ಶಕ್ತಿಯಿಂದ ಇಡೀ ಭೂಮಂಡಲವೇ ರಕ್ಷಣೆಯಾಗುತ್ತಿದೆ, ರಾಮ ಸೀತೆಯನ್ನು ಒಂದು ಮಾಡಿದ ಹನುಮ ಶಕ್ತಿ ಅಪಾರವಾದುದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಫಬ್ರವರಿ 14ರಂದು ಲಕ್ಷಾಂತರ ಮಂದಿಯಿಂದ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಿ ಎಂದು ಕರೆ ನೀಡಿದರು, ಪ್ರತಿಯೊಬ್ಬರಿಗೂ ಅನ್ನಪ್ರಸಾದ ಹನುಮರಕ್ಷೆಯನ್ನ ನೀಡಲಿದ್ದು...






