ಮೈಸೂರು ವಿಶ್ವವಿದ್ಯಾನಿಲಯ ಚೆಸ್ ತಂಡಕ್ಕೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರ ಆಯ್ಕೆ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಚೆಸ್ ತಂಡಕ್ಕೆ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು, ಕಾಲೇಜಿಗೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಾದ ಭವಾನಿ ಸಿ.ಎಸ್ (ತೃತೀಯ ಬಿಎಸ್ಸಿ), ಪೂರ್ವಿ ಡಿ.ಎಸ್ (ತೃತೀಯ ಬಿಎಸ್ಸಿ) ಹಾಗೂ ದೇವಿಕಾ (ದ್ವಿತೀಯ ಬಿಸಿಎ) ಅವರು ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಚೆಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ಭವಾನಿ ಸಿ.ಎಸ್ ಅವರನ್ನು ತಂಡದ ನಾಯಕಿಯಾಗಿ ನೇಮಕ ಮಾಡಲಾಗಿದ್ದು, ಅವರ ನಾಯಕತ್ವದಲ್ಲಿ ತಂಡವು ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗುತ್ತಿದೆ. ಚೆಸ್ ಆಟದಲ್ಲಿ ಉತ್ತಮ ತಂತ್ರಜ್ಞಾನ, ಧೈರ್ಯ ಹಾಗೂ ಏಕಾಗ್ರತೆಯನ್ನು ತೋರಿಸಿರುವ ಈ ವಿದ್ಯಾರ್ಥಿನಿಯರು ಕಾಲೇಜು ಮಟ್ಟದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ:- ನಾಯಕತ್ವ ಚರ್ಚೆಗಳ ಮಧ್ಯೆ ಡಾ. ಜಿ....






