ಮರ್ಯಾದಾ ಹ* ಬೆಚ್ಚಿಬೀಳಿಸಿದ ಘಟನೆ: ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊ*, ಶವ ಸುಟ್ಟು ಸಾಕ್ಷಿ ನಾಶ
ಚಿಕ್ಕೋಡಿ: ಸಮಾಜದ ಕಠಿಣ ಮನೋಭಾವ ಇನ್ನೂ ಜೀವಂತವಿದೆ ಎನ್ನುವಂತೆ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಅಮಾನವೀಯ ಮರ್ಯಾದಾ ಹ* ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಮಹಿಳೆಯನ್ನು ಕುಟುಂಬಸ್ಥರೇ ಕರೆತಂದು ವಿಷ ಕುಡಿಸಿ ಕೊ* ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟಿರುವ ಘಟನೆ ಎಲ್ಲೆಡೆ ಆತಂಕ ಹುಟ್ಟಿಸಿದೆ. ಕೊ* ಯಾದ ಮಹಿಳೆಯನ್ನು ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಆಕೆ ಇದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಕುಟುಂಬಸ್ಥರು ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೇಳವಿ ಎಂಬಾತನೊಂದಿಗೆ ಆಕೆಯ ವಿವಾಹ ಮಾಡಿಸಿದ್ದರು. ಆದರೆ ಮದುವೆಯಾದ ನಂತರವೂ ಸತ್ತೆವ್ವಾ ತನ್ನ ಪ್ರೀತಿಯ ಸಂಬಂಧವನ್ನು ಮುಂದುವರಿಸಿಕೊಂಡಿದ್ದಳು. ಗಂಡನ ಮದ್ಯಪಾನದ ಅಭ್ಯಾಸ ಹಾಗೂ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ಫೆಬ್ರವರಿ 17ರಂದು ಸತ್ತೆವ್ವಾ ಗಂಡನ ಮನೆಯಿಂದ ಹೊರಬಂದು ಕೃಷ್ಣಾ ಪಾಟೀಲ್...


