01-03-2026 ರ ದಿನ ಭವಿಷ್ಯ
ಮೇಷ: ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರದಲ್ಲಿ ಲಾಭ. ವಾಹನ ಚಾಲಕರಿಂದ ಮಾಲೀಕರಿಗೆ ಲಾಭ, ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 5 ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭ. ಸ್ವಯಂ ಉದ್ಯೋಗದ ಮಹಿಳೆಯರಿಗೆ ಯಶಸ್ಸು. ವಿದೇಶಿ ಪದಾರ್ಥಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 1 ಮಿಥುನ: ಕಚೇರಿಯ ಕೆಲಸದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಇಂದು ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ. ಶುಭಸಂಖ್ಯೆ: 7 ಕಟಕ: ಸಮಾಜಸೇವೆಯಿಂದ ಜನಪ್ರಿಯತೆ ಸಿಗಲಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ: 1 ಸಿಂಹ: ಚರ್ಮವ್ಯಾಧಿ ಉಳ್ಳವರಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. ಹಾಡುಗಾರರಿಗೆ ಉತ್ತಮ ಅವಕಾಶ. ಕಲಾವಿದರಿಗೆ ಆತ್ಮವಿಶ್ವಾಸದಿಂದ ಕೀರ್ತಿ. ಶುಭಸಂಖ್ಯೆ: 3 ಕನ್ಯಾ: ಪೂಜಾ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಆರ್ಥಿಕ ಚೇತರಿಕೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 7 ತುಲಾ: ರಿಯಲ್ ಎಸ್ಟೇಟ್ನಲ್ಲಿ ಲಾಭ. ವಿದ್ಯುತ್ಸ್ಥಾವರದ ಕಾರ್ವಿುಕರಿಗೆ...





