Latest News

Latest News

2030ರ ವೇಳೆಗೆ ಶೇ.85 ಉದ್ಯೋಗಗಳಲ್ಲಿ ಬದಲಾವಣೆ: ವಿಟಿಯು ಕುಲಪತಿ ಎಸ್. ವಿದ್ಯಾಶಂಕರ್

ಮೈಸೂರು:-  ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಮಹತ್ವ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೋಧನೆ–ಕಲಿಕೆಯ ಪ್ರಕ್ರಿಯೆಯಲ್ಲಿ ಎಐ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು...
Latest News

ಗರ್ಭಕಂಠ ಕ್ಯಾನ್ಸರ್ ನಿರೋಧಕ (ಹೆಚ್.ಪಿ.ವಿ) ಲಸಿಕಾ ಅಭಿಯಾನ

ಮೈಸೂರು, ಮಾ.10 :- 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ (ಹೆಚ್.ಪಿ.ವಿ) ಲಸಿಕಾ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾಂರಭವನ್ನು ಎಸ್.ಎಂ.ಟಿ ಆಸ್ಪತ್ರೆ...
Latest News

10-03-2026 ರ ರಾಶಿ ದಿನಭವಿಷ್ಯ

ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಬಹುಕಾಲದಿಂದ ಕಾಯುತ್ತಿದ್ದ ಕೆಲಸದ ವಿಷಯದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿದರೆ ಒಳಿತು. ಸ್ನೇಹಿತರ ಸಹಾಯದಿಂದ ಒಂದು ಸಮಸ್ಯೆಗೆ ಪರಿಹಾರ ಸಿಗಬಹುದು. ಆರೋಗ್ಯ ಸಾಮಾನ್ಯವಾಗಿರುತ್ತದೆ ಆದರೆ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಗಮನ ಹೆಚ್ಚಾಗುತ್ತದೆ. ಸಂಜೆ ವೇಳೆಗೆ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಶುಭ ಬಣ್ಣ: ಕೆಂಪು ಶುಭ ಸಂಖ್ಯೆ: 9 ವೃಷಭ ರಾಶಿ ವೃಷಭ ರಾಶಿಯವರಿಗೆ ಇಂದು ಸ್ವಲ್ಪ ಶ್ರಮದ ದಿನವಾಗಿರಬಹುದು. ಕೆಲಸದಲ್ಲಿ ಹೆಚ್ಚು ಜವಾಬ್ದಾರಿ ಬರಬಹುದು ಆದರೆ ಅದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭದ ಸೂಚನೆಗಳಿವೆ. ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಸಿಗುವ ಸಾಧ್ಯತೆ ಇದೆ....
Latest News

ಸಮಸ್ತ ಸೃಷ್ಟಿಯ ಮೂಲ ಹೆಣ್ಣು,ಗಂಡಿನ ಜೀವನ ಬೆಳಗುವವಳೆ ಹೆಣ್ಣು : ವಿದ್ಯಾ ಅಭಿಮತ

ಮೈಸೂರು :-  ನಗರದ ವಿದ್ಯಾರಣ್ಯಪುರಂನಲ್ಲಿರುವ ಸುಬ್ಬಣ್ಣ ಹಾಸ್ಟೆಲ್ ನ ವಿದ್ಯಾರ್ಥಿ  ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಡ್ರೈ ಫ್ರೂಟ್ಸ್,ಹಣ್ಣು ಹಂಪಲ, ವಿತರಿಸುವ ಸೇವಾ ಕಾರ್ಯದೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರ ಜೀವನದ ಯಶಸ್ಸಿನ ಹಿಂದೆ ಹೆಣ್ಣಿನ ಬಹುದೊಡ್ಡ ಪಾತ್ರದ ಬಗ್ಗೆ  ತಿಳಿಸುವ ಮೂಲಕ  ವಿಶ್ವ ಮಹಿಳಾ ದಿನಾಚರಣೆಯನ್ನು ಸ್ನೇಹ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕಿ ವಿದ್ಯಾ ಸಮಸ್ತ ಸೃಷ್ಟಿಯ ಮೂಲ ಹೆಣ್ಣು.ಹೆಣ್ಣು ಸಂಸಾರದ ಕಣ್ಣು ಎಂಬ ನಾಣ್ಣುಡಿಯಂತೆ ಪ್ರತಿ ಕುಟುಂಬದಲ್ಲೂ ಹೆಣ್ಣಿನ ಪಾತ್ರ ಮಹತ್ವದ ಆಗಿರುತ್ತದೆ ತಾಯಿಯಾಗಿ, ಮಡದಿಯಾಗಿ, ಮಗಳಾಗಿ ಸಹೋದರಿಯಾಗಿ ಸ್ನೇಹಿತೆಯಾಗಿ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವ ಈ ಹೆಣ್ಣಿನ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿ...
Latest News

ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ಯೋಜನೆ ಕೈಬಿಟ್ಟ ಸರ್ಕಾರಕ್ಕೆ ಅಭಿನಂದನೆ ಕನ್ನಡಪರ ಹೋರಾಟಗಾರ ಎಸ್.ಕೆ. ರಾಜೂಗೌಡ ಅಭಿಪ್ರಾಯ

ವರದಿ :- ನಾಗೇಂದ್ರ ಕುಮಾರ್ ಟಿ.ನರಸೀಪುರ, ಮಾ.09: ಪಟ್ಟಣದಲ್ಲಿರುವ ಪಾರಂಪರಿಕ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಕೈಬಿಟ್ಟಿರುವುದಕ್ಕೆ ಕನ್ನಡಪರ ಹೋರಾಟಗಾರ ಎಸ್.ಕೆ. ರಾಜೂಗೌಡ ಸಂತೋಷ ವ್ಯಕ್ತಪಡಿಸಿ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಹಲವು ವರ್ಷಗಳ ಇತಿಹಾಸ ಹೊಂದಿರುವ ಟಿ.ನರಸೀಪುರದ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆ ಕಾರ್ಖಾನೆಯ ಭವಿಷ್ಯ ಹಾಗೂ ಅಲ್ಲಿನ ಕಾರ್ಮಿಕರ ಜೀವನಕ್ಕೆ ಧಕ್ಕೆಯಾಗುವ ಸಾಧ್ಯತೆ ಇತ್ತು. ಇಂತಹ ಯೋಜನೆಯನ್ನು ರದ್ದುಗೊಳಿಸಿರುವ ಸರ್ಕಾರದ ನಿರ್ಧಾರವು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಪಾರಂಪರಿಕ ಕಾರ್ಖಾನೆಯ ಅವನತಿಗೆ ಕಾರಣವಾಗಬಹುದಾಗಿದ್ದ ಈ ಯೋಜನೆಯನ್ನು ಕೈಬಿಟ್ಟಿರುವುದರಿಂದ ಕಾರ್ಖಾನೆಯ ಉಳಿವು ಹಾಗೂ ಅಲ್ಲಿನ ನೌಕರರ ಉದ್ಯೋಗ ಭದ್ರತೆಗೆ ಆಶಾಕಿರಣ ಮೂಡಿದೆ. ಮುಖ್ಯಮಂತ್ರಿಗಳ ಕ್ಷೇತ್ರವಾದ ಟಿ.ನರಸೀಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ರೇಷ್ಮೆ ಕಾರ್ಖಾನೆಯನ್ನು...
Latest News

ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಕೈಬಿಟ್ಟ ಸರ್ಕಾರ ; 18 ದಿನಗಳ ಕಾರ್ಮಿಕರ ಹೋರಾಟ ಅಂತ್ಯ

ವರದಿ :- ನಾಗೇಂದ್ರ ಕುಮಾರ್ ಟಿ.ನರಸೀಪುರ, ಮಾ.09: ಪಟ್ಟಣದ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾವನೆಗೆ ವಿರೋಧವಾಗಿ ಕಾರ್ಮಿಕರು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ...
Latest News

ಮಹಿಳಾ ದಿನಾಚರಣೆ ಅಂಗವಾಗಿ ರಾಜಮಾತೆ ಕೆಂಪನಂಜಮಣಿ ಸ್ಮರಣೆ ವೀರ ಸಾವರ್ಕರ್ ಯುವ ಬಳಗದಿಂದ ಕಾರ್ಯಕ್ರಮ

ಮೈಸೂರು, ಮಾ.09: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ...
Latest News

ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಬಲವರ್ಧನೆಗೆ ದಾರಿ: ಎಸ್. ಅರುಣ್ ಕುಮಾರ್

ಮೈಸೂರು, ಮಾ.09:- ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಸಹಕಾರಿಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ...
Latest News

ಸ್ವಚ್ಛತಾ ಜಾಗೃತಿ ರೋಡ್ ಶೋಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಚಾಲನೆ: ಸ್ವಚ್ಛ ಮೈಸೂರು ನಿರ್ಮಾಣಕ್ಕೆ ನಾಗರಿಕರ ಸಹಕಾರ ಅಗತ್ಯ

ಮೈಸೂರು, ಮಾ.08:- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಭವ್ಯ ಸ್ವಚ್ಛತಾ ಜಾಗೃತಿ ರೋಡ್ ಶೋಗೆ...
Latest News

ಮಹಿಳಾ ದಿನಾಚರಣೆಯ ಅಂಗವಾಗಿ 16 ಮಹಿಳೆಯರಿಗೆ ಸನ್ಮಾನ: ಜನನಿ ಸೇವಾ ಟ್ರಸ್ಟ್ ವತಿಯಿಂದ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ

ಮೈಸೂರು, ಮಾ.8:- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಾಗೂ ಸಮಾಜ ಸೇವೆಗೆ ಅಪಾರ ಕೊಡುಗೆ ನೀಡಿದ ಮಹಿಳೆಯರನ್ನು ಗೌರವಿಸುವ ಉದ್ದೇಶದಿಂದ ಮೈಸೂರಿನ ಜನನಿ ಸೇವಾ ಟ್ರಸ್ಟ್ (ರಿ)...
1 8 9 10 11 12 45
Page 10 of 45