“ನಾನಾ ಕಾಫಿರ” ಪುಸ್ತಕ ಬಿಡುಗಡೆಗೆ ಸಜ್ಜಾದ ಮೈಸೂರು: ಖ್ಯಾತ ಗಣ್ಯರ ಸಾನ್ನಿಧ್ಯದಲ್ಲಿ ಸಾಹಿತ್ಯ ಸಂಭ್ರಮಕ್ಕೆ ವೇದಿಕೆ
ಮೈಸೂರು, ಮಾ.21: ನಗರದ ಇನ್ಫೋಸಿಸ್ ಸಮೀಪದ ಸ್ಕ್ಷಾನ್ ರೇ ಹೆಲ್ತ್ ಕೇರ್ ಸಭಾಂಗಣದಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 10 ಗಂಟೆಗೆ “ನಾನಾ ಕಾಫಿರ” ಕೃತಿಯ ಭವ್ಯ ಬಿಡುಗಡೆ ಸಮಾರಂಭ ನಡೆಯಲಿದ್ದು, ಸಾಹಿತ್ಯಾಸಕ್ತರು ಹಾಗೂ ಬೌದ್ಧಿಕ ವಲಯದ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ್ತಿ ಶ್ರೀಮತಿ ಸಹನಾ ವಿಜಯ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಆದಿಚುಂಚನಗಿರಿ ಮಠ, ಮೈಸೂರು ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜೊತೆಗೆ ಆರ್‌ಎಸ್‌ಎಸ್ ದಕ್ಷಿಣ...







