Latest News

ಶ್ರೀ ಭೂನೀಳಾ ಅರವಿಂದ ನಾಯಕಿ ಸಮೇತ ಯೋಗಾನರಸಿಂಹ ಸ್ವಾಮಿ ಮಹೋತ್ಸವ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್.ನಗರ. ಏ. 17:- ಸಾಲಿಗ್ರಾಮ ಪಟ್ಟಣದಲ್ಲಿರುವ ಶ್ರೀ ಭೂನೀಳಾ ಶ್ರೀ ಅರವಿಂದ ನಾಯಕಿ ಸಮೇತ ಶ್ರೀ ಯೋಗಾನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವವು ಏ.22ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಅಯ್ಯಂಗಾರ್ ತಿಳಿಸಿದರು. ಅವರು ಪಟ್ಟಣದ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವಾಲಯದಲ್ಲಿ ಏ.17 ರಿಂದ 25ರ ವರೆಗೆ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನ ಪೀಠದ ಧನುರ್ದಾಸೆ ರಾಮಾನುಜ ಜೀಯರ್ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ವಿವಿಧ ದೇವತಾ ಕಾರ್ಯಗಳು ಹಾಗೂ ಉತ್ಸವಗಳು ನಡೆಯಲಿವೆ ಎಂದರು.
ಏ.17ರಂದು ಸಾಯಂಕಾಲ ಉತ್ಸವ ಅಂಕುರಾರ್ಪಣ, ಹೋಮ, ಏ. 18ರಂದು ಶ್ರೀ ವಡಹನಂಬಿ ಆಚಾರ್ಯರ ತಿರುನಕ್ಷತ್ರ ಬೆಳಿಗ್ಗೆ ಉತ್ಸವ ಧ್ವಜಾರೋಹಣ, ಸಾಯಂಕಾಲ ಭೇರಿತಾಡನ ಯಾಗ ಶಾಲಾ ಪ್ರವೇಶ, ಏ.19ರಂದು ಬೆಳಿಗ್ಗೆ ಸರ್ಕಾರಿ ಉತ್ಸವ ರಾತ್ರಿ ಹೂವಿನ ಚಪ್ಪರದ ಉತ್ಸವ,
ಏ.20ರಂದು ಬೆಳಿಗ್ಗೆ ಸರ್ಕಾರಿ ಉತ್ಸವ ರಾತ್ರಿ ಪ್ರಹಲ್ಲಾದ ಪರಿಪಾಲನೋತ್ಸವ, ಕಲ್ಯಾಣೋತ್ಸವ, ಏ.21ರಂದು ಬೆಳಿಗ್ಗೆ ಗರುಡೋತ್ಸವ ಮತ್ತು ಸರ್ಕಾರಿ ಉತ್ಸವ ರಾತ್ರಿ ಗಜೇಂದ್ರ ವಾಹನೊತ್ಸವ ಗಜೇಂದ್ರ ಮೋಕ್ಷ ಉಪನ್ಯಾಸ ಸೇವೆ,
ಏ.22ರಂದು ಬ್ರಹ್ಮ ರಥೋತ್ಸವ ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ ಪಾನಕ ಪೂಜೆ ರಥೋತ್ಸವದ ಹತ್ತಿರ ರಾತ್ರಿ ಶಾಂತೋತ್ಸವ, ಏ.23ರಂದು ಬೆಳಿಗ್ಗೆ ಶ್ರೀ ಮೊದಲಿಯಾoಡನ್ ತಿರುನಕ್ಷತ್ರ, ಸಾಯಂಕಾಲ ಪಲ್ಲಕ್ಕಿ ಉತ್ಸವ, ಶಯನೋತ್ಸವ


ಅಶ್ವವಾಹನೋತ್ಸವ, ಏ.24ರಂದು ಬೆಳಿಗ್ಗೆ ತೀರ್ಥೋತ್ಸವ, ಸಾಯಂಕಾಲ ತೆಪ್ಪೋತ್ಸವ, ರಾತ್ರಿ ಧ್ವಜ ಅವರೋಹಣ, ಯಾಗ ಶಾಲಾ ಪೂರ್ಣಾಹುತಿ, ಏ.25ರಂದು ಬೆಳಿಗ್ಗೆ ಮಹಾಭಿಷೇಕ ದ್ವಾದಶಾರಾಧನೆ ಮಹಾಕುಂಭ ಪ್ರೋಕ್ಷಣೆ ಉಭಯವೇಧ ಶಾರತ್ ಮೊರೈ, ಸಾಯಂಕಾಲ ಹನುಮಂತೋತ್ಸವ ನಡೆಯಲಿವೆ ಎಂದರು.
ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನ ಪೀಠದ ಶ್ರೀ ಧನುರ್ದಾಸೆ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿ ಅತ್ಯಂತ ಪವಿತ್ರವಾದ ಹಾಗೂ ಇತಿಹಾಸ ಪ್ರಸಿದ್ಧವಾಗಿರುವ ಬ್ರಹ್ಮ ರಥೋತ್ಸವ ಹಾಗೂ ದೇವತಾ ವಿಶೇಷ ಪೂಜಾ ಕಾರ್ಯಗಳೊಂದಿಗೆ ಉತ್ಸವಗಳು ನಡೆಯಲಿವೆ. ಈ ದೇವತಾ ಕಾರ್ಯದಲ್ಲಿ ಸರ್ವರು ಪಾಲ್ಗೊಂಡು ದೇವರ ಕಾರ್ಯವನ್ನು ಯಶಸ್ವಿಯಾಗಿ ಮಾಡಬೇಕು. ಪಟ್ಟಣ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಈ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರುಗಳು, ಸಾರ್ವಜನಿಕರುಗಳು ಆಗಮಿಸಲಿದ್ದು ಅವರೆಲ್ಲರಿಗೂ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಇದಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದರು. ದೇವತಾ ಕಾರ್ಯದಲ್ಲಿ ಸಾರ್ವಜನಿಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಎಸ್.ಎಂ.ಸೋಮಣ್ಣ, ಮುಖಂಡರುಗಳಾದ ಅಂಜನಿಗೌಡ,ಸಾ ರಾ ಸತೀಶ್, ಸಾ.ರಾ.ಗುರುಪ್ರಸಾದ್, ಎಸ್.ವಿ.ನಟರಾಜ್, ಪಾಪಣ್ಣ, ಎಲ್ಐಸಿ ಭಾಸ್ಕರ, ಜ್ಯೋತಿವೆಂಕಟೇಶ್, ಸೋಮು, ಮಂಜುನಾಥ, ಲೋಕೇಶ್, ಕಿರಣ್, ಮಣಿ, ವಿಶ್ವನಾಥ್, ಕುಮಾರ್, ಅಭಿ ಧನುಷ್, ಹರ್ಷ, ನರಸಿಂಹೇಗೌಡ ಸೇರಿದಂತೆ ಹಲವರು ಇದ್ದರು.

Contact us for classifieds and ads : +91 9742974234