Latest News

ಏಪ್ರಿಲ್ 19 ರಂದು ಭಕ್ತಾದಿಗಳಿಂದ ಆರು ಕೋಟಿ ರಾಮನಾಮ ಜಪ ಹಾಗೂ ರಾಮ ತಾರಕ ಹೋಮ

ಮೈಸೂರು: ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹ ಸಂಸ್ಥಾನ ಶ್ರೀ ಮದುತರದಿ ಮಠಾಧೀಶರಾದ
ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳರವರ ಶ್ರೀ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಅಭಿವೃದ್ಧಿ ಹಿಂದೂ ಸಮಾಜದ ಸಂಘಟನೆ ಹಾಗೂ ರಾಮ ರಾಜ್ಯದ ಸಕಾರಾತೆಗಾಗಿ
ಭಕ್ತಾದಿಗಳಿಂದ ಆರು ಕೋಟಿ ರಾಮನಾಮ ಜಪವನ್ನು
ಯಾದವಾಗಿರಿಯಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19 ರಂದು ಬೆಳಗ್ಗೆ 9 ಗಂಟೆಗೆ ರಾಮ ತಾರಕ ಹೋಮ ಹಾಗೂ 11 ಗಂಟೆಗೆ ಸಾಮೂಹಿಕ ರಾಮನಾಮ ಜಪವನ್ನು ಆಯೋಜಿಸಿದ್ದು ಅದರ ಪೋಸ್ಟರ್ ಅನ್ನು ಯಾದವ್ ಗಿರಿಯ ಕೆ ಆರ್ ಎಸ್ ರಸ್ತೆಯಲ್ಲಿರುವ ಶ್ರೀ ಉಸಿರಾಜು ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷರಾದ ಎನ್ ಎಂ ನವೀನ್ ಕುಮಾರ್
ಬಿಡುಗಡೆಗೊಳಿಸಿ
ಮಾತನಾಡಿದ ಅವರು
ಇಂತಹ ಧಾರ್ಮಿಕ ಕಾರ್ಯಕ್ರಮಕ್ಕೆ ಜಾತ್ಯತೀತ ಪಕ್ಷತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು

ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಮಹೇಶ್ ಕಾಮತ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, AKBMS ರಾಜ್ಯ ಕಾರ್ಯಕಾರಣಿ ಸದಸ್ಯ ಎಸ್ ಬಿ ವಾಸುದೇವಮೂರ್ತಿ, ಆರ್ ಎಸ್ ಸತ್ಯನಾರಾಯಣ್, ಟಿ ಎಸ್ ಅರುಣ್, ಪ್ರಮೋದ್ ಆಚಾರ್, ವಿಜಯ ವಿಠಲಾಚಾರ್ ಕಾಡ್ಲೂರು, ಪ್ರಧಾನ ಅರ್ಚಕರಾದ ನಾಗಭೂಷಣ್, ಗುರು, ವಕೀಲರಾದ ಚಂದ್ರಶೇಖರ್ ಬಿ ಆರ್, ಚರಣ್ ಹಾಗೂ ಇನ್ನಿತರರು ಹಾಜರಿದ್ದರು

Contact us for classifieds and ads : +91 9742974234