Latest News

ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ :  ಶೋಷಿತ ಸಮುದಾಯಗಳ ಹಿತಕ್ಕಾಗಿ ಅವಿರತ ಶ್ರಮ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ : ಡಾ. ಬಾಬು ಜಗಜೀವನ ರಾಮ್ ರವರ ಆಡಳಿತ ಸುಧಾರಣೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಹಸೀಲ್ದಾರ್ ನಿಸರ್ಗ ಪ್ರಿಯಾ ತಿಳಿಸಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ ರಾಮ್ ರವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾಕ್ಟರ್ ಬಾಬು ಜಗಜೀವನ ರಾಮ್ ರವರು ರಾಷ್ಟ್ರದ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ರಾಷ್ಟ್ರವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭ ಅನ್ನು ಆಧುನಿಕ ಯೋಜನೆಗಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿ ಆಹಾರ ಸಮಸ್ಯೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಅವಿರತ ಶ್ರಮವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಉಪನ್ಯಾಸಕ  ಡಾ. ರಮೇಶ್ ಡಾಕ್ಟರ್ ಬಾಬು ಜಗಜೀವನ ರಾಮ್ ರವರ ಸಾಮಾಜಿಕ,ಆರ್ಥಿಕ, ವಿಮೋಚನ ಚಿಂತನೆ ಹಾಗೂ  ರಾಷ್ಟ್ರದ ಅಭಿವೃದ್ಧಿಯ ಚಿಂತನೆಗಳು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗಿದೆ. ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಜೊತೆ ಬೆನ್ನೆಲುಬಾಗಿ ನಿಂತು ಶ್ರಮಿಸಿದ ಇವರು ಶೋಷಿತ ಸಮುದಾಯಗಳ ಎರಡು ಕಣ್ಣುಗಳಾಗಿದ್ದಾರೆ. ಆದ್ದರಿಂದ ಇವರ ಆದರ್ಶ ಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯಾ, ಮಾದರ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಸೀಗೂರು ವಿಜಯ್ ಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ,ಸಮುದಾಯದ ಅಧ್ಯಕ್ಷ ಚಪ್ಪರದಳ್ಳಿ ರವಿ,ತಾ ಪಂ ಮಾಜಿ ಸದಸ್ಯ ಐಲಾಪುರ ರಾಮು,ಆರ್.ಸಿ.ಚಂದ್ರು,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೆ ಗೌಡ,ರೇಷ್ಮೆ ಇಲಾಖಾಧಿಕಾರಿ  ಚಂದ್ರೆಗೌಡ,ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ಪಶು ಇಲಾಖಾಧಿಕಾರಿ ಸೋಮಯ್ಯ,ತೋಟಗಾರಿಕೆ ಇಲಾಖಾಧಿಕಾರಿ ಪ್ರಸಾದ್,ಮುಖಂಡರಾದ ಪಿ.ಮಾದೇವ್,ಭೂತನಲ್ಲಿ ಶಿವಣ್ಣ,ಬೇಗೂರು ಮಹದೇವ್,ಲೋಕೇಶ್ ಹೊನ್ನೇನಹಳ್ಳಿ,ದೇವರಾಜ್, ನರಸಿಂಹ ಮೂರ್ತಿ,ಜಯಸ್ವಾಮಿ

ದೇವೇಂದ್ರ, ಅಂಬಾರಿ ರವಿ,ಆದಿಶೇಷ, ವಿಷ್ಣು, ಕುಮಾರ, ಕೃಷ್ಣ ಮೂರ್ತಿ,ನಾರಾಯಣ ಸೇರಿದಂತ್ತೆ ಇತರರಿದ್ದರು.

Contact us for classifieds and ads : +91 9742974234