Latest News

ಡಾ. ಬಾಬು ಜಗಜೀವನ್ ರಾಮ್ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಡಿ. ರವಿಶಂಕರ್ ಕರೆ

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಏ. 05:-. ಡಾ.ಬಾಬು ಜಗಜೀವನ್ ರಾಂ ರವರ ಆದರ್ಶ ಹಾಗೂ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ಮೂಲಕ ಉನ್ನತ ವಿದ್ಯಾಭ್ಯಾಸವನ್ನು ಮಾಡಿಸಿ ಉದ್ಯೋಗ ಕೊಡಿಸಿ ಆಗ ಮಾತ್ರ ಡಾ. ಬಾಬು ಜಗಜೀವನ್ ರಾಂ ರವರ ಜಯಂತಿಯನ್ನು ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಶಾಸಕ ಡಿ ರವಿಶಂಕರ್ ತಿಳಿಸಿದರು.

ಪಟ್ಟಣದ ಪುರಸಭಾ ವೃತ್ತದಲ್ಲಿರುವ ಡಾ. ಬಾಬು ಜಗಜೀವನ್ ರಾಂ ರವರ ಪ್ರತಿಭೆ ಮುಂಭಾಗ ಬಾಪೂಜಿಯವರ 119ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕೇವಲ ವೇದಿಕೆಯಲ್ಲಿ ಮಹಾತ್ಮರ ಕಾರ್ಯ ವೈಖರಿಯನ್ನು ಮಾತನಾಡಿ ಅಲ್ಲಿಂದ ತೆರಳಿದ ಮೇಲೆ ಅವೆಲ್ಲವನ್ನು ಮರೆಯುವ ಮೊದಲು ಅವರು ನಮ್ಮ ದೇಶಕ್ಕಾಗಿ ನಮಗಾಗಿ ನೀಡಿದ ಕೊಡುಗೆಯನ್ನು ಮರೆಯದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಕೆಲಸವನ್ನು ಮಾಡಿ ಎಂದು ಕರೆ ನೀಡಿದರು.

ಡಾ. ಬಾಬು ಜಗಜೀವನ್ ರಾಂ ರವರ ಚಿಂತನೆಗಳನ್ನು ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ತಿಳಿಸುವಂತಹ ಕೆಲಸವಾಗಬೇಕು ಮತ್ತು

ಡಾ.ಬಾಬು ಜಗಜೀವನ್ ರಾಂ ಮತ್ತು ಡಾ. ಬಿಆರ್ ಅಂಬೇಡ್ಕರ್ ರವರು ಸಮಾಜದಲ್ಲಿ ಜಾತಿಯತೆ ಮತ್ತು ಅಸ್ಪೃಶ್ಯತೆ , ಅಸಮಾನತೆ ಶೋಷಣೆ ವಿರುದ್ಧ ಸಾಮಾಜಿಕ ಪರಿಕಲ್ಪನೆಯನ್ನು ಶೋಷಿತರ ಪರವಾಗಿ ಸಾಮಾಜಿಕ ವಾಗಿ ಶ್ರಮಿಸಿದವರು ಇಬ್ಬರು ಮಹನೀಯರು ಎಂದು ತಿಳಿಸಿದರು.

ತಾಲೂಕ ಆದಿ ಜಾಂಬವ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ ಡಾ. ಬಾಬು ಜಗಜೀವನ್ ರಾಂ ಅವರ ಚೇತನ ಶಕ್ತಿ ವಿಶೇಷವಾದದ್ದು,ಇವರು 198 ಏಪ್ರಿಲ್ 5 ರಂದು ಶೋಷಿತ ಕುಟುಂಬದಲ್ಲಿ ಜನಿಸಿದವರು. ಇವರು ದಲಿತರ ಶೋಷಣೆ ವಿರುದ್ಧ ಶೋಷಿತರ ಪರವಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿಯತ್ತಿದವರು. ಬಾಬೂಜಿ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಇವರು ಸಚಿವರಾಗಿ, ಭಾರತದ ಉಪ ಪ್ರಧಾನಿಯಾಗಿ, ಹಸಿರು ಕ್ರಾಂತಿ ಹರಿಕಾರರಾಗಿ ಹೊರಹೊಮ್ಮಿದ್ದರು. ಅವರು ಕಾರ್ಮಿಕ ಕ್ಷೇತ್ರದಲ್ಲಿ ಕೈಗೊಂಡ ನಿರ್ಣಯಗಳು ಇಂದಿಗೂ ಸ್ಮರಣೀಯವಾಗಿವೆ’ಎಂದು ತಿಳಿಸಿದರು.

1952 ರಲ್ಲಿ ಪ್ರಥಮ ಚುನಾವಣೆಯಾದ ನಂತರ ಬಾಬೂಜಿ ರವರು ಅತಿ ಹೆಚ್ಚು ಅವಧಿಗೆ ಸತತವಾಗಿ ಸಂಸದರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರು ಕೃಷಿ ಸಚಿವರಾಗಿ ರಕ್ಷಣಾ ಸಚಿವರಾಗಿ ಕಾರ್ಮಿಕ ಸಚಿವರಾಗಿ ರೈಲ್ವೆ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ ಮಾತನಾಡಿ  ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರದವರು ಹಾಗೂ ಕಾರ್ಮಿಕರಿಗೆ ಹೆಚ್ಚು ಹೊತ್ತು ನೀಡುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಕಲ್ಯಾಣ ಕ್ರಾಂತಿಯನ್ನು ಹಾಕಿಕೊಟ್ಟವರು. ಕಾರ್ಮಿಕರಿಗಾಗಿ ಹಲವು ಕಾರ್ಮಿಕ ಕಾಯ್ದೆಗಳನ್ನು ತಂದವರು ಡಾ. ಬಾಬು ಜಗಜೀವನ್ ರಾಂ ರವರನ್ನು ಕಾರ್ಮಿಕರ ಕಾಯ್ದೆಗಳ ಶಿಲ್ಪಿ ಎಂದು ಸಹ ಕರೆಯುತ್ತಾರೆ ಎಂದು ತಿಳಿಸಿದರು.

ಅವರು ದಲಿತ ಸಮುದಾಯದ ನಾಯಕರಾಗಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. ಭಾರತ ಸರ್ಕಾರದ ವಿವಿಧ ಸಚಿವ ಸ್ಥಾನಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ ಎಂದು ಅವರು ತಿಳಿಸಿದರು.

ಬಾಬೂಜಿ ರವರ ಸಾಮಾಜಿಕ ಚಿಂತನೆಗಳು ಆದರ್ಶ ಮೌಲ್ಯಗಳು ಮುಂದಿನ ಪೀಳಿಗೆಯು ಅಳವಡಿಸಿಕೊಂಡು ಜಾತೀಯತೆ, ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬದುಕಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಸಮಿತಿಗಳ ಅಧ್ಯಕ್ಷ ಎಂಎಸ್ ಮಹಾದೇವ್ ನಾಡು ಹಬ್ಬಗಳ ಸಮಿತಿಯ ಅಧ್ಯಕ್ಷ ಹಾಗೂ ತಹಸಿಲ್ದಾರ್ ಸುರೇಂದ್ರ ಮೂರ್ತಿ ಬಿಇಒ ಆರ್ ಕೃಷ್ಣಪ್ಪ ಆರಕ್ಷಕ ನಿರೀಕ್ಷಕ ಶಿವಪ್ರಕಾಶ್ ಪುರಸಭಾ ಮುಖ್ಯ ಅಧಿಕಾರಿ ರಮೇಶ್ ಸಮಾಜ ಕಲ್ಯಾಣ ಅಧಿಕಾರಿ ಶಂಕರ್ ಮೂರ್ತಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್ ಸದಸ್ಯ ಸೈಯದ್ ಜಾಬೀರ್ ಮುಖಂಡರುಗಳಾದ ಶ್ರೀನಿವಾಸ್ ಎಂಎಸ್ ರವಿಕುಮಾರ್. ಶಂಕರ್. ಮಂಜುನಾಥ್. ಕುಮಾರ್ ರಮೇಶ್. ಮಲ್ಲೇಶ್. ತಿಮ್ಸಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Contact us for classifieds and ads : +91 9742974234