Latest News

ಉಪ್ಪಾರ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ: ಸಾ.ರಾ. ಮಹೇಶ್ ಘೋಷಣೆ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ.ಆರ್,ನಗರ. ಏ. 05: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀ ಭಗೀರಥ ಉಪ್ಪಾರರ ಸಮುದಾಯ ಭವನದ ಮುಂದುವರೆದ ಭವನದ ಕಾಮಗಾರಿಗೆ ಕೇಂದ್ರ ಸರ್ಕಾರದ ಸಣ್ಣಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರ ಅನುದಾನದಲ್ಲಿ 25 ಲಕ್ಷ ರೂ.ಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡರ ಅನುದಾನದ ಜತೆಗೆ ನಾನು ವೈಯುಕ್ತಿಕ ಸಹಾಯ ಮಾಡುವುದಾಗಿ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ಆಂಜನೇಯ ಬಡಾವಣೆಯ ಸಗರವಂಶ ಮೇಲು ಸಕ್ಕರೆ ಉಪ್ಪಾರರ ಶ್ರೀರಾಮಮಂದಿರದಲ್ಲಿ 63ನೇ ವರ್ಷದ ಶ್ರೀರಾಮಪಟ್ಟಾಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಹಳ ಇತಿಹಾಸವುಳ್ಳ ಶ್ರೀರಾಮಮಂದಿರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು ಇಂದಿಗೂ ನಮ್ಮ ಸಂಸ್ಕೃತಿಯಾದ ರಾಮನಾಮ ಸ್ಮರಣೆಯ ಶ್ರೀರಾಮ ಭಜನೆ ನಡೆಸಿ ಕೊಂಡು ಬರುತ್ತಿರುವುದನ್ನು ನೆನಪಿಸಿಕೊಂಡು ಇಂದಿಗೂ ಈ ರಾಮಮಂದಿರದ ಇತಿಹಾಸ ಬಹಳ ಪುರಾತನವಾಗಿದೆ ಎಂದರು ಶ್ರೀರಾಮನಮಮಿಯಿಂದ 10 ದಿನಗಳವರೆಗೆ ಶ್ರೀರಾಮಯಣ ಕಥಾ ಪಠಣ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದ ಮಾಜಿ ಸಚಿವರು ಹಿಂದುಳಿದ ಉಪ್ಪಾರರ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕಾಟ್ನಾಳುಮಹದೇವ್, ಟೌನ್ ಅಧ್ಯಕ್ಷ ಟಿ.ಕೃಷ್ಣ, ಸಂಘದ ಯಜಮಾನರಾದ ಕೇಶವಮೂರ್ತಿ ಕಾರ್ಯದರ್ಶಿ ರಂಗರಾಜು, ಸಮಾಜದ ಮುಖಂಡರಾದ ದಯಾನಂದ, ರಾಜಣ್ಣ. ಜಗದೀಶ್, ಕೆ.ಪಿ.ಅಶ್ವಥನಾರಾಯಣ್, ಆನಂದ್, ಮಾಸ್ಟರ್ ಅರವಿಂದ, ಸುರೇಶ್, ಭಾಗ್ಯರಮೇಶ್, ಕೆ.ವಿ.ಆನಂದ, ರಾಮಕೃಷ್ಣ, ಎಸ್.ಯೋಗಾನಂದ, ರಾಘವೇಂದ್ರ, ರವಿ, ಸರಸ್ಪತಿರಾಮು, ಶ್ರೀನಿವಾಸ್ ಮತ್ತಿತರು ಹಾಜರಿದ್ದರು, ಧಾರ್ಮಿ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ಡಾ.ಶ್ರೀನಿವಾಸ್ ಭಟ್ಟರು ವಹಿಸಿದರು. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಯಿತು. ಇದಕ್ಕೂ ಬೆಳಿಗ್ಗೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮದೇವರ ಭಾವಚಿತ್ರದೊಂದಿಗೆ ಭಜನಾ ಮೆರವಣಿಗೆಯನ್ನು ನಡೆಸಲಾಯಿತು ಹಲವಾರು ಪ್ರಮುಖ ವೃತ್ತಗಳಲ್ಲಿ ಭಕ್ತರು ಮಜ್ಜಿಗೆ,ಕೋಸಂಬರಿ ವಿತರಿಸಿದರು.

Contact us for classifieds and ads : +91 9742974234