ಜಾಕಿ ಸಂಸ್ಥೆಯು ಸಿಎಸ್ಆರ್ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಂಬುಲೆನ್ಸ್ ಕೊಡುಗೆ.
ಮೈಸೂರು:- ಮೈಸೂರಿನ ಜೆ ಪಿ ನಗರದಲ್ಲಿರುವ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ (ಜಾಕೀ) ಸಂಸ್ಥೆಯು ತನ್ನ ಸಮಾಜಮುಖಿ ಸೇವೆಗೆ ಮತ್ತೊಂದು ಹೊಸ ಮೈಲುಗಲ್ಲು ಮೂಡಿಸಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯ ಜಿಲ್ಲಾ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕಕ್ಕೆ ತನ್ನ ಸಿಎಸ್ಆರ್ ಅನುದಾನದಡಿಯಲ್ಲಿ 32 ಲಕ್ಷ ಮೌಲ್ಯದ ಹೊಸದಾದ ಆಂಬುಲೆನ್ಸ್ ವಾಹನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಬಿ ಸಿ ಕುಮಾರಸ್ವಾಮಿ ಅವರಿಗೆ ಗುರುವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಈ ಆಂಬುಲೆನ್ಸ್ ವಾಹನವು ಎಚ್ಐವಿ ಏಡ್ಸ್, ಸಂಶಯಾತ್ಮಕ ಪ್ರಕರಣಗಳ ತುರ್ತು ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮತ್ತು ತಪಾಸಣೆಗೆ ಸಹಕಾರಿಯಾಗಲಿದೆ ಎಂದರು.
ಇದರಿಂದಾಗಿ ಸೂಕ್ತ ಸಮಯದಲ್ಲಿ ಆಪ್ತ ಸಮಾಲೋಚನೆ ಮತ್ತು ಆರೋಗ್ಯ ಸೇವೆ ನೀಡುವುದರಿಂದ ದೂರದ ಊರುಗಳಿಗೆ ಹತ್ತಿರದ ಆರೈಕೆ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಾಕಿ ಸಂಸ್ಥೆಯ ವ್ಯವಸ್ಥಾಪಕರಾದ ಬಾಬುರಾಜ್, ಎಚ್ ಆರ್ ವಿಭಾಗದ ಅರವಿಂದ್ ಸಿ ಎಸ್, ಜಿಲ್ಲಾ ಆರ್ ಸಿ ಎಚ್ ಅಧಿಕಾರಿಯದ ಡಾ. ಮಹಮ್ಮದ್ ಸಿರಾಜ್ ಅಹಮದ್ ಹಾಜರಿದ್ದರು.
ಮೈಸೂರಿನ ಇಂಡಸ್ಟ್ರಿಯಲ್ ಸಬರ್ಬ್ ಜೆ ಪಿ ನಗರದಲ್ಲಿರುವ ಈ ಸಂಸ್ಥೆಯು ಕಳೆದ 12 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಮಹಿಳೆಯರಿಗೆ ಉದ್ಯೋಗವನ್ನು ನೀಡುವುದರ ಜೊತೆಗೆ, ಅವರಿಗೆ ಅನೇಕ ಮೂಲಭೂತ ಅನೇಕ ಸವಲತ್ತುಗಳನ್ನು ಕೂಡ ಒದಗಿಸಿ ತನ್ನ ಸೇವೆಯನ್ನ ಮುಂದುವರಿಸಿ ಎಲ್ಲರ ಪ್ರಸಂಶೆಗೆ ಪಾತ್ರವಾಗಿದೆ.
ಅಲ್ಲದೆ ಸಮಾಜಮುಖಿ ಸೇವೆಯಲ್ಲಿ ಎಂದಿಗೂ ಮುಂದಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಬಲತ್ತುಗಳನ್ನ ನೀಡಿರುವುದು ಹೆಮ್ಮೆಯ ವಿಷಯವಾಗಿದೆ.
ಅದೇ ರೀತಿ ಮುಂದಿನ ದಿನಗಳಲ್ಲಿಯೂ ಕೂಡ ಈ ಜಾಕಿ ಸಂಸ್ಥೆಯ ಸೇವೆ ಹೆಚ್ಚಲಿ ಎಂಬುದು ಎಲ್ಲರ ಆಶಯವಾಗಿದೆ.