Latest News

ಮಾಜಿ ಸಚಿವ ಸಾರಾ ಮಹೇಶ್ ಪುತ್ರನ ಜನ್ಮದಿನ: ಅಭಿಮಾನಿಗಳಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಕೆ ಆರ್ ನಗರ. ಮಾ. 23:- ಮಾಜಿ ಸಚಿವ ಸಾರಾ ಮಹೇಶ್ ಅವರ ಪುತ್ರ ಉದ್ಯಮಿ ಸಾರಾ ಜಯಂತ್ ಅವರ ಹುಟ್ಟುಹಬ್ಬವನ್ನು ಅತ್ಯಂತ ಸಡಗರ ಸಂಭ್ರಮ ಮತ್ತು ಅದ್ದೂರಿಯಾಗಿ ಆಚರಿಸಲಾಯಿತು.

 ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್ ವತಿಯಿಂದ ಮತ್ತು ಸಾರಾ ಮಹೇಶ್ ಅವರ ಅಭಿಮಾನಿಗಳ ಬಳಗದಿಂದ ಬೆಳಿಗ್ಗೆಯಿಂದಲೇ ಪಟ್ಟಣದ ಆದಿ ದೇವತೆ ತೋಪಮ್ಮತಾಯಿ ಬಸವೇಶ್ವರ ಬ್ಲಾಕ್ ನ ಮಲೈ ಮಾಹದೇಶ್ವರ ಸ್ವಾಮಿ ದೇವಾಲಯ ಹಳೆಯ ಎಡತೋರೆ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ದೇವಾಲಯ ಆಂಜನೇಯ ಬ್ಲಾಕ್ ನ ಹನುಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸಾರಾ ಜಯಂತ್ ರವರ ಹೆಸರಿನಲ್ಲಿ ಅಭಿಷೇಕ ಅರ್ಚನೆ ಸೇರಿದಂತೆ ಇನ್ನಿತರ ಪೂಜೆ ಪುರಸ್ಕಾರಗಳನ್ನು ಮಾಡುವ ಮೂಲಕ ತಮ್ಮ ನಾಯಕನ ಪುತ್ರನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

 ಮಾಜಿ ಸಚಿವ ಸಾರಾ ಮಹೇಶ್ ಅವರ ಪುತ್ರ ಸಾರಾ ಜಯಂತ್ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಯುವ ಜೆಡಿಎಸ್ ಮತ್ತು ಸಾರಾ ಮಹೇಶ್ ಅವರ ಅಭಿಮಾನಿಗಳು ತೆರೆದ ವಾಹನದಲ್ಲಿ ರಸ್ತೆಯುವುದಕ್ಕೂ ಮೆರವಣಿಗೆ ಮೂಲಕ ವಿವಿಧ ಜಯ ಘೋಷಣೆಗಳನ್ನು ಕೂಗುತ್ತಾ ರಸ್ತೆಯುವುದಕ್ಕೂ ಪಟಾಕಿ ಸಿಡಿಸುತ್ತಾ ಸಿಹಿ ಹಂಚುತ್ತ ಬಂದ ಜೆಡಿಎಸ್ ಕಾರ್ಯಕರ್ತರು ಮೈಸೂರ್ ಹಾಸನ ರಸ್ತೆಯ ಮಧ್ಯಭಾಗದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಮಲಾರ್ಪಣೆ ಮಾಡಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ವೃತ್ತದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಾರಾ ಜಯಂತ್ ರವರಿಗೆ ಬೃಹತ್ ಸೇಬಿನ ಹಾರವನ್ನು ಹಾಕುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಕರೆತಂದರು.

 ವೇದಿಕೆ ಕಾರ್ಯಕ್ರಮದಲ್ಲಿ ಯುವನಾಯಕನಿಗೆ ಪಟ್ಟಣದ ಹಿರಿಯ ಖ್ಯಾತ ಮೂಳೆತಜ್ಞ ಡಾ. ಮೆಹಬೂಬ್ ಖಾನ್ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಅಭಿನಂದಿಸಿ ಹುಟ್ಟು ಹಬ್ಬವನ್ನು ಆಚರಿಸಿದರು ಹಾಗೂ ಬೃಹತ್ಕಾರದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ಹುಟ್ಟುಹಬ್ಬಕ್ಕೆ ಆಗಮಿಸಿದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸಿಹಿ ಜೊತೆಗೆ ಉಪಹಾರದ ವ್ಯವಸ್ಥೆಯನ್ನು ಸಹ ಮಾಡಿದರು.

 ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾರಾಜಿಸಿದ ಫ್ಲೆಕ್ಸ್ ಮತ್ತು ಅಲಂಕಾರದ ಹೂವಿನ ಮತ್ತು ಜೆಡಿಎಸ್ ಸಿನ ತೋರಣಗಳು ರಸ್ತೆಯುವುದಕ್ಕೂ ಪ್ರಯಾಣಿಸುತ್ತಿದ್ದ ಸಾರ್ವಜನಿಕರ ಕಣ್ ಕುಕ್ಕಿಸುವಂತಿತ್ತು ಯಾವುದೇ ಒಬ್ಬ ಚುನಾಯಿತ ಜನಪ್ರತಿನಿಧಿ ಮತ್ತು ನಾಯಕನ ಹುಟ್ಟುಹಬ್ಬವನ್ನು ಆಚರಿಸುವುದಕ್ಕಿಂತಲೂ ಹೆಚ್ಚು ಆಕರ್ಷಣೆಯಿಂದ ಜನಮನವನ್ನು ಗೆದ್ದ ಸಾರಾ ಜಯಂತ್ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಚರಿಸಲಾಯಿತು.

 ಪಟ್ಟಣದಲ್ಲಿ ಹುಟ್ಟು ಹಬ್ಬದ ಅಂಗವಾಗಿ ಹಿಂದೆ ಮಾಜಿ ಸಚಿವ ಸಾರಾ ಮಹೇಶ್ ಅವರು ಶಾಸಕರಾಗುವುದಕ್ಕಿಂತ ಮೊದಲು ನೀಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ಮತ್ತು ಆಟೋ ಚಾಲಕರಿಗೆ ಸಮವಸ್ತ್ರವನ್ನ ನಗರ ಯುವ ಜೆಡಿಎಸ್ ಅಧ್ಯಕ್ಷ ವಿಕ್ಕಿ / ವಿಕಾಸ್ ಗೌಡ ತಮ್ಮ ಸ್ವಂತ ಹಣದಲ್ಲಿ ನೀಡುವ ಮೂಲಕ ತಮ್ಮ ನಾಯಕನ ಪುತ್ರರ ಹುಟ್ಟುಹಬ್ಬವನ್ನು ಆಚರಿಸಿದರು ಅನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು ಹಾಗೂ ಅಂಗವಿಕಲ ವೃದ್ರಶ್ರಮಗಳಿಗೆ ಕೇಕ್ ಮತ್ತು ಉಪಹಾರವನ್ನು ನೀಡಿದರು.

 ಈ ಹುಟ್ಟು ಹಬ್ಬದ ಆಚರಣೆಯಲ್ಲಿ ವಕೀಲರಾದ ಅಂಕನಹಳ್ಳಿ ತಿಮ್ಮಪ್ಪ ಪುರಸಭಾ ಮಾಜಿ ಸದಸ್ಯ ಉಮೇಶ ಜೆಡಿಎಸ್ ನಗರ ಅಧ್ಯಕ್ಷ ಮತ್ತು ಮಾಜಿ ಪುರಸಭಾ ಸದಸ್ಯ ಸಂತೋಷ್ ಗೌಡ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಕುಚಲ ಜಿಲ್ಲಾ ಜೆಡಿಎಸ್ ಮಹಿಳಾಧ್ಯಕ್ಷೆ ದಾಕ್ಷಾಯಿಣಿ ತಾಲೂಕ್ ಮಹಿಳಾ ಜೆಡಿಎಸ್ ಅಧ್ಯಕ್ಷ ರಾಜಲಕ್ಷ್ಮಿ ತಾಲೂಕ್ ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಹಂಪಾಪುರದ ಸೂರಿ ಸೇರಿದಂತೆ ನೂರಾರು ಜನ ಯುವ ಜೆಡಿಎಸ್ ಪದಾಧಿಕಾರಿಗಳು ಮತ್ತು ಮಹಿಳೆಯರು ಭಾಗವಹಿಸಿದ್ದರು. ಮಾಜಿ ಸಚಿವ ಸಾರಾ ಮಹೇಶ್ ಅವರ ಪುತ್ರ ಸಾರಾ ಜಯಂತ್ ಅವರ ಹುಟ್ಟುಹಬ್ಬವನ್ನು ತಾಲೂಕ್ ಯುವ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಚರಿಸುತ್ತಿರುವುದು.

Contact us for classifieds and ads : +91 9742974234