Latest News

ಗರ್ಭಕಂಠ ಕ್ಯಾನ್ಸರ್ ನಿರೋಧಕ (ಹೆಚ್.ಪಿ.ವಿ) ಲಸಿಕಾ ಅಭಿಯಾನ

ಮೈಸೂರು, ಮಾ.10 :- 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ (ಹೆಚ್.ಪಿ.ವಿ) ಲಸಿಕಾ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾಂರಭವನ್ನು ಎಸ್.ಎಂ.ಟಿ ಆಸ್ಪತ್ರೆ ಮೈಸೂರು ಇಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾ. ಕುಮಾರಸ್ವಾಮಿ ಪಿಸಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು HPV ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕುಗಳಿಂದ ಉಂಟಾಗುವ ಗರ್ಭಕಂಠದ ಕ್ಯಾನ್ಸರ್. ಇದು ಇತರ ಕೆಲವು ಕ್ಯಾನ್ಸರ್.ಗಳಿಂದ ರಕ್ಷಿಸುತ್ತದೆ ಎಂದರು.

HPV ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಎಂಬ ವೈರಸ್.ನಿಂದ ಉಂಟಾಗುವ ಕೆಲವು ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಕಾಯಿಲೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್, ಯೋನಿ, ಶಿಶ್ನ, ಗುದ ಮತ್ತು ಗಂಟಲು ಕ್ಯಾನ್ಸರ್ ಎಂಬ ವಿವಿಧ ಭಾಗದ ಕ್ಯಾನ್ಸರ್ಗಳಿದ್ದು ಹೆಚ್.ಪಿವಿ.ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಇದರಿಂದ ನಮ್ಮ ಹೆಣ್ಣುಮಕ್ಕಳ ಆರೋಗ್ಯ- ಈ ನಾಡಿ ಸುಭದ್ರೆತಯ  ಭವಿಷ್ಯದ ಬೂನಾದಿಯಾಗಿದೆ ಎಂದರು.

ಪ್ರಸ್ತುತ ಸದರಿ ಲಸಿಕೆಯನ್ನು14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸಾರ ನೀಡಲಾಗುವುದು ಹಾಗೂ ಸದರಿ ಲಸಿಕಾಕರಣವನ್ನು ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮಾರ್ಗಸೂಚಿ ಅನುಸಾರ ಆಯೋಜನೆ ಮಾಡಲಾಗುತ್ತಿದೆ. ಸದರಿ ಲಸಿಕೆಯ ಪ್ರಮುಖ ಫಲಾನುಭವಿಗಳು 14 ವರ್ಷದ ಎಲ್ಲಾ ಹೆಣ್ಣು ಮಕ್ಕಳಾಗಿದ್ದು. HPV ಲಸಿಕಾಕರಣವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ತಜ್ಞ ವೈದ್ಯರ ಮೂಲಕ ಲಸಿಕೆಯನ್ನು ನೀಡಲಾಗುವುದು ಎಂದರು.

ಲಸಿಕೆ ಪಡೆದ ಮ್ಕಕಳಿಗೆ ಯೂ-ವಿನ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ಆ ಮೂಲಕ ಲಸಿಕೆ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫಲಾನುಭವಿಗಳು ಆಗತ್ಯವಾದ ಸೂಕ್ತ ಗುರುತಿನ ಚೀಟಿಯೊಂದಿಗೆ ಮೊಬೈಲ್ ನಂ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.  ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು HPV ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆ. ಈ ಲಸಿಕೆಯನ್ನು ಪಡೆಯುವ ಮೂಲಕ ಹೆಣ್ಣು ಮಕ್ಕಳ  ಸದೃಡ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಪೋಷಕರು ಸಹಕರಿಸಿ ಎಂದರು.

ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳ್ಳಿಸುವುದರೊಂದಿಗೆ ಸುರಕ್ಷಿತ ಲಸಿಕೆ, ಸುಂದರ ಭವಿಷ್ಯ- ನಮ್ಮ ಹೆಣ್ಣು ಮಕ್ಕಳ ಆರೋಗ್ಯ ನಮ್ಮ ಆದ್ಯತೆ ಎಂಬ ಘೋಷ ವಾಕ್ಯದೊಂದಿಗೆ  14 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ HPV ಲಸಿಕೆಯನ್ನು ಹಾಕಿಸುವುದರ ಮೂಲಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಸಮಾಜ-ಪ್ರತಿಯೊಬ್ಬ ಅರ್ಹ ಎಲ್ಲಾ ಹೆಣ್ಣು ಮಗುವಿಗೆ ತಲುಪುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಯಪ್ರವೃತವಾಗಿದ್ದು, ಜಿಲ್ಲಾ ಆಡಳಿತದ ಪರವಾಗಿ ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇನೆ ಎ‍ಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮ್ಮದ್, ಮೈಸೂರು ತಾಲ್ಲೂಕು ಆರೋಗ್ಯಾಧಿಕಾರಿ(ಪ್ರ), ಡಾ. ಅರುಣಕುಮಾರ, ಆಡಳಿತ ವೈದ್ಯಾಧಿಕಾರಿ ಡಾ. ಅನುರಾಧ,   ಹಾಗೂ ಎಸ್.ಎಂ.ಟಿ ಆಸ್ಪತ್ರೆ ತಜ್ಞ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದರು.

Contact us for classifieds and ads : +91 9742974234