ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ 17ನೇ ದಾಖಲೆ ಬಜೆಟ್ ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಪ್ರಾದೇಶಿಕ ಅಸಮಾತೋಲನವನ್ನು ನಿವಾರಣೆ ಮಾಡಲು ವೈಜ್ಞಾನಿಕ ನೆಲಗಟ್ಟಿನ ಗಟ್ಟಿತನದ ಬಜೆಟ್.
ಕರ್ನಾಟಕದ ಸರ್ಕಾರದ ಅಭಿವೃದ್ಧಿಯ ಪರ ಯೋಜನೆ ಗಳಿಂದಾಗಿ 2025 -26 ರಲ್ಲಿ ಕರ್ನಾಟಕದ ಜಿಎಸ್‌ಡಿಪಿ 8.1 % ಬೆಳವಣಿಗೆಯು ರಾಷ್ಟ್ರೀಯ ಬೆಳವಣಿಗೆ ದರವಾದ 7.4 % ಗಿಂತ ಹೆಚ್ಚಾಗಿದೆ. ಬಜೆಟ್ ಸಂದರ್ಭದಲ್ಲಿ ಚೊಂಬು ಹಿಡಿದು ಪ್ರತಿಭಟನೆ ಆದಿ ತುಳಿದ ಬಿಜೆಪಿಯ ಪ್ರತಿಪಕ್ಷ ನಾಯಕರು ಇದಕ್ಕೆ ವೈಜ್ಞಾನಿಕ ಉತ್ತರ ನೀಡಲಿ.
4.48.004 ಲಕ್ಷ ಕೋಟಿ ಈ ಸಾಲಿನ ಒಟ್ಟು ಬಜೆಟ್ ನಲ್ಲಿ, 38, 455 ಕೋಟಿ ಈ ಬಾರಿ ಹೆಚ್ಚುವರಿ ಬಜೆಟ್ ಆಗಿದೆ. ಆದ್ದರಿಂದ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಇಲಾಖೆಯ ಸಮಗ್ರ ವರ್ಗೀಕರಣದ ವರದಿ ಅನುಸಾರ ಜಿಎಸ್ಟಿ ಹಣ ಕೇಂದ್ರ ಪೂರ್ಣಪ್ರಮಾಣದಲ್ಲಿ ನೀಡಿಲ್ಲವಾದರೂ , ಭಾರತದಲ್ಲಿ ಕರ್ನಾಟಕ ಜಿಎಸ್ಟಿ ಹಣ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದ ಕಾರಣದಿಂದಾಗಿ ರಾಜ್ಯದ ಅಭಿವೃದ್ಧಿ ಮತ್ತು ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ರಾಜ್ಯದ ಸಮಗ್ರ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂಬುದನ್ನು ದೃಢೀಕರಿಸಿದೆ. ಈ ವಿಚಾರಗಳಲ್ಲಿ ಪ್ರತಿಪಕ್ಷವಾದ ಬಿಜೆಪಿ ಕರ್ನಾಟಕದ ಜನತೆಗೆ ಸುಳ್ಳು ಮಾಹಿತಿ ನೀಡಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಈ ಬಾರಿ ಬಜೆಟ್ ವಿಶೇಷವಾಗಿ ಕಾಲೇಜು ಚುನಾವಣೆಗಳ ಮೂಲಕ ಹೊಸ ನಾಯಕತ್ವದ ಮೂಲಕ ಪ್ರಜಾಪ್ರಭುತ್ವಕ್ಕೆ ಗಟ್ಟಿತನದ ಅಡಿಪಾಯ, ಮೈಸೂರು ಎರಡನೇ ಐಟಿ ರಾಜ್ಯವನ್ನಾಗಿ ರೂಪಿಸಲು ಉತ್ತೇಜನ, ದೀರ್ಘಾವಧಿಕಾಲ ಸಂಕಷ್ಟದಲ್ಲಿದ್ದ ಕೃಷ್ಣ ಮೇಲ್ದಂಡೆಗೆ ಕಾಯಕಲ್ಪ, ಪ್ರಸ್ತುತ ವರ್ಷ 56,432 ಸಾವಿರ ಹುದ್ದೆಗಳ ನೇಮಕಾತಿಗೆ ಚಾಲನೆ, 16 ವರ್ಷದ ಒಳಗಿನ ಮಕ್ಕಳಿಗೆ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಮೊಬೈಲ್ ನಿಷೇಧ, ವಿವಿಗಳಲ್ಲಿ ಜಾತಿ ದೌರ್ಜನ್ಯ ತಡೆಯಲು ರೋಹಿತ್ ಕಾಯ್ದೆ ಜಾರಿ, 38 ಲಕ್ಷ ರೈತರಿಗೆ ಶೂನ್ಯ ದರದಲ್ಲಿ ಸಾಲ ನೀಡಿಕೆ ಹೀಗೆ ಕೆಲವು ಐತಿಹಾಸಿಕ ವಿಶೇಷತೆಗಳಿಂದ ಸಿದ್ದರಾಮಯ್ಯನವರು ನಿರಂತರವಾಗಿ ಜನ ವರ್ಗದ ಜನಾನುರಾಗಿ ಎಂಬುದು ಸಾಬೀತಾಗಿದೆ.
-ಡಾ. ಬಿಜೆ. ವಿಜಯ ಕುಮಾರ್ ಅಧ್ಯಕ್ಷರು -ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
