Latest News

ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನುಕರಗತ ಮಾಡಿಕೊಂಡಿದ್ದರು: ತಹಸಿಲ್ದಾರ್ ಸುರೇಂದ್ರ ಮೂರ್ತಿ

ವರದಿ:-ವಡ್ಡರಕೊಪ್ಪಲು ಶಿವರಾಮು.

  ಕೆ ಆರ್ ನಗರ. ಫೆ.19:- ಸಾಹಸ ಮತ್ತು ಶೌರ್ಯಕ್ಕೆ ಹೆಸರುವಾಸಿಯಾದ ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನು ಪಡೆದಿದ್ದರೂ ಎಂದು ತಹಸಿಲ್ದಾರ್ ಸುರೇಂದ್ರ ಮೂರ್ತಿ ಹೇಳಿದರು.

ಪಟ್ಟಣದ ಮಿನಿ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಛತ್ರಪತಿ ವೀರ ಶಿವಾಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಸ್ವಾಚ್ಚನೆ ಮಾಡಿ ಮಾತನಾಡಿದ ಅವರು ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದು ವರ್ಣಿಸಿದರು.

ಬದುಕಿನಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡು ನಡೆದರೆ ಅಧಿಕಾರ ಯಶಸ್ಸು ಕಾಣಬಹುದು ಎಂಬುದಕ್ಕೆ ಶಿವಾಜಿಯವರೇ ಉದಾಹರಣೆಯಾಗಿದ್ದಾರೆ

ಭಾರತದ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆ ಪರಕಿಯರ ದಾಳಿಗೆ ತುತ್ತಾದ ಸಂದರ್ಭದಲ್ಲಿ ಜನಿಸಿ ಭಾರತದ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು ಎಂದು ಹೇಳಿದರು .

ಛತ್ರಪತಿ ಶಿವಾಜಿ ಮಹಾರಾಜರು 1630 ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು. ದಾದಾಜಿ ಕೊಂಡದೇವ ಅವರು ಛತ್ರಪತಿ ಶಿವಾಜಿಯವರಿಗೆ ಯುದ್ಧ ಕೌಶಲ್ಯದ ತರಬೇತಿಯನ್ನು ನೀಡಿದರು. ಅವರ ತಾಯಿ ಪ್ರತಿನಿತ್ಯವೂ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಿ ಶಿವಾಜಿ ಮಹಾರಾಜರಲ್ಲಿ ಧರ್ಮ, ನ್ಯಾಯದ ಚಿಂತನೆಯನ್ನು ಬಿತ್ತಿದರು ಎಂದು ಹೇಳಿದರು.

ಶಿವಾಜಿ ಮಹಾರಾಜರಿಂದ ನಾವು ನಿಷ್ಠೆ, ಪ್ರಾಮಾಣಿಕತೆ ಮತ್ತು ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ಸು ಕಾಣಬಹುದು ಎಂಬುದನ್ನು ಕಲಿಯಬೇಕು. ಇನ್ನೂ ಹೆಚ್ಚಿನ ಜನರು ಶಿವಾಜಿ ಕುರಿತಾಗಿ ವಿಚಾರ, ಚಿಂತನೆಗಳನ್ನು ತಿಳಿಯಬೇಕು ಎಂದು ಹೇಳಿದರು.

ಇದನ್ನೂ ಓದಿ:- ಪ್ರಕಾಶ್ ಬೆಳವಾಡಿ ಅವರಿಗೆ 2026ರ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಗೌರವ

ಭಾರತ ಪರಕಿಯರ ದಾಳಿಯನ್ನು ಉಗ್ರ ಖಂಡಿಸಿ ಗೆರಿಲ್ಲಾ ಮಾದರಿ ಯುದ್ಧ ತಂತ್ರದಿಂದ ಭಾರತವನ್ನು ಪರಕಿಯರನ್ನು ಸೋಲಿಸಿ ಶತ್ರುವಿನ ಎದೆಯಲ್ಲಿ ಭೀತಿ ಹುಟ್ಟಿಸಿದರು. ಹಿಂದೂ ಧರ್ಮದ ರಕ್ಷಣೆಗಾಗಿ ದೆಹಲಿ ಸುಲ್ತಾನರನ್ನು ಎದುರಿಸಿದರು. ಶಿವಾಜಿ ಮನೆತನ 250 ವರ್ಷಗಳಿಗಿಂತ ಹೆಚ್ಚು ಕಾಲ ಸುದೀರ್ಘ ಆಡಳಿತ ನಡೆಸಿದ ಸಾಮ್ರಾಜ್ಯವನ್ನು ಸ್ಥಾಪಿಸಿದರು ಎಂದು ತಿಳಿಸಿದರು.

ಮರಾಠಿ ಮುಖಂಡರುಗಳಾದ ಗೋಪಾಲ್ ರಾವ್ ಕದಂ.ಮೋಹನ್ ರಾವ್ ಸಿಂಧೆ. ಪರಶುರಾಮ್ ರಾವ್ ಚವಾಣ್. ಸುರೇಶ್ ರಾವ್ ಜಾದವ್. ಕುಮಾರಸ್ವಾಮಿ ಸಿಂಧೆ. ರಮೇಶ್ ರಾವ್ ಕದಂ. ಕಂಠೀರವ ಸಿಂಧೆ. ಶಿಕ್ಷಣಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್ ಕಾಲಂ ” ಶಾಸಕರು ಬಂದ ಜಯಂತಿ ಕಾರ್ಯಕ್ರಮಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿರುತ್ತಾರೆ ಆದರೆ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಜಯಂತಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಗೈರಾಗುವ ಮೂಲಕ ನಮ್ಮನ್ನು ಮತ್ತು ನಮ್ಮ ಸಮಾಜದ ಜಯಂತಿ ಕಾರ್ಯಕ್ರಮಗಳಿಗೆ ಹಾಜುರಾಗದೆ ಅವಮಾನ ಮಾಡಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಇಲ್ಲಾ ನಮ್ಮ ಜಯಂತಿ ಕಾರ್ಯಕ್ರಮಗಳನ್ನು ನಮ್ಮ ಸಂಘದಿಂದಲೇ ಆಚರಿಸಿಕೊಳ್ಳುತ್ತೇವೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಮರಾಠಿ ಸಂಘದ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು “

Contact us for classifieds and ads : +91 9742974234