Latest News

ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ಕುಟುಂಬ ನೀಡಿದ ಮಾಂಗಲ್ಯವನ್ನೇ ನನ್ನ ಮಗನ ಹೆಂಡತಿಯ ಕೊರಳಿನಲ್ಲಿದೆ: ಎಚ್ ವಿಶ್ವನಾಥ್

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 14:- ವಿಶ್ವಾಸ ಮತ್ತು ಅಭಿವೃದ್ಧಿನ್ನು  ರಾಜಕಾರಣ ಮಾಡದೆ ದ್ವೇಷದ ರಾಜಕಾರಣ ಮಾಡಿದರೆ ಅದುವೆ ರಾಜ್ಯದ ಅಭಿವೃದ್ಧಿಗೆ ಕುಂಠಿತವಲ್ಲದೆ ಯುವಕರನ್ನು ದಾರಿ ತಪ್ಪಿಸಿದಂತಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ತಿಳಿಸಿದರು.

ಕೆ.ಆರ್ ನಗರ ಪಟ್ಟಣದ ಜಿ.ಜಿ ಪ್ಯಾಲೇಸಿನಲ್ಲಿ ಸಮಾಜ ಸೇವಕ ಹಾಗೂ ಮಾಜಿ ಪುರಸಭಾ ಸದಸ್ಯ ಶೇಷಣ್ಣ ಮತ್ತು ಅವರ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್. ವಿಶ್ವನಾಥ್ ಅವರು ಹಿರಿಯ ರಾಜಕಾರಣಿಗಳಾದ ನಾವು ಕಿರಿಯಾ ಮತ್ತು ಯುವಕರಿಗೆ ಸಲಹೆ ಹಾಗೂ ಮಾರ್ಗದರ್ಶಕರಾಗಬೇಕೆವಿನಃ ಅವರ  ದಾರಿ ತಪ್ಪಿಸುವಂತಹ ಕೆಲಸ ಮಾಡಬಾರದೆಂದು ಸಲಹೆ ನೀಡಿದರು.

ಚುನಾವಣಾ ಸಮಯದಲ್ಲಿ ರಾಜಕೀಯ ಮಾಡಬೇಕೆ ವಿನಃ ನಂತರ ವಿಶ್ವಾಸ ಮತ್ತು ಸಮನ್ವತೆಯ ರಾಜಕಾರಣ ಮಾಡಬೇಕು ಆಗ ಮಾತ್ರ ಜನನಾಯಕನಾಗಲು ಸಾಧ್ಯ ಆದರೆ ಕೆಲವರು ಸಹಾಯ ಮಾಡಿದವರನ್ನು ಮರೆತು ಅವರ ಮೇಲೆಯೇ ದ್ವೇಷ ಅಸೂಯೇ ಮಾಡಿದರೆ ಅದು ಅವರ ಬೆನ್ನ ಹಿಂದೆಯೇ ಇರುತ್ತದೆ ಮತ್ತೊಂದು ದಿನ ಅವರಿಗೆ ಅದು ಮರುಕಳಿಸುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:- ಕುಡಿತದ ಜಗಳ ದುರಂತ ಅಂತ್ಯ: ಶಿವಮೊಗ್ಗದಲ್ಲಿ ಸ್ನೇಹಿತರ ಕೈಯಲ್ಲಿ ಕಾರ್ಮಿಕನ ಭೀಕರ ಹತ್ಯೆ

ನಾನು ಸಚಿವನಾಗಿದ್ದ ಅವಧಿಯಲ್ಲಿ ಕೆಲವು ಶಾಶ್ವತ ಯೋಜನೆಯನ್ನು ಜಾರಿಗೆ ತಂದು ಜನ ಮನಸ್ಸಿನಲ್ಲಿರುವಂಥ ಕೆಲಸವನ್ನು ಮಾಡಿದ್ದು ಅದರಲ್ಲಿಯೂ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಮರಸ್ಯ ರಾಜಕಾರಣ ಮಾಡಿರುವುದರಿಂದಲೇ ನನ್ನ ಮಗನ ಮದುವೆಯಲ್ಲಿ ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ಕುಟುಂಬ ನೀಡಿದ ಮಾಂಗಲ್ಯವನ್ನೇ ನನ್ನ ಮಗನ ಹೆಂಡತಿಯ ಕೊರಳಿನಲ್ಲಿದೆ ಹಾಗೂ ದಂಪತಿಗಳಿಬ್ಬರೂ ಮದುವೆಗೆ ಬಂದು ಆಶೀರ್ವಾದ ಮಾಡಿದರು ಇದೇ ವಿಶ್ವಾಸದ ರಾಜಕಾರಣ ಎಂದು ಹೇಳಿದರು.

ಈಗಲೂ ಕೆಆರ್ ನಗರ ವಿಧಾನಸಭಾ ಕ್ಷೇತ್ರದ ಜನತೆ ನನ್ನ ಬಗ್ಗೆ ವಿಶ್ವಾಸ ಪ್ರೀತಿ ಹಿಂದಿನಗಿಂತಲೂ ಹೆಚ್ಚಾಗಿದ್ದು ನನ್ನನ್ನು ಕರೆದು ಅಭಿಮಾನಿಸಿ ಗೌರವಿಸುವ ಕೆಲಸವನ್ನು ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಆದ್ದರಿಂದ ಈ ಕ್ಷೇತ್ರದ ಜನತೆಯ ಜೊತೆಗೆ ನನ್ನನ್ನು ಸನ್ಮಾನಿಸಿದ ನಿಮಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿಂಡಿಮಶಂಕರ್ ಮಾತನಾಡಿ ಅಧಿಕಾರ ಇರಲಿ ಇಲ್ಲದಿರಲಿ ಯಾವತ್ತೂ ಕ್ಷೇತ್ರದ ಜನತೆ ಎಚ್ ವಿಶ್ವನಾಥ್ ಅವರನ್ನು ಸಹಾಯ ಕೇಳಲು ಬಂದವರನ್ನು ಬರಿಗೈಯಲ್ಲಿ ಕಳಿಸದೆ ಅವರಿಂದಾಗುವ ಸಹಾಯವನ್ನು ಮಾಡುವಂತಹ ದೊಡ್ಡಗುಣ ಇರುವಂತಹ ರಾಜಕಾರಣಿಗಳಲ್ಲಿ ಇವರು ಒಬ್ಬರು ಎಂದು ತಿಳಿಸಿದರು.

ಇದನ್ನೂ ಓದಿ:- ಸಾಹಿತಿ ಕವಿ ರಾಜಕಾರಣಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ರಾಜಕೀಯ ನಡೆ ಯಾವ ಕಡೆ?

ಅಧಿಕಾರ ಅವಧಿಯಲ್ಲಿ ಲಕ್ಷಾಂತರ ಬಡ ಜನರ ಅನುಕೂಲಕ್ಕಾಗಿ ಜಾರಿಗೆ ತಂದ ಯಶಸ್ವಿ ಯೋಜನೆ ಮತ್ತು ಅಕ್ಷರ ಕಲಿಯುವ ಮಕ್ಕಳು ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿ ಊಟ ಶಿಕ್ಷಕರ ಮೌಲ್ಯಮಾಪನವನ್ನು ಹೆಚ್ಚಿಸಲು ಸಮುದಾಯದತ್ತ ಶಾಲೆ ಪ್ರತಿ ಶಾಲೆಗೂ ಭದ್ರತೆಗಾಗಿ ಕಾಂಪೌಂಡ್ ನಿರ್ಮಾಣ ಮಹಿಳೆಯರ ಬಲವರ್ಧನೆಗಾಗಿ ಮಹಿಳಾ ಸಂಘಗಳ ಸ್ಥಾಪನೆ ಸೇರಿದಂತೆ ಇನ್ನೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿಯೇ ಮಾದರಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ವರ್ಣಿಸಿದರು.

ಕಾರ್ಯಕ್ರಮದಲ್ಲಿ ಜಿಜಿ ಪ್ಯಾಲೇಸಿನ ಮಾಲೀಕರಾದ ಶೇಷಣ್ಣ ಪುರಸಭಾ ಮಾಜಿ ಅಧ್ಯಕ್ಷರಾದ ರಾಜ ಶ್ರೀಕಾಂತ್ ಸುಬ್ರಹ್ಮಣ್ಯ ಜನಪದ ಪರಿಷತ್ತಿನ ಅಧ್ಯಕ್ಷರಾದ ತಿಮ್ಮಶೆಟ್ಟಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ವಡ್ಡರ ಕೊಪ್ಪಲು ಶಿವರಾಮು ಮನಸ ಪ್ರಿಂಟರ್ಸ್ಸಿನ ಮಾಲೀಕರಾದ ವಿಶ್ವನಾಥ್ ನವನಗರ ಅರ್ಬನ್ ಬ್ಯಾಂಕಿನ ನಿರ್ದೇಶಕರಾದ ರಂಗನಾಥ್ ಪತ್ರಕರ್ತರಾದ ರಾ.ಸುರೇಶ್, ಕುಪ್ಪೆ ಮಹಾದೇವಸ್ವಾಮಿ, ಶಿಲ್ಪಾ ಶ್ರೀನಿವಾಸ್, ಮುಖಂಡರುಗಳಾದ ಶ್ರೀರಾಂಪುರ ನಟರಾಜ್, ಹೇಮಂತ್ ಕುಮಾರ್ ,ವಿಶ್ವಾಸ್ ಗೌಡ, ಆದಿತ್ಯ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂ ಓದಿ:- ಕನ್ನಡ ನ್ಯೂಸ್ ಹಬ್ 24.com

ಕೆ.ಆರ್.ನಗರ ರಾಜಕೀಯದಲ್ಲಿ ಹೊಸ ಸಮೀಕರಣವೇ? ಪುತ್ರನತ್ತ ಹೊಣೆಗಾರಿಕೆ ಒಲಿಯುತ್ತದೆಯೇ ಎಂಬ ಚರ್ಚೆ

[/button]

Contact us for classifieds and ads : +91 9742974234