Latest News

ಪ್ರೇಮ ಭಂಗದ ಬೇಸರ: ಯುವ ಬಾಡಿಬಿಲ್ಡರ್‌ನ ದುರ್ಘಟಿತ ಅಂತ್ಯ, ತನಿಖೆಯಲ್ಲಿ ಪೊಲೀಸರು

 

ಬೆಂಗಳೂರು, ಫೆಬ್ರವರಿ 08:- ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ವಾಸವಗಿರುವ  ಪ್ರತಿಷ್ಠಿತ ಕುಟುಂಬದ ಮನಕಲಕುವ ಘಟನೆೊಂದು ಬೆಳಕಿಗೆ ಬಂದಿದೆ. ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬರಿಗೆ  ಮದುವೆಯಾಗಲು ನಿರ್ಧಾರ ಮಾಡಿದ್ದರಿಂದ  ಮಾನಸಿಕ ವ್ಯಥೆಗೆ ಒಳಗಾದ ಯುವ ಬಾಡಿಬಿಲ್ಡರ್ ಸಾವಿಗೆ  ಶರಣಾದ ಘಟನೆ ನಡೆದಿದೆ. ಸಾ* ಯಿಡದ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದ್ದು, ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

ಬೆಂಗಳೂರು ಪೊಲೀಸ್ ಮೂಲಗಳ ಪ್ರಕಾರ, ಕಿರಣ್ ತಮ್ಮ ಮನೆಯಲ್ಲಿ ನೇ*  ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ  ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃ* ದೇಹವನ್ನು ಮ*ಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬಾಡಿಬಿಲ್ಡರ್ ಕಿರಣ್ ದು  ದೀರ್ಘಕಾಲದ ಪ್ರೇಮ

ಮೃ* ಕಿರಣ್ ಕಳೆದ ಮೂರು ವರ್ಷಗಳಿಂದ ಯುವತಿಯೋರ್ವಳೊಂದಿಗೆ ಸ್ನೇಹದಿಂದ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ಗಂಭೀರವಾಗಿದ್ದು, ಇಬ್ಬರೂ ಭವಿಷ್ಯದ ಬಗ್ಗೆ ಚರ್ಚಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಆದರೆ ಇತ್ತೀಚೆಗೆ ಯುವತಿಯ ಮನೆಮಂದಿ ಬೇರೆ ಸಂಬಂಧದ ವರನೊಂದಿಗೆ , ಮದುವೆ ಸಿದ್ಧತೆಗಳು ನಡೆಯುತ್ತಿವೆ ಎಂಬ ವಿಷಯ ಬಾಡೊಬಿಲ್ಡರ್ ಕಿರಣ್‌ಗೆ ಗೋತ್ತಗಿತ್ತು ಎನ್ನಲಾಗಿದೆ.

ಕಿರಣ್ ಕುಟುಂಬದವರ ಹೇಳಿಕೆಯಂತೆ, ಯುವತಿ ತನ್ನ ಮದುವೆಯ ವಿಚಾರವನ್ನು ಕಿರಣ್‌ಗೆ ತಿಳಿಸಿ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಸಿದ್ಧಪಡಿಸಿಕೊಂಡಿದ್ದ ವಸ್ತ್ರಗಳನ್ನು ತೋರಿಸಿದ್ದಾಳೆ. ಈ ಘಟನೆ ಕಿರಣ್ ಮನಸ್ಸಿನ ಮೇಲೆ ಆಘಾತಕಾರಿ ಪರಿಣಾಮ ಬೀರಿದಂತಾಗಿದೆ. ಆ ಕ್ಷಣದಿಂದಲೇ ಅವರು ಮನೋವೈಕಲ್ಯಕ್ಕೊಳಗಾಗಿ ನಿರಾಶೆಯಲ್ಲಿ ಮುಳುಗಿದ್ದರು ಎಂದು ಆಪ್ತರು ಹೇಳಿದ್ದಾರೆ.

ಬಾಡಿ ಬಿಲ್ಡರ್ ಕಿರಣ್ ದುಡುಕಿನ ನಿರ್ಧಾರ

ಈ ಬೆಳವಣಿಗೆಯ ನಂತರ ಮನಗೆದ್ದ ಕಿರಣ್ ಮನೆಗೆ ಹಿಂತಿರುಗಿ ಆ* ಹ*  ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆ* ಹ*  ಗಿಂತ ಮೊದಲು ಅವರು ಒಂದು ಪತ್ರ ಬರೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆ ಪತ್ರದಲ್ಲಿ ಕಿರಣ್ ತಮ್ಮ ಪ್ರೀತಿಯಲ್ಲಿ ವಂಚಿತನಾಗಿರುವ  ಬಗ್ಗೆ ಬರೆದಿದ್ದಾನೆ , ಯುವತಿ ಹಾಗೂ ಆಕೆಯ ತಾಯಿ ಹೆಸರನ್ನು ತಿಳಿಸಿದ್ದಾನೆ ಎಂಬ  ಮಾಹಿತಿ ಪೋಲಿಸರಿಗೆ ಲಭ್ಯವಾಗಿದೆ. ಆದರೆ ಇದರ ಬಗ್ಗೆ ಪೊಲೀಸ್ ಇಲಾಖೆ ಇನ್ನೂ ಅಧಿಕೃತವಾಗಿ ವಿವರ ಬಹಿರಂಗಪಡಿಸಿಲ್ಲ.

ಘಟನೆಗೆ ಮುನ್ನದ ಕ್ಷಣಗಳ ಬಗ್ಗೆ ಕಿರಣ್ ಅವರ ತಾಯಿ ನೀಡಿದ ಮಾಹಿತಿಯೂ ಗಮನಾರ್ಹವಾಗಿದೆ. ಅವರು ತಮ್ಮ ಮಗನು ಸಂಜೆ ವೇಳೆ ತನ್ನ ಬಳಿ ಬಂದು ಬಿಳಿ ಹಾಳೆ ಮತ್ತು ಪೆನ್ ಕೇಳಿದನೆಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ತಾಯಿ ಕಾರಣ ವಿಚಾರಿಸಿದಾಗ, ಹಣಕಾಸಿನ ಲೆಕ್ಕಾಚಾರ ಬರೆಯಲು ಬೇಕೆಂದಿದ್ದಾನೆ ಎಂದು ಹೇಳಿದ್ದಾರೆ. ಆದರೆ ನಂತರ ನಡೆದ ಘಟನೆ ಕುಟುಂಬವನ್ನು ಕಂಗಾಲಾಗಿಸಿದೆ.

ಜಿಮ್ ನ ವೃತ್ತಿ ಜೀವನ ಮತ್ತು ಆಸಕ್ತಿಗಳು

ಕಿರಣ್ ಹಲವು ವರ್ಷಗಳಿಂದ ಬೆಂಗಳೂರಿನ ಜಿಮ್  ಒಂದರಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಲು ತುಂಬಾ ಪ್ರಯತ್ನಿಸುತ್ತಿದ್ದರು ಎಂದು ಕಿರಣ್  ಸ್ನೇಹಿತರು ತಿಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದರೆಂಬ ಮಾಹಿತಿ ಇದೆ. ಕೀರಣ್ ದೈಹಿಕವಾಗಿ ಸದೃಢವಾಗಿದ್ದ ಅವರು ಮಾನಸಿಕವಾಗಿ ಇಂತಹ ಸಂಕಷ್ಟ ಎದುರಿಸಬೇಕಾಯಿತು ಎಂಬುದು ಪರಿಚಿಯಸ್ಥರಲ್ಲಿ ಅತಂಕ ಮೂಡಿಸಿದೆ.

ಕಿರಣ್ ತಾನೂ ಪ್ರೀತಿಸಿದ ಯುವತಿಗೆ ಬರುವ 14 ರ ಪ್ರೇಮಿಗಳ ದಿನದಂದು ಉಡುಗೊರೆ ನೀಡಲು ಸಹ ಸಿದ್ಧತೆ ಮಾಡಿಕೊಂಡಿದ್ದರೆಂಬ ವಿಷಯವೂ ತಿಳಿದುಬಂದಿದೆ. ಇದರಿಂದ ಕಿರಣ್  ಸಂಬಂಧದ ಬಗ್ಗೆ ಅವರು ಎಷ್ಟು ಗಂಭೀರವಾಗಿ ಯೋಚಿಸುತ್ತಿದ್ದರು ಎಂಬುದು ತಿಳೀಯುತ್ತದೆ . ಆದರೆ ಮದುವೆ ವಿಚಾರ ತಿಳಿದ ಬಳಿಕ ಕಿರಣ್ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಿರಣ್ ಕುಟುಂಬದ ದೂರು

ಈ ಘಟನೆಗೆ ಸಂಬಂಧಿಸಿದಂತೆ ಕಿರಣ್ ಕುಟುಂಬಸ್ಥರು ಯುವತಿ ಮತ್ತು ಆಕೆಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಮಗನ ಮೇಲೆ ಮಾನಸಿಕ ಒತ್ತಡ ಉಂಟಾಗಿರುವುದಾಗಿ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ದೂರು ಸ್ವೀಕರಿಸಿ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ಪೊಲೀಸರು ಹೇಳುವಂತೆ, ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ಮಾಡಲಾಗುತ್ತಿದೆ. ಡೆ* ನೋಟ್‌ನ ವಿಷಯ, ಮೊಬೈಲ್ ಕರೆ ದಾಖಲೆಗಳು, ಸಂದೇಶಗಳು ಸೇರಿದಂತೆ ಸಂಬಂಧಿತ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಂತಹ ಘಟನೆಗಳು ಸಮಾಜದ ದೃಷ್ಟಿಯಲ್ಲಿ ಎಷ್ಟು ಸರಿ

ಈಂತಹ  ಘಟನೆ ಮತ್ತೆ ಪ್ರೇಮ ವೈಫಲ್ಯದಿಂದ ಯುವಜನರಲ್ಲಿ ಉಂಟಾಗುವ ಮಾನಸಿಕ ಒತ್ತಡದ ಕುರಿತು ಚರ್ಚೆಗೆ ತುಂಬಾ ಕಾರಣವಾಗಿದೆ. ಯುವಕ ಯುವತಿಯರ ಸಂಬಂಧಗಳಲ್ಲಿ ಉಂಟಾಗುವ ಅಸಮಾಧಾನ ಅಥವಾ ನಿರಾಕರಣೆ ಜೀವನದ ಅಂತಿಮ ಪರಿಹಾರವಾಗಬಾರದು ಎಂಬುದನ್ನು ಮನೋವಿಜ್ಞಾನಿಗಳು ಪದೆ ಪದೆ ಒತ್ತಿ ಹೇಳುತ್ತಾರೆ. ಕುಟುಂಬ ಮತ್ತು ಸ್ನೇಹಿತರ ಬೆಂಬಲ ಇಂತಹ ಸಂದರ್ಭಗಳಲ್ಲಿ ಅತ್ಯಂತ ಮುಖ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮನೋ ತಜ್ಞರ ಪ್ರಕಾರ, ನಿರಾಶೆ ಮತ್ತು ಮಾನಸಿಕ  ವ್ಯಥೆ ಅನುಭವಿಸುವ ಸಂದರ್ಭಗಳಲ್ಲಿ ಸಲಹೆಗಾರರು ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವುದು ಅತ್ಯಂತ ಅಗತ್ಯ. ಆ*ಹ*  ಎಂದಿಗೂ ಪರಿಹಾರವಲ್ಲ, ಬದಲಾಗಿ ಮತ್ತಷ್ಟು ನೋವನ್ನು ಕುಟುಂಬ ಹಾಗೂ ಸಮಾಜಕ್ಕೆಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದ ಈ ಘಟನೆ ಯುವಕ ಯುವತಿಯರ ಮನಸ್ಥಿತಿ, ಸಂಬಂಧಗಳ ಜವಾಬ್ದಾರಿ ಹಾಗೂ ಸಮಾಜದ ಬೆಂಬಲ ವ್ಯವಸ್ಥೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಕಿರಣ್ ಅವರ ಸಾ*  ಕುಟುಂಬಕ್ಕೆ ಅಪಾರ ನಷ್ಟ ಉಂಟುಮಾಡಿದರೆ, ಮತ್ತೊಂದೆಡೆ ಸಂಬಂಧಗಳ ಸವಾಲುಗಳನ್ನು ಹೇಗೆ ಸಮರ್ಥವಾಗಿ ಎದುರಿಸಬೇಕು ಎಂಬುದರ ಬಗ್ಗೆ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.

ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬರುವ ಸಾಧ್ಯತೆ ಇದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದು, ಸತ್ಯಾಂಶ ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ.

 

Contact us for classifieds and ads : +91 9742974234