Latest News

ಸಾಹಿತಿ ಕವಿ ರಾಜಕಾರಣಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ರಾಜಕೀಯ ನಡೆ ಯಾವ ಕಡೆ?

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 07:- ಸುಮಾರು 50 ವರ್ಷಗಳ ಕಾಲ ರಾಜಕಾರಣ ಮಾಡಿ ಸೋಲು ಗೆಲುವುಗಳ ನಡುವೆ ರಾಜ್ಯದಲ್ಲಿಯೇ ತಮ್ಮ ಹರಿತವಾದ ಮಾತುಗಳ ಮೂಲಕ ತಪ್ಪು ಮಾಡಿದಾಗ ಎಚ್ಚರಿಸುವ ಸರಿ ಇದ್ದಾಗ ಹೊಗಳುವ ಚಾಣಕ್ಯತನ ರಾಜಕಾರಣಿ ಅಹಿಂದಾ ನಾಯಕ ನಾ ಕಂಡ ಅಪರೂಪದ ರಾಜಕಾರಣಿ ಮಾಜಿ ಸಂಸತ್ ಸದಸ್ಯರು ಮಾಜಿ ಸಚಿವರು ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್ ವಿಶ್ವನಾಥ್ ಅವರ ನಡೆ ಮುಂದಿನ ದಿನಗಳಲ್ಲಿ ಯಾವ ಕಡೆ ಎಂಬುದು ಅವರೇ ನಿರ್ಧರಿಸಬೇಕಾಗಿದೆ.

ಕೆ ಆರ್ ನಗರ ತಾಲೂಕಿನ ಜನಪ್ರಿಯ ನಾಯಕ ಎಚ್ ವಿಶ್ವನಾಥ್ ಆಡು ಮುಟ್ಟಿದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ವೈಯಕ್ತಿಕ ಅನುಭವದಲ್ಲಿ ಆಡಳಿತ ನಡೆಸಿ ಜನಮನ್ನಣೆ ಪಡೆದ  ಕ್ಷೇತ್ರದಲ್ಲಿ ಸಾಮರಸ್ಯ ರಾಜಕಾರಣ ಮಾಡಿ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ಕಾರ್ಯಕರ್ತರು ಎಂಬ ಭೇದಭಾವವಿಲ್ಲದೆ ರಾಜಕೀಯ ಮಾಡಿದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪತ್ರರಾಗಿದ್ದಾರೆ.

ಜುಲೈ ತಿಂಗಳಲ್ಲಿ ವಿಧಾನ ಪರಿಷತ್ತಿನ ಅಧಿಕಾರ ಅಂತ್ಯ :- ಮುಂಬರುವ ಜುಲೈ ತಿಂಗಳಲ್ಲಿ ವಿಧಾನ ಪರಿಷತ್ತಿನ ಅಧಿಕಾರ ಅಂತ್ಯವಾಗಲಿದ್ದು ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ತೆರೆ ಮರೆಯಲ್ಲಿ ಮತ್ತೆ ವಿಧಾನ ಪರಿಷತ್ತಿಗೋ ಅಥವಾ 2028 ರಲ್ಲಿ ನಡೆಯುವ ವಿಧಾನಸಭೆಗೆ ಸ್ಪರ್ಧಿಸಬೇಕು ಎಂಬ ಚರ್ಚೆಯಂತೆ ತಮ್ಮ ಅಪ್ಪರೂ ಹಿತೈಷಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಆಶಾ ಭಾವನೆ ಹೊಂದಿದ್ದಾರೆ ಎನ್ನುವಂತಿದೆ.

ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ :- ಹೆಚ್ ವಿಶ್ವನಾಥ್ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದು ರಾಜಕೀಯ ಸನ್ಯಾಸ ಸ್ವೀಕರಿಸುವ ಸನ್ನಿವೇಶದಲ್ಲಿ ಆಪದ್ಬಾಂಧವರಾಗಿ ಬಂದವರೇ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು 2018 ರಲ್ಲಿ ಪಕ್ಷಕ್ಕೆ ಕರೆ ತಂದು ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಡುವ ಜೊತೆಗೆ ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟರು ಆದರೆ ಎಚ್ ಡಿ ಕುಮಾರಸ್ವಾಮಿ ಅವರು ಸಚಿವ ಸಂಪುಟದಲ್ಲಿ ಸ್ಥಾನ ನೀಡಲಿಲ್ಲ ಎಂಬ ಕೋಪದಿಂದ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಒಂದೆಡೆ ಸೇರಿಸಿ ಸರ್ಕಾರ ಬಿಳಿಸಿದ ಕೀರ್ತಿಗೆ ಪಾತ್ರರಾದ ಹೆಚ್ ವಿಶ್ವನಾಥ್ ಬಿಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸೋತು ವಿಧಾನ ಪರಿಷತ್ತಿಗೆ ಪ್ರವೇಶ ಮಾಡಿದರು ಆದರೆ ಅಲ್ಲಿಯೂ ಬಿಜೆಪಿ ನಾಯಕರನ್ನು ಟೀಕಿಸುವ ಮೂಲಕ ಬಿಜೆಪಿಯಿಂದಲೂ ಅಂತರ ಕಾಯ್ದುಕೊಂಡು ಈಗ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮೂರು ಪಕ್ಷಗಳಿಂದಲೂ ದೂರವಾಗಿ ಮತ್ತೆ ಯಾವ ಪಕ್ಷದಿಂದ ಚುನಾವಣಾ ರಾಜಕೀಯ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ :- 2004ರ ವಿಧಾನಸಭಾ ಚುನಾವಣೆಯಲ್ಲಿ ಆತಂತ್ರ್ಯ ವಿಧಾನಸಭೆ ಬರುವ ಮುನ್ಸೂಚನೆಯಿದ್ದು ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ರಚನೆ ಮಾಡಿ ಎಚ್ ವಿಶ್ವನಾಥ್ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಚರ್ಚೆಯ ಜೊತೆಗೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಜೊತೆಯು ಚರ್ಚೆ ನಡೆಸಿದ್ದಾರೆ ಎಂಬ ಗುಸು-ಗುಸು ಸುದ್ದಿ ಹರಿದಾಡುತ್ತಿರುವಾಗಲೇ ವಿಧಾನಸಭಾ ಚುನಾವಣೆಯ ಫಲಿತಾಂಶ ಹೆಚ್ ವಿಶ್ವನಾಥ್ ಅವರಿಗೆ ದೊಡ್ಡ ಅಘಾತವನ್ನೇ ನೀಡಿತು ಜೆಡಿಎಸ್ ಅಭ್ಯರ್ಥಿ ಮಂಚನಹಳ್ಳಿ ಮಹಾದೇವ್ ವಿರುದ್ಧ ಕೇವಲ ಅತ್ಯಲ್ಪ ಮತಗಳಿಂದ ಸೋತು ಅಧಿಕಾರ ಕಳೆದುಕೊಂಡ ನಾಯಕರ ಸಾಲಿನಲ್ಲಿ ವಿಶ್ವನಾಥ್ ರವರು ಸೇರಿದರು.

ನಾಯಕತ್ವವನ್ನು ತ್ಯಾಗ ಮಾಡಿದ ಹೆಚ್ ವಿಶ್ವನಾಥ್ :- ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿ ಸೋಲಲಿ ಗೆಲ್ಲಲಿ ನಾಯಕತ್ವವನ್ನು ಉಳಿಸಿಕೊಂಡೇ ಬಂದಿದ್ದರು ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಹೊರಬಂದ ಮೇಲೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ಎಂ ಕೃಷ್ಣ ಸೇರಿದಂತೆ ಹಲವಾರು ರಾಜಕೀಯ ಮುಖಂಡರ ಜೊತೆಗೂಡಿ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರನ್ನು ಸೇರಿಸಿಕೊಳ್ಳುವ ಜೊತೆಗೆ ವಿರೋಧ ಪಕ್ಷದ ಸ್ಥಾನವನ್ನು ಕೊಡಿಸುವ ಹೊಣೆಗಾರಿಕೆಯನ್ನು ಅವರೇ ಹೊತ್ತಿಕೊಂಡು ಕೊನೆಗೆ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ತಾವೇ ಸ್ವತಃ ಸಿದ್ದರಾಮಯ್ಯನವರಿಗೆ ತ್ಯಾಗ ಮಾಡಿದರು.

ಸ್ವಜಾತಿ ಪ್ರೇಮಕ್ಕೆ ಕ್ಷೇತ್ರ ತ್ಯಾಗ ಮಾಡಿದರ ವಿಶ್ವನಾಥ್ :- ತಾವು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ಬಹುತೇಕ ದಿವಂಗತ ಮಂಚನಹಳ್ಳಿ ಮಹಾದೇವ್ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡಿದ್ದರು ಆದರೆ ಅನಿರೀಕ್ಷಿತ ಅವರ ಮೃತ್ಯುವಿನಿಂದಾಗಿ  ಮತ್ತೆ ಎಚ್ ವಿಶ್ವನಾಥ್ ಅವರ ಕೈ ಸೇರಿದ ನಾಯಕತ್ವ ಆದರೆ ವಿಶ್ವನಾಥ್ ರವರು 2013ರ ವಿಧಾನಸಭಾ ಚುನಾವಣೆಯಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹಾದೇವ್ ಪತ್ನಿ ಅನುರಾಧ ಮಹದೇವ್ ಮತ್ತು ಹಿರಿಯ ಕಾಂಗ್ರೆಸ್ಸಿಗ   ತಮ್ಮೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷ ವಿಶ್ವನಾಥ್ ಅವರ ಬಾಲ್ಯದ ಗೆಳೆಯ ಎ ಎಸ್ ಚನ್ನಬಸಪ್ಪ ಅಥವಾ ಒಕ್ಕಲಿಗ ಮುಖಂಡರಾದ ಸಾಲಿಗ್ರಾಮದ ಮಹಾರಾಷ್ಟ್ರದ ಇಂಜಿನಿಯರ್ ಎಸ್ ಪಿ ತಮ್ಮಯ್ಯ ಹಾಗೂ ಮುದುಗುಪ್ಪೆ ರಮೇಶ್ ಇಲ್ಲ ತಮ್ಮ ಪತ್ನಿ ಶಾಂತಮ್ಮ ವಿಶ್ವನಾಥ್ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ವಿ ದೇವರ ಹಟ್ಟಿ ಇಷ್ಟು ಜನರಲ್ಲಿ ಯಾರಿಗಾದರೂ ಅಭ್ಯರ್ಥಿಯನ್ನಾಗಿ ಮಾಡಬಹುದಿತ್ತು ಆದರೆ ಬಿಜೆಪಿ ಕೆಜಿಪಿಯಲ್ಲಿದ್ದ ಈಗಿನ ಶಾಸಕರಾದ ಡಿ ರವಿಶಂಕರ್ ಅವರ ತಂದೆ ಮತ್ತು ಇಂದು  ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡ ಸ್ವಾಮಿ ಗೌಡರಿಗೆ ಟಿಕೆಟ್ ಕೊಡಿಸುವ ಮೂಲಕ ಸ್ವಜಾತಿ ಪ್ರೇಮ ಇಂದು ಅವರಿಗೆ ಕ್ಷೇತ್ರ ಇಲ್ಲದಂತಾಗಲು ಕಾರಣವಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿಯೇ ಉಳಿದಿದೆ.

ಎಚ್ ವಿಶ್ವನಾಥ್ ಸಹಾಯ ಮಾಡಿದವರಿಂದಲೇ ಅವರಿಗೆ ತೊಂದರೆಯಾಯಿತು :- ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್ ವಿಶ್ವನಾಥ್ ಅವರು ದೊಡ್ಡ ಸ್ವಾಮಿಗೌಡರ ತಂಗಿಗೆ ಹೆಬ್ಬಾಳ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿದರು ಮತ್ತು ಶಾಸಕ ಡಿ ರವಿಶಂಕರ್ ಅವರನ್ನು ಸಾಲಿಗ್ರಾಮಾ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿದ್ದರು ಮತ್ತು ವಿಧಾನಸಭೆಗೆ ದೊಡ್ಡ ಸ್ವಾಮಿಗೌಡರಿಗೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಕಾಂಗ್ರೆಸ್ ನಾಯಕತ್ವವನ್ನು ಅವರ ಕುಟುಂಬಕ್ಕೆ ನೀಡಿದರ ಪರಿಣಾಮವಾಗಿ ಇಂದು ಶಾಸಕರಾಗಿ ಡಿ ರವಿಶಂಕರ್ ಆಯ್ಕೆಯಾಗಲು ಕಾರಣವಾಯಿತು ಆದರೆ ವಿಶ್ವನಾಥ್ ಅವರ ಪುತ್ರ ಅಮಿತ್ ವಿ ದೇವರಟ್ಟಿ ಎಂ ಡಿ ಸಿ ಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸಿದಾಗ ಋಣ ಸಂದಾಯ ಮಾಡುವ ಬದಲು ಅವರ ವಿರುದ್ಧ ದೊಡ್ಡ ಸ್ವಾಮಿಗೌಡರೇ ನಿಂತಿ ಅಮಿತ್ ವಿ ದೇವರೆಟ್ಟಿಯನ್ನು ಸೋಲಿಸಿ ಗೆದ್ದು ಅಧ್ಯಕ್ಷರಾದರು ಅದರಂತೆ ಎಚ್ ವಿಶ್ವನಾಥ್ ಅವರು ಯಾರಿಗೆ ಸಹಾಯ ಮಾಡಿದರೋ ಅವರೆಲ್ಲರೂ ವಿಶ್ವನಾಥ್ ರವರಿಗೆ ಕೈ ಕೊಟ್ಟರು ವಿಶ್ವನಾಥ್ ಮಾತ್ರ ಅವರನ್ನು ನಂಬಿದವರ ಕೈಬಿಡದೆ ಬೆಳೆಸಿದ ವ್ಯಕ್ತಿ ಇಂದು ದಾರಿ ಕಾಣದೆ ಕವಲು ದಾರಿಯಲ್ಲಿ ನನ್ನ ಪಯಣ ಎತ್ತಾ ಎಂದು ನೋಡುವಂತಾಗಿದೆ.

ತೆರೆ ಮರೆಯಲ್ಲಿ ಜೆಡಿಎಸ್ ಸೇರುವ ಮುನ್ಸೂಚನೆ ನೀಡುತ್ತಿರುವವರೇ ವಿಶ್ವನಾಥ್ :- ತಾನು ಬೆಳೆಸಿದವರೇ ನನಗೆ ಮೋಸ ಮಾಡಿದರು ಆದರೆ ನನಗೆ ಮತ್ತು ನನ್ನ ಕುಟುಂಬಕ್ಕೆ ಮುಂದಿನ ದಾರಿ ಯಾವುದು ಎಂಬಂತೆ ತಮ್ಮ ಪುತ್ರ ಅಮಿತ್ ವಿ ದೇವರಟ್ಟಿಯನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿ ತಮಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನ ನೀಡದಿದ್ದರೆ ತಮ್ಮ ಪುತ್ರ ಮತ್ತು ಮಾಜಿ ಸಚಿವ ಸಾರಾ ಮಹೇಶ್ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡು ತಮಗೆ ಮತ್ತು ತಮ್ಮ ಪುತ್ರನಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ಹುಡುಕಲು ಹೊರಟಿರುವ ಹೆಚ್ ವಿಶ್ವನಾಥ್ ಅವರು ಅಂದುಕೊಂಡಂತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹುಣಸೂರಿನ ಶಾಸಕ ಜಿಡಿ ಹರೀಶ್ ಗೌಡ ಜೆಡಿಎಸ್ ಅಭ್ಯರ್ಥಿಯಾದರೆ ಹುಣಸೂರು ಕ್ಷೇತ್ರಕ್ಕೆ ತಾವು ಅಥವಾ ತಮ್ಮ ಪುತ್ರ ಅಮಿತ್ ವಿ ದೇವರಹಟ್ಟಿಯನ್ನು ನಿಲ್ಲಿಸುವ ಮೂಲಕ ತಮಗೆ ಪುನರ್ಜನ್ಮ ನೀಡಿದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಬೆಂಬಲದಿಂದ ಮತ್ತೆ ವಿಧಾನಸಭೆ ಪ್ರವೇಶಿಸಲು ಪ್ರಯತ್ನಿಸುವರೆ? ಎಂಬುದು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಹೆಚ್ ವಿಶ್ವನಾಥ್ ರವರ ಅಭಿಮಾನಿ ಬಳಗದ ಆಶಯವಾಗಿದೆ.

ಒಟ್ಟಾರೆಯಾಗಿ ಐವತ್ತು ವರ್ಷಗಳ ಸುದೀರ್ಘ ರಾಜಕಾರಣ ಮಾಡಿ ಹಲವಾರು ವ್ಯಕ್ತಿಗಳನ್ನು ರಾಜಕಾರಣಿಯಾಗಿ ಮಾಡಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವರಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ಎಂ ಕೃಷ್ಣ ರವರ ಸಚಿವ ಸಂಪುಟದಲ್ಲಿ ಸಚಿವರಾಗಿ 2009ರಲ್ಲಿ ಸಂಸತ್ ಸದಸ್ಯರಾಗಿ ಉತ್ತಮ ಕೆಲಸವನ್ನು ಮಾಡಿ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿಯೇ ಮಾದರಿ ರಾಜಕಾರಣಿಯಾಗಿರುವ ಅಡಗೂರು ಹೆಚ್ ವಿಶ್ವನಾಥ್ ಅವರ ನಡೆ ಯಾವ ಕಡೆ ಎಂಬುದು 2026ರ ಜುಲೈ ಕೊನೆಯವರೆಗೂ ಕಾಯಬೇಕಾಗಿದೆ.

Contact us for classifieds and ads : +91 9742974234