

ಮೃತ ಮಹಿಳೆಮಾಹಿತಿ ಮರೆಮಾಚಿದ ಆರೋಪ: ಪಟ್ಟಣದ ಮಮತಗಂಗಾ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ವರದಿ:-ವಡ್ಡರಕೊಪ್ಪಲುಶಿವರಾಮು.
ಕೆ ಆರ್ ನಗರ. ಫೆ. 03:- ಬಡ ರೋಗಿಗಳ ಜೀವವನ್ನು ಹಿಂಡುತ್ತಿರುವ ಖಾಸಗಿ ಆಸ್ಪತ್ರೆಗಳು ಮಹಿಳೆಯ ಜೀವವನ್ನು ಬಲಿಪಡೆದು ಮೃತ ಮಾಹಿತಿಯನ್ನು ಪೋಷಕರಿಗೆ ತಿಳಿಸದೆ ವಂಚನೆ ಮಾಡಿದ ಪ್ರಕರಣ ಪಟ್ಟಣದ ಮಮತಗಂಗಾ ಹೆರಿಗೆ ಆಸ್ಪತ್ರೆಯಲ್ಲಿ ಇಂದು ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಸಾವನ್ನು ಮಾಹಿತಿ ಮರೆಮಾಚಿದ ಆರೋಪ: ಪಟ್ಟಣದ ಮಮತಗಂಗಾ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಪಟ್ಟಣದ ಏಳನೇ ರಸ್ತೆಯಲ್ಲಿರುವ ಮಮತಗಂಗಾ ಹೆರಿಗೆ ಮತ್ತು ಬಂಜೆತನ ಸಂಶೋಧನಾ ಕೇಂದ್ರ ಎಂಬ ಆಸ್ಪತ್ರೆಯಲ್ಲಿ ಹುಣಸೂರು ಪಟ್ಟಣದ ಅಜಾದ್ ನಗರದ ನಿವಾಸಿ ನಹಿಮ್ ಖಾನ್ ಪತ್ನಿ ಶಾಹಿನ್ ತಾಜ್ (34) ವರ್ಷ ಇವರು ಹೆರಿಗೆಂದು ಫೆಬ್ರವರಿ ಒಂದರಂದು ದಾಖಲಾಗಿದ್ದು ಆಸ್ಪತ್ರೆಯ ವೆಚ್ಚಕ್ಕಾಗಿ 40 ಸಾವಿರರೂಗಳನ್ನು ಪಾವತಿ ಮಾಡಿ ಹೆರಿಗೆಗೆ ಸೇರಿದರು ಫೆಬ್ರವರಿ ಎರಡರಂದು ಸೀಜರೆನ್ ಮಾಡಿ ಮಗುವನ್ನು ಹೊರ ತೆಗೆದು ಹೆಣ್ಣು ಮಗು ಬದುಕುಳಿದರೆ ತಾಯಿ ಮೃತರಾಗಿದ್ದು ಮೃತರಾದ ಮಾಹಿತಿಯನ್ನು ಪೋಷಕರಿಗೆ ತಿಳಿಸದೆ ಮುಚ್ಚಿಡುವ ಜೊತೆಗೆ ತಮ್ಮದೇ ಆದ ಆಂಬುಲೆನ್ಸ್ ವಾಹನದಲ್ಲಿ ಜೆಎಸ್ಎಸ್ ಆಸ್ಪತ್ರೆಗೆ ಆಸ್ಪತ್ರೆಯ ವೈದ್ಯರೇ ಕರೆದೊಗಿ ಮೃತರಾಗಿದ್ದಾರೆ ಎಂದು ತಿಳಿಸಿದ್ದು ಮೃತ ಶಾಹೀನ್ ತಾಜ್ ವರ ಪೋಷಕರು ಮತ್ತು ರೈತ ಸಂಘಟನೆಗಳು ಆಸ್ಪತ್ರೆಯಂಬಾಗ ಅಹೋ ರಾತ್ರಿಯ ಧರಣಿ ನಡೆಸುವ ನ್ಯಾಯ ಒದಗಿಸುವಂತೆ ಪ್ರತಿಭಟಿಸಿದ ಪ್ರಸಂಗ ನೆನ್ನೆ ರಾತ್ರಿ ಇಂದು ನಡೆಯಿತು.

ಮಮತಗಂಗಾ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಸಾವು, ಪೋಷಕರಿಗೆ ಮಾಹಿತಿ ನೀಡದೇ ವಂಚನೆ
ಆಸ್ಪತ್ರೆಯ ವೈದ್ಯಾಶಂಕರ ಸೋಮಾಜಿ ಮತ್ತು ಅವರ ಮಗ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದು ಹುಣಸೂರು ತಾಲೂಕಿನ ಅಜಾದ್ ನಗರದ ಮುಸ್ಲಿಂ ಕುಟುಂಬ ಸೇರಿದಂತೆ ರೈತ ಸಂಘಟನೆಗಳು ಕೆ.ಆರ್. ನಗರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಮೃತ ಮಹಿಳೆ ಕುಟುಂಬಕ್ಕೆ ಮತ್ತು ಆಕೆಗೆ ಜನ್ಮ ತಾಳಿದ ಕಣ್ಣು ಬಿಡದ ಹೆಣ್ಣು ಪಾಪುಗೆ ನ್ಯಾಯ ಒದಗಿಸಬೇಕು ಕಣ್ಣು ಬಿಡುವ ಮುನ್ನ ತಾಯಿಯನ್ನು ಕಳೆದುಕೊಂಡು ಅನಾಥಳಾದ ಮಗುವಿಗೆ ಸೂಕ್ತ ಭದ್ರತೆ ನೀಡಬೇಕು ಇದಕ್ಕೆ ಕಾರಣರಾದ ಅಪ್ಪ-ಮಗ ಇಬ್ಬರಿಗೂ ಶಿಕ್ಷೆಯಾಗಬೇಕು ಅವರ ನೋಂದಾಣಿಯನ್ನು ರದ್ದುಪಡಿಸಿ ಆಸ್ಪತ್ರೆಗೆ ಬೀಗ ಜಡೆಯ ಬೇಕೆಂದು ಒತ್ತಾಯಿಸಿದರು.
ಮುಗ್ಧಮಹಿಳೆಯನ್ನು ಬಲಿಪಡೆದು ನಿರ್ಲಕ್ಷ್ಯ: ಪೋಷಕರಿಗೆ ಸತ್ಯ ಮುಚ್ಚಿಟ್ಟ ಆಸ್ಪತ್ರೆ
ಪಟ್ಟಣದಲ್ಲಿ ರಾತ್ರಿ ಇಡಿ ಬಿಗಿವಿನ ವಾತಾವರಣವಿದ್ದು ಹುಣಸೂರಿನ ಆಜಾದ್ ನಗರದ ಮುಸ್ಲಿಂ ನಿವಾಸಿಗಳು ಮತ್ತು ರಾಜ್ಯ ಹಸಿರು ಸೇನೆ ರೈತ ಸಂಘದ ಸಂಘಟನೆಗಳ ಮುಖಂಡರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಬೇಕೇ ಬೇಕು ನ್ಯಾಯ ಬೇಕು ನ್ಯಾಯ ಸಿಗುವವರೆಗೂ ಸ್ಥಳ ಕದಲುವುದಿಲ್ಲ ಎಂದು ಆಸ್ಪತ್ರೆಯ ಮುಂಭಾಗ ಮಲಗಿದರು ರಾತ್ರಿ ಪೂರ್ಣ ಪಟ್ಟಣದ ಆರಕ್ಷಕ ಠಾಣೆಯ ನಿರೀಕ್ಷಕರಾದ ಶಿವಪ್ರಕಾಶ್ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳು ರಾತ್ರಿ ಪೂರ್ಣ ಪ್ರತಿಭಟನೆಕಾರರ ರಕ್ಷಣೆಯ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಸೂಕ್ತ ಬಂದು ಬಸ್ತು ವ್ಯವಸ್ಥೆಯನ್ನು ಮಾಡಿದರು.

ಬೆಳಗೆ 10 ಗಂಟೆಯಾಗುತ್ತಿದ್ದಂತೆ ಪ್ರತಿಭಟನೆ ತೀವ್ರಗೊಂಡ ವೇಳೆ ಡಿ ವೈ ಎಸ್ ಪಿ. ಟಿ ಬಿ ರಾಜಣ್ಣ ಸ್ಥಳಕ್ಕಾಗಮಿಸಿ ಕೆ ಆರ್ ನಗರದ ತಹಸೀಲ್ದಾರ್ ಸುರೇಂದ್ರ ಮೂರ್ತಿ ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಸಿ ನಟರಾಜ್ ಸಾಲಿಗ್ರಾಮ ಪೊಲೀಸ್ ಠಾಣೆಯ ನಿರೀಕ್ಷಕರಾದ ಶಶಿಕುಮಾರ್ ಕೆ ಆರ್ ನಗರ ಪೊಲೀಸ್ ಠಾಣೆಯ ಶಿವಪ್ರಕಾಶ್ ನೇತೃತ್ವದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶಂಕರ್ ಸೋಮಯಾ ಜಿ ಮತ್ತು ಅವರ ಮಗನ ಹಾಗೂ ಮೃತ ಕುಟುಂಬದ ಪತಿ ಮತ್ತು ಮಾವನ ಜೊತೆ ಚರ್ಚಿಸಿ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆಯ ರಾಜ್ಯ ರೈತ ಸಂಘದ ಅಧ್ಯಕ್ಷ ನಾಗರಾಜೆ ಗೌಡ ಉಪಾಧ್ಯಕ್ಷ ರಫಿ ಉಲ್ಲಾ. ಜಯರಾಮೇಗೌಡ. ಗಂಗಾಧರ್. ಶಶಿಕುಮಾರ್. ವಜಿದ್ ಪಾಷಾ. ಕುಮಾರ್. ತನ್ಚಿಮ. ಮಹದೇವ್. ಮರ್ತಾಯಮ್ಮ. ಪಾರ್ವತಿ. ಕುಸುಮ. ದೇವಿರಮ್ಮ. ಶಾಂತಮ್ಮ.ಜಯಮ್ಮ.ನವೀನ ಗೌಡ. ರಾಮ ನಾಯಕ ಸೇರಿದಂತೆ ಮೃತ ಕುಟುಂಬಸ್ಥರು ಮತ್ತು ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು ಆಸ್ಪತ್ರೆ ಮುಂಬಾಗ ಪ್ರತಿಭಟನೆ ಮಾಡುತ್ತಿರುವ ರೈತ ಸಂಘಟನೆ ಮತ್ತು ಕುಟುಂಬಸ್ಥರು.


