ನಾವೂ ಬದುಕುವ ನಮ್ಮೊಡನೆ ನಮಗಾಸರೆಯಾಗಿಹ ಪರಿಸರವನ್ನೂ ಉಳಿಸಿಕೊಳ್ಳಲು ಸಂಕಲ್ಪ ಮಾಡುವ
ಬೆಳೆಯಿರಿ ಗಿಡ,ಮರ ಅಳಿಯದಿರಲಿ ಪರಿಸರ, ಉಸಿರ ನೀಡಿ ಸರ್ವರ ಬದುಕನ್ನೂ ಸುಂದರಗೊಳಿಸಲಿ ಪರಿಸರ. ನಾವಿಂದು ೪ ಜಿ ಯುಗದಲ್ಲಿದ್ದೇವೆ.ಪಟ್ಟಣದಲ್ಲೇ ವಾಸ, ಕಾಂಕ್ರೀಟ್ ಕಾಡು, ಮಮತೆ ಪ್ರೀತಿ, ವಾತ್ಸಲ್ಯಗಳಿಗೂ ಬರ. ಕೂಡು ಕುಟುಂಬವಿಲ್ಲ, ಕುಳಿತು ಉಣ್ಣುವ ವ್ಯವಧಾನವಿಲ್ಲ, ಎಲ್ಲವೂ ಅಯೋಮಯ. ಮಳೆಗಾಲ, ಬೇಸಿಗೆ, ಚಳಿಗಾಲವೆಂಬ ಪರಿವೆಯೂ ಅರಿವಿಗೆ ಬಾರದಾಗಿದೆ. ಮಾನವ ಜೀವಸಂಕುಲ ಇಂದು ವಿವೇಚನಾ ಶೂನ್ಯನಾಗಿ ಪ್ರಕೃತಿ ನೀಡಿರುವ ಸ್ವಾಭಾವಿಕ ಸಂಪತ್ತನ್ನು ಎಗ್ಗಿಲ್ಲದೆ ವಿನಾಶಗೊಳಿಸುತ್ತಿದ್ದಾನೆ. ಇದರ ಧೂರ್ತಫಲವೇ ಮಣ್ಣಿನ ಸವಕಳಿ, ನೆರೆಹಾವಳಿ,...