ವಿಶ್ವರತ್ನ, ಆಧ್ಯಾತ್ಮಿಕ ಜಗದ್ಗುರು, ಭಾರತದ ಹೆಮ್ಮೆಯ ಪುತ್ರ, ಶಾಂತಿ ಸೌಹಾರ್ದತೆ ಸರಳತೆಯ ಪ್ರತಿರೂಪ, ಯುವಕರ ಕಣ್ಮಣಿ, “ಸ್ವಾಮೀ ವಿವೇಕಾನಂದ” ರವರ ಜಯಂತೋತ್ಸವದ ಶುಭಾಶಯಗಳು…
ಸ್ವಾಮೀ ವಿವೇಕಾನಂದರವರು ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಶ್ರೀ ಶೇಷಾದ್ರಿ ಅಯ್ಯರ್ ರವರ ಆಹ್ವಾನದ ಮೇರೇಗೆ ಮೈಸೂರು ಅರಮನೆಗೇ ಭೇಟಿನೀಡಿದರು. ಅವರನ್ನು ಅಂದಿನ ಮೈಸೂರು ಮಹಾರಾಜರಾದ ಶ್ರೀಮನ್ ಮಹಾರಾಜ “ಶ್ರೀ ಹತ್ತನೇ ಚಾಮರಾಜೇಂದ್ರ ಒಡೆಯರ್” ರವರು ಆದರದಿಂದ ಸ್ವಾಗತಿಸಿದರು.
ಸ್ವಾಮೀಜಿಗಳ ದಾರ್ಶನಿಕತ್ವಕ್ಕೆ ಮತ್ತು ಬುದ್ಧಿವಂತಿಕೇಗೆ ಬೆರಗಾಗಿ ಅವರ ಚಿಕಾಗೊ ಸರ್ವಧರ್ಮ ಸಮ್ಮೇಳನದ ಪ್ರಯಾಣದ ವೆಚ್ಚವನ್ನು ಮಹಾರಾಜರೇ ಭರಿಸಿದರು ಮತ್ತು ಸ್ವಾಮೀಜಿಗೇ ಚಿಕಾಗೊದಲ್ಲಿ ಹಾಗು ಪ್ರಯಾಣದ ಸಮಯದಲ್ಲಿ ಯಾವುದೇ ಕುಂದು ಕೊರತೇ ಉಂಟಾಗದಂತೇ ನೋಡಿಕೊಳ್ಳಲು ಸೇವಕರನ್ನು ಕಳಿಸಿಕೋಟ್ಟರು ಹಾಗೂ ಅಭಿಮಾನದಿಂದ ಅವರಿಗೇ ಕಾಫಿ ಬಣ್ಣದ ಕೋಟನ್ನು ಉಡುಗೊರೆಯಾಗಿ ನೀಡಿದರು.
ಸ್ವಾಮೀ ವಿವೇಕಾನಂದ ರವರು ಸಂತೋಷದಿಂದ ಸ್ವೀಕರಿಸಿ ಸರ್ವಧರ್ಮ ಸಮ್ಮೇಳನದಲ್ಲಿ ಅದನ್ನು ತೊಟ್ಟು ಭಾಷಣಮಾಡಿದರು. ಸ್ವಾಮೀಜಿ ಹಾಗೂ ಮಹಾರಾಜರ ನಡುವೆ ಹಲವಾರು ಪತ್ರವ್ಯವಹಾರಗಳು ನಡೆದಿರುವ ಸನ್ನಿವೇಶಗಳನ್ನು ಕಾಣಬಹುದು. ಇಂತಹ ದಾರ್ಶನಿಕರ ಸೇವೆಗೆ ಅವಕಾಶ ಪಡೇದ ಕರ್ನಾಟಕದ ಜನತೇ ನಿಜವಾಗಿಯೂ ಧನ್ಯರು ವಿವೇಕಾನಂದರ ವಿಶ್ವಖ್ಯಾತಿಯ ಹಿಂದೆ ನಮ್ಮ ಮೈಸೂರಿನ ನಂಟನ್ನು ಇಲ್ಲಿ ಸ್ಮರಿಸಬಹುದಾಗಿದೆ ಇಂತಹ ದಾರ್ಶನಿಕರನ್ನು ಹಾಗೂ ಮಹಾರಾಜರನ್ನು ಪಡೆದ ನಾವೇ ಧನ್ಯರು.