History

ಜಗದೊಡತಿ ಚಾಮಾಯಿ – ನಾಡ ದೇವತೆ ಚಾಮುಂಡಿ

ರಾಘವೇಂದ್ರ ಪ್ರಕಾಶ್

chamundeshwari

ಕನ್ನಡಿಗರ ಹಿರಿ ದೈವವಾಗಿ, ಮೈಸೂರು ಸಂಸ್ಥಾನದ ಕುಲ ದೇವತೆಯಾದ ಈ ಮಹಾ ತಾಯಿಯ ಚಾರಿತ್ಯ ಅಮೋಘ, ಅದ್ಬುತ ಮತ್ತು ಪರಮ ಪುಣ್ಯದಾಯಕ. ಲೋಕ ಕಂಟಕನಾದ ಮಹಿಷಾಸುರ ಋಷಿ, ಮುನಿಗಳಿಗೆ, ಮಾನವರಾದಿಯಾಗಿ ದೇವನು ದೇವತೆಗಳಿಗೂ ಕಂಟಕನಾಗಿ ಮೂರು ಲೋಕಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಮಹಿಷೂರು ಎಂಬ ಪಟ್ಟಣದಿಂದ ಎಲ್ಲವನ್ನು ನಿಯಂತ್ರಿಸುತ್ತಿದಾಗ, ಋಷಿ, ಮುನಿಗಳಾದಿಯಾಗಿ ಜಗನ್ಮಾತೆಯ ಆಶ್ರಯ ಪಡೆಯಲು ಪ್ರಾರ್ಥಿಸಿದವರಾಗಿ, ಜಗತ್ಜನನಿ ತನ್ನ ಸರ್ವ ಶಕ್ತಿಗಳನ್ನು ಒಗ್ಗೂಡಿಸಿ ಚೆಂಡಿ ಚಾಮುಂಡಿಯಾಗಿ ಚಂಡ ಮುಂಡರಾದಿಯಾಗಿ ಸಾಗರೋಪಾದಿಯಾಗಿ ಬಂದ ಮಹಿಷಾಸುರನ ಬಂಟರನ್ನು ಮತ್ತು ಕೊನೆಯಲ್ಲಿ ಮಹಿಷಾಸುರನನ್ನು ಸಂಹರಿಸಿ ಲೋಕಕ್ಕೆ ಮತ್ತೊಮ್ಮೆ ಶಾಂತಿಯನ್ನು ಪ್ರಸಾದಿಸಿದಳು, ಇಂತಹ ರಣ ರೋಚಕ ಘಟನೆಗಳಿಗೆ ಸಾಕ್ಷಿ ಆಗಿದ್ದು ಮಹಿಷೂರು ಅನಿಸಿಕೊಂಡ ಈಗಿನ ನಮ್ಮ ಮೈಸೂರು, ಇದೆ ಬೆಟ್ಟದ ಮೇಲೆ ತಾಯಿ ಮಹಿಷಾಸುರನನ್ನು ಮತ್ತು ಅವನ ಬಂಟರನ್ನು ಸಂಹರಿಸಿದ್ದು.

sri krishnadevaraya hampi

ಇದು ಒಂದು ಭಾಗ ಎನಿಸಿದರೆ ನಂತರದ ದಿನಗಳಲ್ಲಿ ಇಲ್ಲಿ ಪರಮೇಶ್ವರ ಮಹಾಬಲನಾಗಿ ನೆಲೆ ನಿಂತ ಕಾರಣ ಇದನ್ನು ಮಹಾಬಲಾದ್ರಿ ಎಂದು ಕರೆಯಲಾರಂಭಿಸಿದರು. ಮಾರ್ಕಂಡೇಯ ಮಹಾ ಮುನಿಗಳು ಈ ಕ್ಷೇತ್ರದಲ್ಲಿ ಸಂಚಾರದಲ್ಲಿದ್ದಾಗ ತಮ್ಮ ದಿವ್ಯ ಶಕ್ತಿಯ ಅನುಭಾವದಿಂದ ಈ ಸ್ಥಳವೂ ಶಕ್ತಿ ಪ್ರಾಧಾನ್ಯ ಕ್ಷೇತ್ರವೆಂದು ತಿಳಿದು, ಹಿಂದೆ ಲೋಕ ಮಾತೇ ರಾಕ್ಷಸ ಸಂಹಾರ ಮಾಡಲು ಚಾಮುಂಡಿಯಾಗಿ ಅವತಾರ ಮಾಡಿದ ಪುಣ್ಯ ಕ್ಷೇತ್ರ ಎಂದರಿತು ಇಲ್ಲಿ 8 ಭುಜಗಳಲುಳ್ಳ, ಮಹಿಷಾಸುರ ಸಂಹಾರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಮುಂದೆ ಮೈಸೂರು ಸಾಮ್ರಾಜ್ಯದ ಕುಲ ದೈವವಾಗಿ ನೂರಾರು ವರುಷಗಳಿಂದ ತನ್ನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸುತ್ತ, ಭಕ್ತ ಕೋಟಿಯನ್ನು ರಕ್ಷಣೆ ಮಾಡುತ್ತಾ, ನಾಡಿನ ಅಧಿ ದೇವತೆಯಾಗಿ ಕನ್ನಡಿಗರ ಮನೆ ಮತ್ತು ಮನದ ದೈವವಾಗಿ ರಾರಾಜಿಸುವ ರಾಜ ರಾಜೇಶ್ವರಿಯಾಗಿ ಬೆಟ್ಟದ ಮೇಲೆ ನೆಲೆನಿಂತಿದ್ದಾಳೆ.

ಪುರಾಣಗಳ ಪ್ರಕಾರ ಅಷ್ಟ ದಶ ಪೀಠಗಳು ಎನಿಸಿದ 18 ಶಕ್ತಿ ಪೀಠಗಳಲ್ಲಿ ನಮ್ಮ ಚಾಮುಂಡಿಗೆ 4 ನೇ ಸ್ಥಾನ “ಚಾಮುಂಡಿ ಕ್ರೌಂಚ ಪಟ್ಟಣೆ” – ಕ್ರೌಂಚ ಪಟ್ಟಣ ಅಂದರೆ ನಮ್ಮ ಮೈಸೂರು ನಗರವೇ. ಇಂತಹ ಪುರಾಣ ಪ್ರಸಿದ್ಧ, ಐತಿಹಾಸಿಕ ಚಾರಿತ್ಯೇ ಉಳ್ಳ ತಾಯಿ ನಮ್ಮ ಕನ್ನಡ ನೆಲದವಳು ಅನ್ನುವುದೇ ನಮ್ಮ ಹೆಮ್ಮೆ, ನಮ್ಮ ಭಾಗ್ಯ, ನಮ್ಮ ಪುಣ್ಯ. ಇಂತ ಸರ್ವೇಶ್ವರಿಯ ನಾಮ ಸ್ಮರಣೆಯಿಂದ ನಮ್ಮ ಜೀವನವನ್ನು ಸಾರ್ಥಕವಾಗಿಸುವ.

 

Cover Page Art by: ರಾಹುಲ್, Mahishamandala.

Contact us for classifieds and ads : +91 9742974234



 
error: Content is protected !!