ಸಾಂಸ್ಕೃತಿಕ ನಗರಿಯಲ್ಲಿ ಮಂಗಳವಾರ ಚಿನ್ನಾಭರಣ ದರೋಡೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಅಮಾಯಕ ಯುವಕ ಬಲಿಯಾಗಿದ್ದಾರೆ. ಹಾಡಹಗಲೇ ನಡೆದ ಘಟನೆಯು ನಾಗರಿಕರನ್ನು ಬೆಚ್ಚಿಬೀಳಿಸಿದೆ.
ಸಾಂಸ್ಕೃತಿಕ ನಗರಿಯಲ್ಲಿ ಇಂದು ಗುಂಡಿನ ಸುರಿಮಳೆಗೈದಿದೆ. ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದ ದರೋಡೆಕೋರರು ಆಭರಣ ವ್ಯಾಪಾರಿಯ ಕೈಕಾಲು ಕಟ್ಟಿ ಚೆನ್ನಾಗಿ ಥಳಿಸಿ ಕದೀಮರು ದರೋಡೆ ಮಾಡಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ವಿದ್ಯಾರಣ್ಯಪುರಂ ಅಮೃತ ಗೋಲ್ಡ್ ಪ್ಯಾಲೇಸ್‌ನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಗುಂಡಿನ ದಾಳಿಗೆ ದಡದಹಳ್ಳಿ ನಿವಾಸಿ ಚಂದ್ರು (೨೩) ಮೃತರಾಗಿದ್ದಾರೆ. ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರ ಗಾಯಗೊಂಡಿದ್ದಾರೆ.
ವಿದ್ಯಾರಣ್ಯಪುರಂ ಮುಖ್ಯರಸ್ತೆಯಲ್ಲಿರುವ ಅಮೃತ ಚಿನ್ನಾಭರಣ ಮಳಿಗೆಗೆ ಸೋಮವಾರ ಸಂಜೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದ್ದ ನಾಲ್ವರು ದರೋಡೆಕೋರರು ಮಾಲೀಕ ಧರ್ಮೇಂದ್ರನ ಕೈಕಾಲು ಕಟ್ಟಿ ಚೆನ್ನಾಗಿ ಥಳಿಸಿ ದರೋಡೆ ಮಾಡಿದ್ದಾರೆ. ಬೆಳ್ಳಿ ಬಿಟ್ಟು ಚಿನ್ನದ ಆಭರಗಳನ್ನು ದೋಚಿದ್ದಾರೆ.
ಚಿನ್ನಾಭರಣ ಅಂಗಡಿಯಿಂದ ಹೊರಬಂದು ದರೋಡೆಕೋರರು ಪರಾರಿಯಾಗಲು ಯತ್ನಿಸಿದ ವೇಳೆ ಹಾರಿಸಿದ ಗುಂಡು ರಸ್ತೆಯಲ್ಲಿದ್ದ ಯುವಕನ ತಲೆಗೆ ತಗಲಿ ಬಿದ್ದು ಸ್ಥಳದಲ್ಲೇ ಮೃತರಾದರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಾಡಹಗಲೇ ನಡೆದ ಚಿನ್ನಾಭರಣ ದರೋಡೆ ಜತೆಗೆ ಗುಂಡಿಗೆ ಓರ್ವ ಯುವಕ ಬಲಿಯಾಗಿರುವುದು ವಿದ್ಯಾರಣ್ಯಪುರಂ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದರು. ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಡಿಸಿಪಿ ಗೀತಾ ಪ್ರಸನ್ನ ಅವರ ನೇತೃತ್ವದಲ್ಲಿ ಪೊಲೀಸರು ಚಿನ್ನಾಭರಣ ಮಳಿಗೆ ಸುತ್ತ ತೀವ್ರ ಶೋಧೆ ನಡೆಸಿದರು.
ದರೋಡೆಕೋರರ ಪತ್ತೆಗೆ ಪೊಲೀಸರು ನಾಕಬಂದಿ ಹಾಕಿದ್ದಾರೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದರು. ಸಿಸಿಟಿವಿ ಫೋಟೋ ಬಿಡುಗಡೆ ಮಾಡಿದ್ದು, ಆ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಯಲ್ಲಿ ದಡದಲ್ಲಿ ನಿವಾಸಿ 23ವರ್ಷದ ಚಂದ್ರು ಸಾವನ್ನಪ್ಪಿದ್ದು, ಚಿನ್ನಾಭರಣ ವ್ಯಾಪಾರಿ ಧರ್ಮೇಂದ್ರ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಮಾಲೀಕರನ್ನು ನಗರದ ಮುಖ್ಯರಸ್ತೆಯಲ್ಲಿರುವ ಅಂಗಡಿಗೆ 4 ದರೋಡೆಕೋರರು ಲಗ್ಗೆ ಇಟ್ಟಿದ್ದು, ಚಿನ್ನ ಕದ್ದು ಬೆಳ್ಳಿಯನ್ನ ಬಿಟ್ಟು ಹೋಗಿದ್ದಾರೆ. ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಮಾಲೀಕ ಎನ್ನಲಾಗಿದ್ದು, ಪಿಸಿ ಕೊಳ್ಳುವ ಯತ್ನದಲ್ಲಿ ಸಾರ್ವಜನಿಕನೀಗೆ ಗುಂಡೇಟು ತಗುಲಿದೆ ಎನ್ನಲಾಗಿದೆ. ಇನ್ನು ಮಾಲೀಕನ ಚಿಕ್ಕಪ್ಪ ಅಂಗಡಿ ಬಾಗಿಲು ತೆಗೆದಿದ್ದು ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.