ಗದಗದಲ್ಲಿ ದೇವಾಲಯಗಳ ಧ್ವಂಸ: ಎರಡು ಗ್ರಾಮಗಳಲ್ಲಿ ವಿಗ್ರಹಗಳಿಗೆ ಹಾನಿ, ಗ್ರಾಮಸ್ಥರ ಆಕ್ರೋಶ
ಗದಗ, ಫೆಬ್ರವರಿ 19: ರಾಜ್ಯದ ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕೃತ್ಯಗಳು ಮುಂದುವರಿದಿದ್ದು, ಎರಡು ಗ್ರಾಮಗಳಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಹಾನಿ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಈಗಾಗಲೇ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮ ದೇವರುಗಳ ಮೂರ್ತಿಗಳನ್ನು ಕಿಡಿಗೆಡಿಗಳು ಧ್ವಂಸಗೊಳಿಸಿದ್ದ ಪ್ರಕರಣದ ತನಿಖೆಯನ್ನು ಪೋಲಿಸರು ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಮಲ್ಲಿಕಾರ್ಜುನಪುರ ಮತ್ತು ಆದರಳ್ಳಿ ಗ್ರಾಮಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು ಜನರಲ್ಲಿಭಯ ಹಾಗೂ ಆತಂಕ ಮೂಡಿಸಿದೆ. ಇಲ್ಲಿನ ಸ್ಥಳಿಯರ ಮಾಹಿತಿಯ ಪ್ರಕಾರ, ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಗಾಳಿ ಬಸವೇಶ್ವರ ದೇವಸ್ಥಾನದಲ್ಲಿ ಯಾರೋ ಅಪರಿಚಿತರು ಶಿವಲಿಂಗ, ಪಾಣಿಪೀಠ ಮತ್ತು ನಂದಿ ವಿಗ್ರಹಗಳಿಗೆ ಹಾನಿ ಮಾಡಿದ್ದಾರೆ. ಬೆಳಗಿನ ಜಾವ ದೇವಸ್ಥಾನಕ್ಕೆ ತೆರಳಿದ ಗ್ರಾಮಸ್ಥರು ವಿಗ್ರಹಗಳು ಭಗ್ನಗೊಂಡಿರುವುದನ್ನು ಕಂಡು ಇಲ್ಲಿನ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಮೂರ್ತಿ ಭಗ್ನವಾಗಿರುವ ವಿಷಯ ತಿಳಿದು ಸ್ಥಳಕ್ಕೆ ಸ್ಥಳಿಯ...











