ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹೀಶೂರ ಸಂಸ್ಥಾನ ಪುರವರಾಧೀಶ ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ನಾಡು ಕಂಡ ಒಬ್ಬ ಶ್ರೇಷ್ಠ ಮಹಾ ರಾಜಾ, ಇವರು ನಮ್ಮ ನಾಡನ್ನು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ.
ಬ್ರಿಟಿಷ್ ಆಡಳಿತವಿದ್ದ ಕಾಲ ಅದು, ಸ್ವತಂತ್ರವಾಗಿ ರಾಜ್ಯಾಡಳಿತ ನೆಡೆಸಲಾಗದ ಕಾಲಮಾನದಲ್ಲಿ, ಬ್ರಿಟಿಷ್ ಸರ್ಕಾರವನ್ನು ತಮ್ಮ ಸಹನೆ, ಸಂಯಮ, ತಾಳ್ಮೆ, ಬುದ್ಧಿವಂತಿಕೆಯಿಂದ ತಾವುಗಳು ಮಾಡುತ್ತಿದ್ದ ಜನ ಪರ ಕಾರ್ಯಗಳಿಗೆ ಸಹಕಾರ ಪಡೆಯುತ್ತಿದ್ದರು.
ತಮಗೆ ಸಿಗಬೇಕಾದ ರಾಜ ಮರ್ಯಾದೆ ಬ್ರಿಟಿಷ್ ಕುನ್ನಿಗಳು ನೀಡದೆ ಹೋದರು, ಜನ ಪರ ಕಾರ್ಯಕ್ರಮಗಳು ನಿಲ್ಲಬಾರದು, ಪ್ರಜೆಗಳಿಗೆ ರಾಜರ ಪ್ರತಿಷ್ಠೆ ಮುಳ್ಳಾಗ ಬಾರದು ಎಂದು ಅರಿತ ಪ್ರಭುಗಳು, ತಮ್ಮ ಬುದ್ಧಿವಂತಿಕೆ, ಕಾರ್ಯ ವೈಖರಿ, ಮತ್ತು ಸದಾ ಜನ ಪರ ಕಾಳಜಿಯಿಂದ ನಮಗೆ ಬೇಕಾದ ಸವಲತ್ತುಗಳನ್ನು ಕೊಟ್ಟು ನಮಗೆಲ್ಲಾ ದೇವರಾದದ್ದು ನಾವು ಮರೆತರೆ ಕನ್ನಡ ಭುವನೇಶ್ವರಿ ನಮ್ಮನ್ನು ಎಂದಿಗೂ ಕ್ಷಮಿಸಲಾರಳು.