Latest News

ಫುಲ್ ಪೈಸಾ ವಸೂಲ್ ಮನೋರಂಜನೆ ನೀಡುವ ಓಲ್ಡ್ ಮಾಂಕ್ ಸಿನಿಮಾ

ಪುರುಷೋತ್ತಮ್ ‍ಅಗ್ನಿ - Ask Mysuru

oldmonk

ಓಲ್ಡ್ ಮಾಂಕ್ ಸಿನಿಮಾ ಬಹಳ ಕುತೂಹಲ ಕೆರಳಿಸುವ ಹೆಸರು.

ಪ್ರೀಮಿಯರ್‌ ಷೋನಲ್ಲಿಯೇ ಇಡೀ ಪ್ರೇಕ್ಷಕರ ಮನಗೆದ್ದು ಶಿಳ್ಳೆ ಹಾಗೂ ಚಪ್ಪಾಳೆಗಳಿಸಿದ ಅದ್ಭುತವಾದ ಯಶಸ್ವಿ ಸಿನಿಮಾ ಎನ್ನಬಹುದು.

sri krishnadevaraya hampi

ಇದರಲ್ಲಿ ಅಭಿನಯಿಸಿರುವ ನಾಯಕ ನಟ ಶ್ರೀನಿ ಅವರ ವಿಶೇಷತೆ ಅಂದರೆ ಅವರ ನಿರ್ದೇಶನದಲ್ಲಿಯೇ ಮೂಡಿಬಂದಿರುವ ಈ ಚಲನಚಿತ್ರದಲ್ಲಿ ಅವರ ನಟನೆ ಹಾಸ್ಯ, ಸಂವೇದನಾತ್ಮಕ, ಕೌಟುಂಬಿಕ ಸಾಮರಸ್ಯ, ಅವರ ನಗು ಹಾಗೂ ಡೈಲಾಗ್ ಡೆಲಿವರಿ ಎಲ್ಲಾ ರೀತಿಯ ಸನ್ನಿವೇಶಗಳಲ್ಲಿಯು ಒಗ್ಗಿಕೊಂಡು ಸೆಳೆಯಬಲ್ಲದ್ದಾಗಿತ್ತು.

ಇನ್ನೂ ನಾಯಕಿ ನಟಿ ಅದಿತಿ ಪ್ರಭುದೇವರವರು ಶ್ರೀನಿ ಅವರ ಜೊತೆಯಲ್ಲಿ ತೆರೆಯ ಮೇಲೆ ಹೆಜ್ಜೆಹಾಕಿ ನಟಿಸಿ ಮೂಡಿಬಂದಿರುವ ಮುದ್ದಾದ ಅಭಿನಯವನ್ನು ನೋಡಬಹುದು. ಇಡಿಯ ಸಿನಿಮಾದಲ್ಲಿ ಪೋಷಕ ಪಾತ್ರ ವಹಿಸಿರುವ ಅದರಲ್ಲೂ ವಿಶೇಷತೆಗಳಿಂದ ಕೂಡಿದ್ದ ಎಸ್. ನಾರಾಯಣ್ ರವರ ಹಾಗೂ ಸಿಹಿಕಹಿ ಚಂದ್ರುರವರ ಪಾತ್ರ ಬಹಳ ಚೆನ್ನಾಗಿ ಮನರಂಜಿಸಿದವು.

ನಾಯಕ ನಟನ ಜೊತೆಯಲ್ಲಿ ಸ್ನೇಹಿತನ ಪಾತ್ರ ವಹಿಸಿದ್ದ ಸುಜಯ್ ಶಾಸ್ತ್ರಿ. ಇವರ ಪಾತ್ರವು ಪ್ರತಿ ಹಂತದಲ್ಲಿಯೂ ಮನಸೆರೆಹಿಡಿಯುತ್ತಿತ್ತು. ಅಷ್ಟೇ ಅಲ್ಲದೇ ಪೂರ್ತಿ ಚಲನಚಿತ್ರ ಎಲ್ಲಿಯೂ ಬೇಸರ (ಬೋರ್ ) ಅನಿಸುವುದಿಲ್ಲ. ಎಲ್ಲಾ ಸಿನಿಮಾಗಳ ರೀತಿಯಲ್ಲಿ ಇದು ಕೂಡ ಒಂದು ಎಂಬ ಮಾತಿಗೆ ದೂರವಾಗಿದೆ ಈ ಸಿನಿಮಾದಲ್ಲಿ ಫೈಟಿಂಗ್ ಇಲ್ಲ, ಅದರ ಬದಲಾಗಿ ಫುಲ್ ಪೈಸಾ ವಸೂಲ್ ಎನ್ನುವಷ್ಟು ಕಾಮಿಡಿ ಮನರಂಜನೆಯನ್ನು ನಾವು ನೋಡಬಹುದು. ಅಷ್ಟೇ ಅಲ್ಲದೇ ಹಿರಿಯನಾಗರಿಕರ ಪಾತ್ರ ಅವರ ಅಭಿನಯಗಳನ್ನು ವಿಶೇಷವಾಗಿ ನಾವು ಏನು ಕಡಿಮೆ ಇಲ್ಲ ಎನ್ನುವಂತೆ ತುಂಬಾ ಚೆನ್ನಾಗಿ ನಟನೆ ಮಾಡಿರುವುದನ್ನ ನಾವು ನೋಡಬಹುದು. ಪೂರ್ತಿ ಸಿನಿಮಾ ನೋಡಿ ಹೊರ ಬರುವಾಗ ಒಂದು ರೀತಿ ಮೈಂಡ್ ರಿಫ್ರೆಶ್ ಆಗುವುದಂತೂ ಪಕ್ಕಾ.

ಅಷ್ಟು ಕಾಮಿಡಿ, ಸಾಮಾಜಿಕ ಸಂದೇಶ, ಪ್ರೇಮಿಗಳಿಗೆ ಸಾಂತ್ವನ ಒಟ್ಟಾರೆ ಎಲ್ಲಾ ವಯಸ್ಕರು ಕುಟುಂಬ ಪರಿವಾರದೊಂದಿಗೆ ಓಲ್ಡ್ ಮಾಂಕ್ ಸಿನಿಮಾವನ್ನು ನೋಡಿದರೆ ಅದರ ಮಜಾನೇ ಬೇರೆ. ಎಲ್ಲರೂ ನೋಡಬಹುದು ಎಂಜಾಯ್ ಕೂಡಾ ಮಾಡಬಹುದು. ನೀವು ಸಹ ಓಲ್ಡ್ ಮಾಂಕ್ ಕನ್ನಡ ಸಿನೆಮಾ ಥಿಯೇಟರ್ ನಲ್ಲಿ ಹೋಗಿ ನೋಡಿ ಆನಂದಿಸಿ.

Ask Mysuru
Movie Review
Our Rating: 4.5/5

Contact us for classifieds and ads : +91 9742974234



 
error: Content is protected !!