ಆದಿವಾಸಿಗಳು ಪುರಾತನ ಸಂಸ್ಕೃತಿ, ಜ್ಞಾನದ ವಾರಸುದಾರರು : ಎಂ.ಆರ್. ಗಂಗಾಧರ್
ಮೈಸೂರು, ಫೆ.23:- ಆದಿವಾಸಿಗಾಳು ಪ್ರಪಂಚದ ಅತ್ಯಂತ ಪುರಾತನ ಸಂಸ್ಕೃತಿ ಮತ್ತು ಜ್ಞಾನದ ವಾರಸುದಾರರು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಎಂ.ಆರ್. ಗಂಗಾಧರ್ ತಿಳಿಸಿದರು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ನಡೆದ ಬುಡಕಟ್ಟು ಜನರ ಆರೋಗ್ಯ ಮತ್ತು ಆರೋಗ್ಯ ರಕ್ಷಣಾ ಪದ್ಧತಿಗಳ ಮೇಲೆ ಜಾಗತೀಕರಣ ಮತ್ತು ಸಾಂಸ್ಕೃತಿಕ ನಂಬಿಕೆಗಳ ಪ್ರಭಾವ ಕುರಿತು ನಡೆದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಎಂದರೆ ಕೇವಲ ಔಷಧ ಮತ್ತು ಆಸ್ಪತ್ರೆಯಲ್ಲ ಅದು ಪೌಷ್ಠಿಕತೆ. ನಂಬಿಕೆ, ಪಾರಂಪರಿಕತೆ ಮತ್ತು ಅಸ್ಮಿತೆಯನ್ನು ಒಳಗೊಂಡಿದೆ. ಆದಿವಾಸಿಗಳ ವಿಶೇಷವಾದ ಜ್ಞಾನ ಜಾಗತೀಕರಣದಲ್ಲಿ ಸ್ಥಾನ ಪಲ್ಲಟಗೊಳ್ಳುತ್ತಿದೆ. ಇದನ್ನೂ ಓದಿ:- ಫೆಬ್ರುವರಿ 30 ಸಿನಿಮಾ ಬಿಡುಗಡೆಗೆ ಉತ್ತಮ ಸ್ಪಂದನೆ: ನಿರ್ದೇಶಕ ಎಂ.ಎಲ್. ಪ್ರಶಾಂತ್ ಜಾಗತೀಕರಣವು ಅನುಕೂಲ ಮತ್ತು ಅನಾನುಕೂಲ ಎರಡನ್ನು...





