Latest News

ಜನವರಿ 26 ರಂದೇ ಗಣರಾಜ್ಯೋತ್ಸವ ಯಾಕೆ?

- ಲಕ್ಷ್ಮಿ ಕಿಶೋರ್ ಅರಸ್

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಮಹಾನ್ ದೇಶ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ನೆಲ, ಜಲ ,ಭಾಷೆ ,ಸಂಸ್ಕೃತಿ ,ಇತಿಹಾಸ, ವೈಭವ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ ಮತ್ತು ವಿಶೇಷ .
ನಮ್ಮ ದೇಶವು ಪ್ರಪಂಚದ ಅತಿ ದೊಡ್ಡ ಗಣರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

sri krishnadevaraya hampi

ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ದೇಶಾದ್ಯಂತ ಆಚರಿಸುತ್ತೇವೆ. ದೇಶದೆಲ್ಲೆಡೆ ಧ್ವಜಾರೋಹಣ ನೆರವೇರಿಸಿ ಅಭಿಮಾನದಿಂದ ಗಣರಾಜ್ಯೋತ್ಸವವನ್ನು ನೆರವೇರಿಸುತ್ತೇನೆ. ಗಣರಾಜ್ಯೋತ್ಸವದ ಬಗ್ಗೆ ಇದರ ಪೂರ್ವಪರ ಇತಿಹಾಸದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ.

ಈ ದಿನ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
ಜನವರಿ 26 ರಂದೇ ಏಕೆ? ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ, ಅದರ ಹಿನ್ನೆಲೆ ಏನು, ಅದರ ಹಿಂದಿನ ವಿಶೇಷತೆ ಏನು, ಏಕೆ ಈ ದಿನ ಭಾರತೀಯರ ಪಾಲಿಗೆ ಇಷ್ಟೊಂದು ವಿಶೇಷ! ಎಂಬುದನ್ನು ತಿಳಿಯುತ್ತಾ ಹೋಗೋಣ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1950 ಜನವರಿ 26ರಂದು ಸಂವಿಧಾನವನ್ನು ಅಳವಡಿಸಿಕೊಂಡು ಜಾರಿಗೆ ತರಲಾಯಿತು, ಇದರ ಅಂಗವಾಗಿ ನಾವು ಪ್ರತಿವರ್ಷ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ .ನಮ್ಮ ಸಂವಿಧಾನ ಪ್ರಪಂಚದ ಅತಿ ದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ನಮ್ಮದು, ಇದನ್ನು ನಮಗೆ ಬಳುವಳಿಯಾಗಿ ನೀಡಿದು “ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್” ಅವರು ಆದರೆ ನಮ್ಮ ಪ್ರಶ್ನೆ ಏಕೆ ಜನವರಿ 26ರಂದೇ ಅದನ್ನು ಅಳವಡಿಸಿಕೊಂಡರು. ಆ ದಿನದ ವಿಶೇಷತೆ ಏನು ಎಂಬುದನ್ನು ತಿಳಿಯೋಣ ಬನ್ನಿ.

ಬ್ರಿಟಿಷರು ನಮ್ಮ ದೇಶವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಕಾಲವದು. ಅಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಗಿಯೇ ಇತ್ತು, ಇಂತಹ ಸಂದರ್ಭದಲ್ಲಿ 1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವರಾಜ್ಯ ನಿರ್ಣಯವನ್ನು ಕೈಗೊಳ್ಳಲಾಯಿತು. ಅಂದು ಲಾಹೋರ್ ಪ್ರಾಂತ್ಯವು ಭಾರತದಲ್ಲಿಯೇ ಇತ್ತು, ಇನ್ನು ವಿಭಜನೆಯಾಗಿರಲಿಲ್ಲ.

ಈ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು ಜವರಲಾಲ್ ನೆಹರು. ಈ ಲಾಹೋರ್ ಅಧಿವೇಶನದಲ್ಲಿ ಒಂದು ನಿರ್ಣಯವನ್ನು ಕೈಗೊಳ್ಳಲಾಯಿತು, ಆ ನಿರ್ಣಯ ಏನೆಂದರೆ 1930 ರ ಜನವರಿ 26 ರೊಳಗೆ ಬ್ರಿಟಿಷರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡದೇ ಹೋದರೆ, ಮುಂದೆ ಬಹುದೊಡ್ಡ ಕ್ರಾಂತಿಯಾಗುತ್ತದೆ ಎಂಬ ನಿರ್ಣಯವನ್ನು ಕೈಗೊಂಡರು. ಭಾರತವನ್ನು ಸ್ವರಾಜ್ಯವೇಂದು ಘೋಷಿಸಬೇಕು, ಸ್ವರಾಜ್ಯ ವೆಂದರೆ ಭಾರತದ ಆಡಳಿತವನ್ನು ಅದರ ಚುಕ್ಕಾಣಿಯನ್ನು ಭಾರತೀಯರಿಗೆ ಕೊಡಬೇಕೆಂಬುದು ಇದರ ನಿರ್ಣಯ ,ಆಕಸ್ಮಾತ್ ಕೊಡದೆ ಹೋದರೆ ಬಹುದೊಡ್ಡ ಕ್ರಾಂತಿಯಾಗುತ್ತದೆ, ಭಾರತವೇ ತನ್ನ ಒಕ್ಕೂಟದ ಸ್ವಾತಂತ್ರವನ್ನು ಘೋಷಿಸಿಕೊಳ್ಳುತ್ತದೇ ಎಂಬ ಘೋಷವಾಕ್ಯವನ್ನು ಮೊಳಗಿಸಿದರು.

ಆದರೆ ಯಾವುದೇ ನಿರ್ಣಯಕ್ಕೂ ಕೆಂಪು ಮೂತಿಯ ಬ್ರಿಟಿಷರು ಜಗ್ಗದಿದ್ದಾಗ 1930 ರಲ್ಲಿ ಜನವರಿ 26 ರಂದು ಜವರಲಾಲ್ ನೆಹರು ಭಾರತವನ್ನು ಸ್ವರಾಜ್ಯವೇಂದು ಘೋಷಿಸಿ, ರಾವಿ ನದಿಯ ದಡದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಇದರ ಒಂದು ನೆನಪಿನ ಸಲುವಾಗಿ ಮುಂದೆ ಸ್ವಾತಂತ್ರ ಬಂದ ನಂತರ ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಈ ದಿನವನ್ನು ಸ್ಮರಿಸಿಕೊಳ್ಳುವ ಸಲವಾಗಿ 1950 ರ ಜನವರಿ 26 ರಂದು ಸಂಪೂರ್ಣವಾಗಿ ಅಳವಡಿಸಿಕೊಂಡು ಜಾರಿಗೆ ತರಲಾಯಿತು.

1949 ನಂಬರ್ 26ರಂದು ಸಂವಿಧಾನ ರಚನಾ ಕಾರ್ಯ ಮುಗಿದಿದ್ದರೂ ಸಹ ಅದನ್ನು ಜನವರಿ 26ರಂದು ಅಳವಡಿಸಿಕೊಳ್ಳಲಾಯಿತು.

ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು ಪ್ರಪಂಚದ ಅತಿ ದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಕೈಬರಹದಲ್ಲೇ ಬರೆಯಲಾಗಿದೆ. ಸಂವಿಧಾನ ರಚನೆಗೆ ಆಗಿನ ಕಾಲದಲ್ಲೇ 6 ಕೋಟಿಗೂ ಅಧಿಕ ಹಣ ಖರ್ಚಾಗಿತ್ತು. ನಮ್ಮ ಸಂವಿಧಾನ ನಮ್ಮ ದೇಶದ ಮಹಾ ಗ್ರಂಥವಾಗಿದೆ ,ಇಂತಹ ವಿಶಿಷ್ಟ ಸಂವಿಧಾನವನ್ನು ನಮ್ಮ ದೇಶದ ವ್ಯವಸ್ಥೆಗೆ ಅಳವಡಿಸಿಕೊಂಡ ದಿನವನ್ನೇ ನಾವು ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ.

ಗಣರಾಜ್ಯೋತ್ಸವ ನಮ್ಮ ದೇಶದ ಅತಿ ದೊಡ್ಡ ರಾಷ್ಟ್ರೀಯ ಹಬ್ಬವಾಗಿದ್ದು ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ದಿನದಂದು ಎಲ್ಲಾ ರಾಜ್ಯಗಳನ್ನು, ಕಲೆಗಳನ್ನು ಹಾಗೂ ನಮ್ಮ ರಕ್ಷಣಾ ವೈಭವವನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳು ಪ್ರಸಾರ ಗೊಳ್ಳುತ್ತವೆ. ಅಷ್ಟೇ ಅಲ್ಲದೆ ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ದೇಶ-ವಿದೇಶಗಳಿಂದ ಅತ್ಯುನ್ನತ ಗೌರವ ದಲ್ಲಿರುವ ಅತಿಥಿಯನ್ನು ಸಹ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯು ಇಂದ್ರನಗರಿಯಂತೆ ಕಂಗೊಳಿಸುತ್ತಿರುತ್ತದೆ. ಇಂತಹ ಅತಿದೊಡ್ಡ ಗಣ ರಾಜ್ಯದಲ್ಲಿರುವ ನಾವು ನಮ್ಮ ದೇಶವನ್ನು ಅದರ ಇತಿಹಾಸವನ್ನು ಮತ್ತು ಪರಂಪರೆಯನ್ನು ಮರೆಯದೆ ಮುಂದುವರಿಸಿಕೊಂಡು ಹೋಗೋಣ, ದೇಶಪ್ರೇಮವನ್ನು ಮೆರೆಯೋಣ ಎಂಬುದೇ ನಮ್ಮ ಅಭಿಲಾಷೆ.

Contact us for classifieds and ads : +91 9742974234



 
error: Content is protected !!