ಕೋವಿಡ್-೧೯ ನಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳು:
ಕೋವಿಡ್-೧೯ ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿಯಾಗಿ ತಲೆಯೆತ್ತಿದೆ. ಕೊರೋನಾ ವೈರಸ್‌ನ ದಾಳಿಯಾದ ಮೇಲೆ ಚಿಕಿತ್ಸೆಗಾಗಿ ಒದ್ದಾಡುವ ಬದಲು ವೈರಸ್‌ನ ದಾಳಿಯಿಂದ ತಪ್ಪಿಸಿಕೊಳ್ಳುವುದು ಒಳಿತು.
ಉತ್ತಮ ಜೀವನಶೈಲಿಯಿಂದ ಕೊರೋನ ಅಟ್ಟಹಾಸ ತಡೆಗಟ್ಟಲು ಸಾಧ್ಯವಿದೆ. ಶುಚಿಯಾಗಿರುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರ ಜೊತೆಗೆ ಒಂದಿಷ್ಟು ಯೋಗಾಭ್ಯಾಸ ಮಾಡಿದ್ದಲ್ಲಿ ಕೊರೋನಾದಿಂದ ದೂರ ಉಳಿಯಬಹುದು.
ಯೋಗಾಭ್ಯಾಸದಿಂದ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಆತ್ಮಸ್ಥೈರ್ಯ, ಮನೋಬಲ ಹಾಗೂ ಚೈತನ್ಯ ಹೆಚ್ಚಾಗುತ್ತದೆ. ಕೊರೋನ ಪಾಸಿಟಿವ್ ಎಂದು ತಿಳಿದಾಗ ಹೆದರಿ ಮಾನಸಿಕವಾಗಿ ಕುಗ್ಗುವುದರಿಂದ ಆಮ್ಲಜನಕದ ಕೊರತೆಯುಂಟಾಗಿ, ದೇಹದಲ್ಲಿನ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ.
ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ, ಹೃದಯಾಘಾತದಂತಹ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಹೀಗಾಗಿ ಔಷದೋಪಚಾರದ ಜೊತೆಗೆ, ಯೋಗಭ್ಯಾಸ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಕೋರೋನಾ ಹಾಗೂ ಅದರಿಂದಾಗುವ ದುಷ್ಪರಿಣಾಮದಿಂದಲೂ ದೂರ ಉಳಿಯಬಹುದು.
ಯೋಗಾಭ್ಯಾಸ
- ಸಡಿಲ ವ್ಯಾಯಾಮ
- ಶಿರವನ್ನು ನಿಧಾನವಾಗಿ ಎಡ-ಬಲ, ಮೇಲೆ-ಕೆಳಗೆ ಆಡಿಸುವುದು.
- ನಿಂತಲ್ಲೇ ಈಜುಕ್ರಿಯೆ ನಡೆಸುವುದು.
- ಸೊಂಟವನ್ನು ವೃತ್ತಾಕಾರವಾಗಿ ಸುತ್ತುವುದು.
- ಕಾಲುಗಳನ್ನು ಸಡಿಲಗೊಳಿಸುವುದು.
- ಊರ್ಧ್ವನಮಸ್ಕಾರ
- ಪಾದಹಸ್ತಾಸನ
- ಅರ್ಧಚಕ್ರಾಸನ
- ತ್ರಿಕೋನಾಸನ
- ಉಷ್ಟ್ರಾಸನ
- ಪಶ್ಚಿಮೋತ್ತಾಸನ
- ವಜ್ರಾಸನ
- ಶಶಂಕಾಸನ
- ಶಿಶುಆಸನ
- ಭುಜಂಗಾಸನ
- ಅಧೋಮುಖ ಶ್ವಾನಾಸನ
- ಧನುರಾಸನ
- ಮಕರಾಸನ
- ಸೇತುಬಂಧಾಸನ
- ಸರ್ವಾಂಗಾಸನ
- ಹಲಾಸನ
- ಮತ್ಯಾಸನ
- ಪವನ ಮುಕ್ತಾಸನ
- ಶವಾಸನ
- ಪ್ರಾಣಾಯಾಮ
- ದೀರ್ಘ ಉಸಿರಾಟ
- ಕಪಾಲಭಾತಿ
- ಭಸ್ತ್ರಿಕ ಪ್ರಾಣಾಯಾಮ
- ನಾಡಿಶೋಧನ
- ಬ್ರಹ್ಮರಿ ಪ್ರಾಣಾಯಾಮ
- ಧ್ಯಾನ/ಓಂಕಾರ ಉಚ್ಚಾರಣೆ